ಮಂಗಳೂರು : ಕಟೀಲು ಮೇಳದ ಹಿರಿಯ ಭಾಗವತ ಬೊಟ್ಟುಕೆರೆ ಪುರುಷೋತ್ತಮ ಪೂಂಜ (68) ಅವರು ಶನಿವಾರ ನಿಧನರಾದರು.

ಖ್ಯಾತ ಯಕ್ಷಗಾನ
ಪ್ರಸಂಗ ಕೃರ್ತರಾಗಿದ್ದ ಪೂಂಜರವರು ‘ಅಭಿನವ ವಾಲ್ಮೀಕಿ’ ಬಿರುದಿಗೆ ಪಾತ್ರರಾಗಿದ್ದರು. 35ಕ್ಕೂ ಅಧಿಕ
ಪ್ರಸಂಗಗಳನ್ನು ರಚಿಸಿ ಯಕ್ಷಗಾನ ಕ್ಷೇತ್ರಕ್ಕೆ ಅಪೂರ್ವ ಕೊಡುಗೆ ನೀಡಿದ್ದರು. ಬಿ.ಎಸ್ಸಿ ಪದವೀಧರರಾಗಿದ್ದ
ಪೂಂಜರವರು ಯಕ್ಷಗಾನ ಕ್ಷೇತ್ರದಲ್ಲಿ ಭಾಗವತಿಕೆ ಮಾತ್ರವಲ್ಲದೆ ಉತ್ತಮ ಚಂಡೆ, ಮದ್ದಳೆವಾದಕರಾಗಿಯೂ
ಗಮನ ಸೆಳೆದಿದ್ದರು.