ಉಡುಪಿ : 2016ರಿಂದ ಉಡುಪಿ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಯೋಗೀಶ್. ವಿ ಶೆಟ್ಟಿ ಅವರು ಜಿಲ್ಲಾಧ್ಯಕ್ಷರನ್ನಾಗಿ 2ನೇ ಬಾರಿ ಪುನರಾಯ್ಕೆಯಾಗಿದ್ದಾರೆ.
ಮಾಜಿ ಪ್ರಧಾನಮಂತ್ರಿ
ಗೌರವಾನ್ವಿತ ಎಚ್.ಡಿ ದೇವೇಗೌಡ,ಮತ್ತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ, ಆತ್ಮೀಯತೆ
ಮತ್ತು ವಿಶ್ವಾಸದ ನಾಯಕನಾಗಿ ಹೊರಹೊಮ್ಮಿದ, ಅವರ ಶಿಫಾರಸು ಮತ್ತು ರಾಜ್ಯಾಧ್ಯಕ್ಷರಾದ ಹೆಚ್ ಕೆ ಕುಮಾರಸ್ವಾಮಿ,
ವೀಕ್ಷಕರ ಕಮಿಟಿಯ ಮುಖ್ಯ ಸಂಚಾಲಕರು ಮತ್ತು ಕಮಿಟಿ ಸದಸ್ಯರ ಶಿಫಾರಸ್ಸಿನ ಮೇರೆಗೆ ಕಳೆದ 27 ವರ್ಷದಿಂದ
ಜನತಾ ಪರಿವಾರದಲ್ಲಿ ಗುರುತಿಸಿಕೊಂಡು, 2016ರಿಂದ ಉಡುಪಿ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಸೇವೆ
ಸಲ್ಲಿಸುತ್ತಿರುವ ಯೋಗೀಶ ವಿ ಶೆಟ್ಟಿ ಯವರನ್ನು ಉಡುಪಿ ಜಿಲ್ಲಾಧ್ಯಕ್ಷರನ್ನಾಗಿ 2ನೇ ಬಾರಿ ಪುನರಾಯ್ಕೆ ಮಾಡಿರುತ್ತಾರೆ ಎಂದು ರಾಜ್ಯಾಧ್ಯಕ್ಷರು ಆದೇಶ
ಹೊರಡಿಸಿರುತ್ತಾರೆ.
ಯೋಗೀಶ್ ವಿ ಶೆಟ್ಟಿ
ಅವರು ಮುಂಬೈಯ ನಾಲಸಾಪುರದ ಹೋಟೆಲ್ ಉದ್ಯಮಿಗಳಾದ ರಮೇಶ್ ವಿ ಶೆಟ್ಟಿ ಕಾಪು ಮತ್ತು ಮೋಹನ್ ವಿ ಶೆಟ್ಟಿ
ಕಾಪು ಅವರ ಸಹೋದರ.