ಬಂಟರ ಸಂಘ ಮುಂಬಯಿ ವಸಾಯಿ, ದಾಹಣು ವತಿಯಿಂದ ವೃದ್ಧಾಶ್ರಮದಲ್ಲಿ ‘ಅಟಿಡೊಂಜಿ ದಿನ’ ಸಂಭ್ರಮ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಬಂಟರ ಸಂಘ ಮುಂಬಯಿ ವಸಾಯಿ, ದಾಹಣು ವತಿಯಿಂದ ವೃದ್ಧಾಶ್ರಮದಲ್ಲಿ ‘ಅಟಿಡೊಂಜಿ ದಿನ’ ಸಂಭ್ರಮ

Share This

ಬಂಟ್ಸ್ ನ್ಯೂಸ್, ವಸಾಯಿ: ಬಂಟರ ಸಂಘ ಮುಂಬಯಿ ವಸಾಯಿ. ದಾಹಣು ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ ಉಷಾ ಶ್ರೀಧರ್ ಶೆಟ್ಟಿ ಕರ್ನಿರೆ ನೇತೃತ್ವದಲ್ಲಿ ಮಹಿಳಾ ವಿಭಾಗ  ಪಾಲಘಾರ್ ಜೆಲ್ಲೆಯ ಉಷಗವ್ ನಾ ಕಾರ್ಡಿನಲ್ ಗ್ರಾಷಿಯಸ್ ಇನ್ಸಿಯೂಟ್ಯೂಟ್ ವೃದ್ದಾಶ್ರಮ ಕ್ಕೆ ಭೇಟಿ ನೀಡಿ, ಅಟಿಡೊಂಜಿ ದಿನ ಕಾರ್ಯಕ್ರಮವನ್ನು ವಿಶೇಷ ರೀತಿಯಲ್ಲಿ ಆಚರಿಸಿತು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಂಟರ ಸಂಘ ಮುಂಬಯಿ ವೆಸ್ಟೆರ್ನ್ ವಿಭಾಗದ ಸಮನ್ವಕರಾದ ಶಶಿಧರ. ಕೆ. ಶೆಟ್ಟಿ ಇನ್ನಂಜೆಯವರು ಮಾತನಾಡಿ, ಬಹಳ ಅರ್ಥಪೂರ್ಣವಾದ ಕಾರ್ಯಕ್ರಮ ಇತರರಿಗೆ ಮಾದರಿಯಾಗಿದೆ. ಅನಾಥರಾಗಿರುವ ವೃದ್ಧೆಯ ರಿಗೆ ಸಂತೋಷ ಮತ್ತು ಪ್ರೀತಿ ಕೊಡುವ ಮೂಲಕ ತಲೆತಾಳಂತ್ತರ ದಿಂದ ಬಂದ ಸಂಪ್ರದಾಯ ಉಳಿಸಿ ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬೇಕು. ನಿಟ್ಟಿನಲ್ಲಿ ಮಹಿಳಾ ವಿಭಾಗ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.


ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷರು ಹರೀಶ್. ಪಾಂಡು ಶೆಟ್ಟಿ ಯವರು ಮಹಿಳಾ ವಿಭಾಗ ನಮ್ಮ ಸಂಪ್ರದಾಯವನ್ನು ಉಳಿಸುವ ಮೂಲಕ ಹಿರಿಯರನ್ನು ಗೌರವಿಸುವ ಅವರ ಆಸೆ-ಆಕಾಂಕ್ಷೆಗಳಿಗೆ ಸ್ಪಂದಿಸುವಂತ ಆಗಿದೆ .ನಾವೆಲ್ಲ ಕೂಡಿ ಒಂದೇ ಮನೆಯವರ ತರಹ ವೃದ್ದಾಶ್ರಮಕ್ಕೆ ಭೇಟಿ ನೀಡಿರುದು ಒಂದು ಖುಷಿಯ ಸಂಗತಿ ಮಹಿಳಾ ವಿಭಾಗದ ವತಿಯಿಂದ ಇನ್ನು ಹೆಚ್ಚಿನ ಕಾರ್ಯಕ್ರಮ ನಡೆಯಲಿ ನನ್ನ ಸಂಪೂರ್ಣ ಬೆಂಬಲವಿದೆ ಎಂದರು.


ವಸಾಯಿ ದಾಹಣು ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಉಷಾ ಶ್ರೀಧರ್ ಶೆಟ್ಟಿ ಕರ್ನಿರೆ ಯವರು ಮಾತನಾಡಿ, ಸಮಾಜ ಬಾಂಧವರ ಕೊಡುವಿಕೆಯಿಂದ ಉತ್ತಮ್ಮ ರೀತಿಯಲ್ಲಿಇಂದಿನ ಕಾರ್ಯಕ್ರಮ ನಡೆದಿದೆ. ವೃದ್ಧರ ಮತ್ತು ಬುದ್ಧಿ  ಮಂದದವರೊಂದಿಗೆ ಕಳೆದ ಸಂತೋಷಗಳು. ನಾವು ಆಯೋಜಿಸಿರುವ ಕಾರ್ಯಕ್ರಮ ಸಾರ್ಥಕತೆಯನ್ನು ತುಂಬಿದೆ. ಜನಪರ ಸಂಸ್ಕೃತಿಯಿಂದ ದೇಶ ಸಮೃದ್ದವಾಗಿದೆ, ನಮ್ಮ ನಾಡಿನ ಸಂಸ್ಕೃತಿ ಮೂಲಕ ದೇಶದ ಅಖಂಡತೆ ಉಳಿಯಬೇಕು ಎಂದರು.


ಬಂಟರ ಸಂಘ ಮುಂಬಯಿ ವೆಸ್ಟೆರ್ನ್ ವಿಭಾಗದ ಸಮನ್ವಕರಾದ ಶಶಿಧರ. ಕೆ. ಶೆಟ್ಟಿ..ಇನ್ನಂಜೆ, ಪ್ರಾದೇಶಿಕ ಸಮಿತಿಯ ಸಂಚಾಲಕ ಜಯಂತ್. ಆರ್. ಪಕ್ಕಳ.ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಹರೀಶ್. ಪಾಂಡು. ಶೆಟ್ಟಿ ,ಉಪಕಾರ್ಯಧ್ಯಕ್ಷರಾದ.ಪ್ರವೀಣ್ ಶೆಟ್ಟಿ ಕಣಂಜಾರ್,  ಕಾರ್ಯದರ್ಶಿ ಜಗನಾಥ. ಡಿ. ಶೆಟ್ಟಿ ಪಳ್ಳಿ. ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಉಷಾ ಶ್ರೀಧರ್ ಶೆಟ್ಟಿ. ಸಲಹೆ ಗಾರ ಸಮಿತಿಯ ಕಾರ್ಯಧ್ಯಕ್ಷೆ ಶಶಿಕಲಾ ಶಶಿಧರ ಶೆಟ್ಟಿ.ಉಪಕಾರ್ಯಧ್ಯಕ್ಷೆ ಉಮಾ ಸತೀಶ್ ಶೆಟ್ಟಿ. ಮಹಿಳಾವಿಭಾಗದ ಕಾರ್ಯದರ್ಶಿ. ಸಂಧ್ಯಾ ಶೆಟ್ಟಿ. ಕೋಶಾಧಿಕಾರಿ ವೀಣಾ ಶೆಟ್ಟಿ ಜೊತೆ ಕಾರ್ಯದರ್ಶಿ ಅರುಣಾ ಶೆಟ್ಟಿ ಯುವ ವಿಭಾಗದ ಕಾರ್ಯಧ್ಯಕ್ಷ ಪ್ರಖ್ಯಾತ್ ಶೆಟ್ಟಿ.. ಕಾರ್ಯದರ್ಶಿ ಶ್ರದ್ದಾ ಶೆಟ್ಟಿ ಯುವ ವಿಭಾಗದ ಉಪಕಾರ್ಯಧ್ಯಕ್ಷ ವಿನೀತ್ ಶೆಟ್ಟಿ ಮೊದಲಾದವರು ಉಪಸ್ಥಿತದ್ದರು.


ಬಂಟರ ಸಂಘ ಮುಂಬಯಿ ವಸಾಯಿ, ದಾಹಣು ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಮಹಿಳೆಯರು ವಿವಿಧ ಬಗೆಯ ಅಡುಗೆಯೊಂದಿಗೆ ಅಟಿಡೊಂಜಿ ದಿನ ಆಚರಣೆಯನ್ನು ವೃದ್ಧಾಶ್ರಮದಲ್ಲಿ ವೃದ್ಧರೊಂದಿಗೆ ಆಚರಿಸಿ ಸಂಭ್ರಮವನ್ನು ಹಂಚಿಕೊಂಡರು.

Pages