ಮಂಗಳೂರು: ಕೆಲವು ದಿನಗಳ ಹಿಂದಷ್ಟೇ ನಗರದ ಖಾಸಗಿ ಆಸ್ಪತ್ರೆಯಲ್ಲಿ ಇರಿಸಲಾಗಿದ್ದ ಹರೀಶ್ ಶೆಟ್ಟಿ ಅವರ ಮೃತದೇಹದಿಂದ ಕಾಣಿಯಾಗಿದ್ದ ವಜ್ರದ ರಿಂಗ್ ಪತ್ತೆಯಾಗಿದ್ದು ಆಸ್ಪತ್ರೆಯ ಭದ್ರತಾ ಸಿಬ್ಬಂದಿ ತಪ್ಪೊಪ್ಪಿಕೊಂಡು ವಜ್ರದ ರಿಂಗ್ ಮನೆಯವರಿಗೆ ಮರಳಿಸಿದ್ದಾರೆ.
ಹರೀಶ್ ಶೆಟ್ಟಿ ಅವರು
ಹೃದಯಘಾತವಾಗಿ ಗುರುವಾರ ನಿಧನರಾಗಿದ್ದು ಅವರ ಮೃತದೇಹವನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ಇರಿಸಲಾಗಿತ್ತು.
ಈ ಸಂದರ್ಭ ಅವರ ಚಿನ್ನದ ಸರವನ್ನು ತೆಗೆದಿದ್ದು, ಕಿವಿಯಲ್ಲಿರುವ ವಜ್ರದ ರಿಂಗ್ ಅಂತ್ಯಕ್ರಿಯೆಯ ಸಂದರ್ಭ
ತೆಗೆಯುವುದಾಗಿ ಅಲ್ಲಿನ ಭದ್ರತಾ ಸಿಬ್ಬಂದಿಗೆ ಈ ಬಗ್ಗೆ ತಿಳಿಸಿದ್ದರು. ಮರುದಿನ ಶವಗಾರದಿಂದ ಮೃತದೇಹ ಪಡೆಯುವ ಸಂದರ್ಭ ಕಿವಿಯಲ್ಲಿನ ರಿಂಗ್ ನಾಪತ್ತೆಯಾಗಿ ಸುದ್ದಿಯಾಗಿತ್ತು.
ಈ ಬಗ್ಗೆ ಹರೀಶ್
ಶೆಟ್ಟಿ ಸ್ನೇಹಿತರು ಕದ್ರಿ ಪೊಲೀಸರಿಗೆ ತಿಳಿಸಿದ್ದು ಅವರು ತನಿಖೆ ಕೈಗೊಂಡಾಗ ಸತ್ಯಾಂಶ ಬೆಳಕಿಗೆ
ಬಂದಿವೆ. ಆಸ್ಪತ್ರೆಯ ಸಿಸಿ ಟಿವಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಆಸ್ಪತ್ರೆಯ ಭದ್ರತಾ ಸಿಬ್ಬಂದಿ
ವಜ್ರದ ರಿಂಗ್ ಕಳವುಗೈದಿರುವುದು ಪತ್ತೆಯಾಗಿದೆ. ನಂತರ ತಪ್ಪೊಪ್ಪಿಕೊಂಡ ಭದ್ರತಾ ಸಿಬ್ಬಂದಿ ಹರೀಶ್
ಅವರ ಮನೆಯವರಿಗೆ ರಿಂಗ್ ಮರಳಿಸಿದ್ದಾನೆ.