ರಾಷ್ಟ್ರೀಯ ಸಮಗ್ರತೆಗೆ ಸಹೋದರತ್ವದ ಭಾವನೆಯೊಂದಿಗೆ ಬದುಕುವುದು ಅಗತ್ಯವಿದೆ : RSS ಪ್ರಚಾರಕ ಸುರೇಶ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ರಾಷ್ಟ್ರೀಯ ಸಮಗ್ರತೆಗೆ ಸಹೋದರತ್ವದ ಭಾವನೆಯೊಂದಿಗೆ ಬದುಕುವುದು ಅಗತ್ಯವಿದೆ : RSS ಪ್ರಚಾರಕ ಸುರೇಶ

Share This

ಮಂಗಳೂರು : ಶಕ್ತಿನಗರದ ಶಕ್ತಿ ಪೂರ್ವ ಪ್ರಾಥಮಿಕ ಶಾಲೆ, ಶಕ್ತಿ ರೆಸಿಡೆನ್ಸಿಯಲ್ ಶಾಲೆ ಮತ್ತು ಶಕ್ತಿ ಪದವಿ ಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ಶಕ್ತಿ ವಿದ್ಯಾಸಂಸ್ಥೆಯಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ರಾಷ್ಟೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಪ್ರಚಾರಕ ಸುರೇಶ ಆಗಮಿಸಿದರು. ನಂತರ ಮಾತನಾಡಿದ ಅವರು ನಮ್ಮ ಸ್ವಾತಂತ್ರ್ಯ ಹೋರಾಟಗಾರರು, ಸಮಾಜ ಸುಧಾರಕರ ತ್ಯಾಗ, ಬಲಿದಾನವನ್ನು ನಾವು ನೆನಪಿಸಿಕೊಳ್ಳಬೇಕು ಇದನ್ನು ಮುಂದಿನ ಪೀಳಿಗೆಗೆ ತಿಳಿಸಬೇಕೆಂದು ಹೇಳಿದರು. ರಕ್ಷಾ ಬಂಧನವನ್ನು ಆಚರಿಸುವುದರಿಂದ ನಮ್ಮ ಸಂಸ್ಕøತಿಯು ಪುನರಾವರ್ತನೆಯಾಗುತ್ತದೆ ಎಂದರು.

ಒಂದು ಸಸಿ ಅಥವಾ ಒಂದು ಹನಿ ನೀರನ್ನು ಕೂಡಾ ನಾವು ಜವಾಬ್ದಾರಿಯುತವಾಗಿ ನೋಡಿಕೊಳ್ಳಬೇಕು. ಮಾಲಿನ್ಯ ಮುಕ್ತ, ಮಾದಕದ್ರವ್ಯ ಮುಕ್ತ ಸಾಮಾಜಿಕ ಜಾಗೃತಿಯ ವಾತಾವರಣದಲ್ಲಿ ರಾಷ್ಟೀಯ ಸಮಗ್ರತೆಗೆ ಕಾರಣವಾಗುವ ಸಹೋದರತ್ವದ ಭಾವನೆಗಳೊಂದಿಗೆ ಬದುಕುವುದು ಅಗತ್ಯವಾಗಿದೆ ಎಂದು ಅವರು ತಿಳಿಸಿದರು.


ಎಬಿವಿಪಿ ರಾಜ್ಯ ಸಹ ಸಂಘಟನಾ ಕಾರ್ಯದರ್ಶಿ ಬಸವೇಶ್ ಮಾತನಾಡಿ, ರಕ್ಷಾ ಬಂಧನವು ಪ್ರೀತಿ, ಕಾಳಜಿ ಮತ್ತು ಗೌರವವನ್ನು ಹೆಚ್ಚಿಸುತ್ತದೆ. ಆದರೆ ವಿಶಾಲ ದೃಷ್ಟಿಕೋನದಲ್ಲಿ ರಕ್ಷಾ ಬಂಧನವು ಸಾರ್ವತ್ರಿಕ ಸಹೋದರತ್ವ ಮತ್ತು ಸಹೋದರಿಯರ ಅಂತರ್ಗತ ಸಂದೇಶವನ್ನು ನೀಡುತ್ತದೆ. ಶಿಕ್ಷಣ ಸಂಸ್ಥೆಗಳಲ್ಲಿ ಆಚರಿಸಲ್ಪಡುವ ರಾಖಿ ಹಬ್ಬವು ಸಾಮಾಜಿಕ ಆಧ್ಯಾತ್ಮಿಕ ಮಹತ್ವವನ್ನು ಹೊಂದಿರುವ ಸಂದೇಶವನ್ನು ನೀಡುತ್ತದೆ. ಇದು ಸಕಾರಾತ್ಮಕ ಗುಣಗಳ ಪೋಷಣೆ, ಚಿಂತನೆಯಲ್ಲಿ ಶುದ್ಧತೆ, ಮಾತು ಮತ್ತು ಕಾರ್ಯದ ಅಗತ್ಯತೆಯನ್ನು ಒತ್ತಿ ಹೇಳುತ್ತದೆ ಎಂದರು.


ಶಕ್ತಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ.ಸಿ. ನಾೈಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಬ್ಬವನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ಆಚರಣೆಗಳು ಪ್ರೀತಿಯ ಬಂಧವನ್ನು ಬಲಪಡಿಸುವುದಲ್ಲದೆ, ಕುಟುಂಬದ ಗಡಿಗಳನ್ನು ಮೀರಿದೆ. ಇದು ಒಬ್ಬರ ಸ್ವಂತ ಕುಟುಂಬದ ವ್ಯಾಪ್ತಿಯನ್ನು ಮೀರಿ ಇಡೀ ಜಗತ್ತು ಒಂದು ಕುಟುಂಬವಾಗಿ ವಿಸ್ತರಿಸಲು ಸಹಾಯ ಮಾಡುತ್ತದೆ. ಕಾರ್ಯಕ್ರಮದಲ್ಲಿ ಸಹದ್ಯೋಗಿಗಳು ಪರಸ್ಪರ ರಾಖಿ ಕಟ್ಟಿ ರಕ್ಷಾಬಂಧನವನ್ನು ಆಚರಿಸಿದರು.


ಸಂದರ್ಭದಲ್ಲಿ ವೇದಿಕೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಟ್ರಸ್ಟಿ, ಶಕ್ತಿ ವಿದ್ಯಾ ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ಪೂ ಕಾಲೇಜು ಪ್ರಾಂಶುಪಾಲರಾದ ಪ್ರೋ.ಟಿ.ರಾಜರಾಮ್ ರಾವ್, ಶಕ್ತಿ ರೆಸಿಡೆನ್ಸಿಯಲ್ ಶಾಲೆ ಪ್ರಾಂಶುಪಾಲೆ ವಿದ್ಯಾ. ಜಿ. ಕಾಮತ್ ಉಪಸ್ಥಿತರಿದ್ದರು.


ಪ್ರಧಾನ ಸಲಹೆಗಾರ ರಮೇಶ್.ಕೆ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಹಿಂದಿ ಶಿಕ್ಷಕಿ ಪ್ರೇಮಲತಾ.ಪಿ ರಕ್ಷಾ ಬಂಧನ ಸಂದೇಶ ವಾಚಿಸಿದರು. ಕನ್ನಡ ಶಿಕ್ಷಕಿ ರೇಖಾ ಡಿಕೋಸ್ತಾ ವಂದಿಸಿದರು. ಕನ್ನಡ ಶಿಕ್ಷಕ ಶರಣಪ್ಪ ಕಾರ್ಯಕ್ರಮ ನಿರೂಪಿಸಿದರು.

Pages