ಬಂಟ್ಸ್ ನ್ಯೂಸ್, ಕುಂದಾಪುರ : ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಗೊಳಿಹೊಳೆ ಮಂಜುನಾಥ ನಾಯ್ಕ್ ಅವರ ಐದು ವರ್ಷದ ಮಗುವಿನ ಚಿಕಿತ್ಸೆಗೆ ಸಹಾಯಧನ ನೀಡಿದರು.
ಸಂಘದ ಮಹಾ ಪೋಷಕರಾದ ಕೈಲಾಡಿ ಚಂದ್ರಶೇಖರ ಶೆಟ್ಟಿಯವರ ಮನವಿ ಮೇರೆಗೆ ಬೈಂದೂರು ತಾಲೂಕಿನ ಗೊಳಿಹೊಳೆ ನಿವಾಸಿ ಮಂಜುನಾಥ ನಾಯ್ಕ್ ಆವರ ಐದು ವರ್ಷದ ಮಗುವಿನ ಶಸ್ತ್ರ ಚಿಕಿತ್ಸೆಗೆ ಸಂಘದ ವತಿಯಿಂದ 10,000 ರೂಪಾಯಿ ಹಣವನ್ನು ದೇಣಿಗೆ ರೂಪದಲ್ಲಿ ಸಂಘದ ಪ್ರದಾನ ಕಾರ್ಯದರ್ಶಿ ಲ. ಉದಯ ಶೆಟ್ಟಿ ಮಚ್ಚಟ್ಟು ಅವರು ಮಂಜುನಾಥ ನಾಯ್ಕ್ ಅವರಿಗೆ ನೀಡಿದರು.