60 ವರ್ಷಗಳಿಂದ ಪಾಳು ಬಿದ್ದಿದ್ದ ಕುಲಶೇಖರ ದೇವರ ಕೆರೆ : 50 ಲಕ್ಷ ವೆಚ್ಚದಲ್ಲಿ ಜೀರ್ಣೋದ್ಧಾರ ಅಭಿವೃದ್ದಿ ಕಾರ್ಯ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

60 ವರ್ಷಗಳಿಂದ ಪಾಳು ಬಿದ್ದಿದ್ದ ಕುಲಶೇಖರ ದೇವರ ಕೆರೆ : 50 ಲಕ್ಷ ವೆಚ್ಚದಲ್ಲಿ ಜೀರ್ಣೋದ್ಧಾರ ಅಭಿವೃದ್ದಿ ಕಾರ್ಯ

Share This

ಮಂಗಳೂರು: 60 ವರ್ಷಗಳಿಂದ ಪಾಳುಬಿದ್ದು ಜೀರ್ಣಾವಸ್ಥೆಯಲ್ಲಿದ್ದ ಕುಲಶೇಖರ ಕೆರೆಯ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಭೂಮಿಪೂಜೆ ನೆರವೇರಿಸಿದರು.

ವಿಚಾರದಲ್ಲಿ ಮಾತನಾಡಿದ ಶಾಸಕ ಕಾಮತ್, ಒಂದು ಕಾಲದಲ್ಲಿ ಧಾರ್ಮಿಕ ಭಾವನೆಗಳೊಂದಿಗೆ ಬೆಸೆದುಕೊಂಡಿದ್ದ ಕುಲಶೇಖರ ಕೆರೆಯು ಇಂದು ಜೀರ್ಣಾವಸ್ಥೆಯಲ್ಲಿದೆ. ಹಿಂದೆ ಸಮೀಪದ ವೀರ ನಾರಾಯಣ ದೇವಸ್ಥಾನದ ದೇವರು ಜಳಕಕ್ಕೆ ಕೆರೆಗೆ ಬರುವ ಸಂಪ್ರದಾಯವಿತ್ತು ಎಂದು ಹಿರಿಯರು ಹೇಳುತ್ತಾರೆ. ಸರಿ ಸುಮಾರು 60 ವರ್ಷಗಳಿಂದ ಪಾಳು ಬಿದ್ದು ಜೀರ್ಮಾವಸ್ಥೆ ತಲುಪಿದ್ದು ಅಭಿವೃದ್ಧಿಪಡಿಸುವ ಚಿಂತನೆಯೊಂದಿಗೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 50 ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದರು.


ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರವಿಶಂಕರ್ ಮಿಜಾರ್ ಮಾತನಾಡಿ, ಮಂಗಳೂರು ನಗರದಲ್ಲಿ ಅನೇಕ ಕೆರೆಗಳು ನಾಶವಾಗಿ ಹೋಗಿದ್ದು ಕೆರೆಗಳ ಪುನರುಜ್ಜೀವನಕ್ಕೆ ಶಾಸಕ ವೇದವ್ಯಾಸ್ ಕಾಮತ್ ಅವರು ಯೋಜನೆ ಹಾಕಿಕೊಂಡಿದ್ದಾರೆ. ಈಗಾಗಲೇ ವಿವಿಧ ಕೆರೆಗಳ ಅಭಿವೃದ್ಧಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಕೇಳಿಕೊಂಡ ಪ್ರಕಾರ ಅನುದಾನ ಬಿಡುಗಡೆಗೊಳಿಸಲಾಗಿದ್ದು ಕೆರೆಯ ಸಂಪೂರ್ಣ ಅಭಿವೃದ್ಧಿಗೆ ಅನುದಾನ ಒದಗಿಸಲಾಗುವುದು ಎಂದು ಹೇಳಿದರು.


ವೇಳೆ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಶ್ರೀ ಪ್ರೇಮಾನಂದ ಶೆಟ್ಟಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ರವಿಶಂಕರ್ ಮಿಜಾರ್, ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶ್ರೀ ಸಂದೀಪ್ ಗರೋಡಿ, ಶ್ರೀಮತಿಲೀಲಾವತಿ ಪ್ರಕಾಶ್, ಪಾಲಿಕೆ ಮುಖ್ಯ ಸಚೇತಕರಾದ ಶ್ರೀ ಸುಧೀರ್ ಶೆಟ್ಟಿ ಕಣ್ಣೂರು, ಪಾಲಿಕೆ ಸದಸ್ಯರಾದ ಶ್ರೀ ಭಾಸ್ಕರ್ ಮೈೂಯ್ಲಿ, ಪಾಲಿಕೆ ನಾಮನಿರ್ದೇಶಿತ ಸದಸ್ಯರಾದ ಭಾಸ್ಕರ್ ಚಂದ್ರ ಶೆಟ್ಟಿ, ಬಿಜೆಪಿ ಮುಖಂಡರಾದ ವಿಜಯ ಕುಮಾರ್ ಶೆಟ್ಟಿ, ಅಜಯ್ ಕುಲಶೇಖರ, ಅನಿಲ್ ರಾವ್, ಅಶ್ವಿನ್ ಪೂಜಾರಿ, ಸುಶಾಂತ್ ಕೋಟಿಮುರ, ವಿಶ್ವಜೀತ್, ಯೋಗಿಶ್ ಚೌಕಿ, ಸಂದೀಪ್ ಮೇಲ್ತೋಟ, ನಾಗರಾಜ ಮಂಗಳ ನಗರ, .ಪಿ ಪ್ರಭು, ರಾಜೀವ್, ದಿನೇಶ್, ಯೋಗಿಶ್ ಆಚಾರ್ಯ, ಯಶವಂತ ಡೈರಿ, ಗಣೇಶ್ ಆಚಾರ್ಯ, ಅರುಣ್ ರಾವ್, ವಸಂತ್ ಜೆ ಪೂಜಾರಿ, ಹಿರಿಯರಾದ ನರಸಿಂಹ ರಾವ್, ನಿವೃತ್ತ ಕಂದಾಯ ಅಧಿಕಾರಿ ಪ್ರಕಾಶ್ಚಂದ್ರ, ಜಿ ಭಾಸ್ಕರ್ ಪ್ರಭು, ಆಲ್ವಿನ್, ಕಸ್ತೂರಿ, ಗಣೇಶ್ ಪ್ರಭು, ಅನುರಾಧ ಪ್ರಭು, ಅರುಂಧತಿ ನಾಯಕ್, ಗಣೇಶ್ ಹೆಬ್ಬಾರ್, ಉದಯ್ ಪ್ರಭು, ಪುಷ್ಪರಾಜ್, ಅಶೋಕ್ ರಾಜ್, ನಾಗೇಶ್, ಶಿವಾನಂದ, ನಾಗೇಶ್ ಚೌಕಿ, ವಿಜಯ, ಬೇಬಿ ಕುಮಾರ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು, ಬಿಜೆಪಿ ಮುಖಂಡರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Pages