ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರಿಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನಿಂದ ನುಡಿನಮನ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರಿಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನಿಂದ ನುಡಿನಮನ

Share This

ಮಂಗಳೂರು : ಖ್ಯಾತ ಯಕ್ಷಗಾನ ಭಾಗವತ, ಪ್ರಸಂಗಕರ್ತ, ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರಿಗೆ ನುಡಿನಮನ ಕಾರ್ಯಕ್ರಮ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ಕಂಕನಾಡಿ ಗರೋಡಿ ಬಳಿಯ ಅಟ್ಟಣೆ ಹೊಟೇಲ ಸಭಾಂಗಣದಲ್ಲಿ ನೆರವೇರಿತು.

ಖ್ಯಾತ ವಿದ್ವಾಂಸ, ಅರ್ಥಧಾರಿ ಪ್ರಭಾಕರ ಜೋಷಿ ಮಾತನಾಡಿ ಯಕ್ಷಗಾನದ ಸವ್ಯಸಾಚಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಎಲ್ಲಾ ವಿಭಾಗದಲ್ಲೂ ಸರ್ವಾಂಗ ಸಂಪನ್ನ ಕಲಾವಿದರಾಗಿದ್ದರು. ಎಲ್ಲಾ ಪ್ರಕಾರಗಳಲ್ಲೂ  ಪರಿಣತಿ  ಹೊಂದಿದವರು. ಪ್ರಸಂಗ ಕರ್ತನಾಗಿ,  ಭಾಗವತನಾಗಿ, ವೇಷಧಾರಿಯಾಗಿ ಯಕ್ಷಗಾನದ ಬೆಳವಣಿಗೆಗೆ ಮಹತ್ತರ ಪಾತ್ರ ಒದಗಿಸಿದವರು. ಸಂಪ್ರದಾಯ ಬಲ್ಲವನಿಗೆ ಅವರು ಅತ್ಯತ್ತಮ ಭಾಗವತ ಎಂದವರು ತಿಳಿಸಿದರು. ಕಲೆಯನ್ನು ವ್ಯವಸಾಯವಾಗಿ ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡು ಮೆರೆದವರು.  ಅವರು 30ಕ್ಕೂ ಮಿಕ್ಕಿ ಪ್ರಸಂಗವನ್ನು ರಚಿಸಿದ್ದಾರೆ. ಮಾನಿಷಾದ ಇತಿಹಾಸ ನಿರ್ಮಿಸಿದೆ ಎಂದರು.

ಪೂಂಜಾರವರು ಯಕ್ಷಗಾನಕ್ಕೆ ಹೊಸ ಬೆಳಕನ್ನು ನೀಡಿದ ಭಾಗವತರು. ಹೊಸ ಕತೆಗೆ ಆಶಯವನ್ನು ಕೊಟ್ಟವರು. ಆದರೆ ಅವರೊಬ್ಬ ದೆಸೆ ಇಲ್ಲದ ದಶಾವತಾರಿ. ಸ್ವಾಭಿಮಾನಿ, ಸೌಮ್ಯ ಸ್ವಭಾವದಿಂದಲೇ ಅವರಿಗೆ ಯೋಗ್ಯತೆ ಇದ್ದರೂ ಯೋಗ ಒದಗಿ ಬಾರದಿರುವುದು ವಿಪರ್ಯಾಸ. ಅವರ ಸಾವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರ ಬಗ್ಗೆ ಪರಿಚಯ ಮಾಡುವ ಅವರ ಸಾಧನೆಯನ್ನು ವಿಸ್ತರಿಸುವ  ಕೆಲಸ ಆಗಬೇಕಾಗಿದೆ. ನಿಟ್ಟಿನಲ್ಲಿ ಯಕ್ಷಧ್ರುವ  ಪಟ್ಲ ಫೌಂಢೇಶನ್ ಸಂಸ್ಥೆ ಅವರ ಪದ್ಯ ರಚನೆಯ ಎರಡು ಪುಸ್ತಕಗಳನ್ನು ಹೊರ ತಂದಿರುವುದು ಪೂಂಜರ ನೆನಪನ್ನು ಶಾಶ್ವತವಾಗಿ ಉಳಿಯುವಂತೆ ಮಾಡಿದೆ. ಅವರು ಮರು ಹುಟ್ಟು ಪಡೆಯಲಿ ಎಂದು ಪ್ರಭಾಕರ ಜೋಷಿ ನುಡಿನಮನ ಸಲ್ಲಿಸಿದರು.


ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಅನಾರೋಗ್ಯಕ್ಕೆ ತುತ್ತಾದಾಗ ಅವರನ್ನು ಸಮಾಜ ಬದುಕಿಸಲು ಪ್ರಯತ್ನಿಸಿತು. ಅನಾರೋಗ್ಯದ ಮಧ್ಯೆಯೂ ಅವರು ಬರೆಯುವುದನ್ನು ನಿಲ್ಲಿಸಿರಲಿಲ್ಲ. ತುಳು-ಕನ್ನಡ ಭಾಷೆಗೊಂದು ಸೌಂದರ್ಯ ಮೆರಗು ನೀಡಿದವರು. ಮನೆಯನ್ನೇ ಗುರುಕುಲವನ್ನಾಗಿಸಿದ್ದರು. ಅವರ ನಿಧನ ಸಮಾಜ ಮತ್ತು ಯಕ್ಷಗಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಮಾಜೀ ಸದಸ್ಯ ಪ್ರೊಫೆಸರ್ ಭಾಸ್ಕರ ರೈ ಕುಕ್ಕುವಳ್ಳಿ ತಿಳಿಸಿದರು.


ಪಟ್ಲ ಫೌಂಢೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ ಪುರುಷೋತ್ತಮ ಪೂಂಜಾರವರು ನನಗೆ ಗುರು ಸ್ಥಾನದಲ್ಲಿದ್ದವರು. ಪೂಂಜಾರಿಗೆ ಸರಿ ಸಾಟಿಯಿಲ್ಲದ ಭಾಗವತರಿಲ್ಲ. ಒಂದು ಅದ್ಭುತ ಸಂಪತ್ತನ್ನು ನಾವು ಕಳೆದುಕೊಂಡಿದ್ದೇವೆ ಅವರ ಯೋಗ್ಯತೆಗೆ, ವಿದ್ಯೆಗೆ ವಿದ್ವಾಂಸವನ್ನು ಗುರುತಿಸುವ ಕೆಲಸ ಆಗಲಿಲ್ಲ. ಆದರೆ ಪಟ್ಲ ಫೌಂಢೇಶನ್ ಟ್ರಸ್ಟ್ ಅವರ ಕೃತಿಗಳನ್ನು ಪ್ರಕಟಿಸಿದ್ದು,  ನಮ್ಮಲ್ಲಿ ಧನ್ಯತಾ ಭಾವನೆ ಮೂಡಿದೆ ಎಂದರು. ಯಕ್ಷಗಾನ ಕ್ಷೇತ್ರ ಮತ್ತು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ. ನಮ್ಮ ಸಂಸ್ಕೃತಿ, ಜನಪದೀಯ, ಆಚಾರ-ವಿಚಾರಗಳ ಕುರಿತು ಅವರು ಬಹಳಷ್ಟು ಅಧ್ಯಯನ  ಮಾಡಿದ್ದರು ಎಂದು ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು.


ಪಟ್ಲ ಫೌಂಢೇಶನ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ರವಿಚಂದ್ರ ಶೆಟ್ಟಿ ಅಶೋಕ ನಗರ, ಜಗದೀಶ್ ಶೆಟ್ಟಿ ಕಾರ್ಸ್ಟ್ರೀಟ್,  ಪ್ರದೀಪ್ ಆಳ್ವ ಕದ್ರಿ, ಕೃಷ್ಣ ಶೆಟ್ಟಿ ತಾರೇಮಾರ್, ಸುಬ್ರಹ್ಮಣ್ಯ ಭಟ್, ಗೋಪಿನಾಥ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ ಮೊದಲಾದವರು ಉಪಸ್ಥಿತರಿದ್ದರು.

Pages