ಕುಂದಾಪುರ : ಯಾರನ್ನು ನಂಬದಿದ್ರು ಸ್ನೇಹಿತನ ನಂಬು ಅನ್ನುತ್ತೆ ಸಮಾಜ, ಕಷ್ಟ ಕಾಲದಲ್ಲಿ ಕುಟುಂಬ, ಬಂಧು ಬಳಗ ಕೈ ಬಿಟ್ರು ಸ್ನೇಹಿತ ಕೈ ಹಿಡಿಯುತ್ತಾನೆ ಅನ್ನೋ ಮಾತಿದೆ. ಆದ್ರೇ ಅಂತಹ ನಂಬಿಕಸ್ಥ ಸ್ನೇಹಿತನೇ ಕುತ್ತಿಗೆ ಇರಿದು ಬಿಟ್ರೆ. ಇಂತಹ ಒಂದು ವಿಲಕ್ಷಣ ಘಟನೆಗೆ ಜು.31 ಕುಂದಾಪುರ ತಾಲೂಕಿನ ಕಾಳಾವರ ಗ್ರಾಮದಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ.
ನಿನ್ನೆ ನಡೆದ ಕಾಳಾವಾರ
ಗ್ರಾಮದ ಡ್ರೀಮ್ ಫೈನಾನ್ಸ್ ಅಜೇಂದ್ರ ಶೆಟ್ಟಿ ಅವರ ಕೊಲೆಯನ್ನು ಅವರ ಸ್ನೇಹಿತ ಫೈನಾನ್ಸ್ ಪಾಲುದಾರ
ಅನೂಪ್ ಶೆಟ್ಟಿಯೇ ಮಾಡಿರುವುದು ಬೆಳಕಿಗೆ ಬಂದಿದ್ದು ಆತನ ಬಂಧನವಾಗಿದೆ. ಕೇವಲ ಹಣದ ವಿಚಾರಕ್ಕೆ ತನ್ನ
ಸ್ನೇಹಿತನನ್ನೇ ಉಪಾಯವಾಗಿ ಹತ್ಯೆ ಮಾಡಿದ್ದು ನಿಜಕ್ಕೂ ಕುಂದಾಪುರವನ್ನು ತಲ್ಲಣಗೊಳಿಸಿದೆ. ಸ್ನೇಹ,
ಸ್ನೇಹಿತ ಅಂತ ಜೀವ ನೀಡೊ ಸಿದ್ದರಿರೋ ಜನರಿಗೆ ಈ ಘಟನೆ ಶಾಕ್ ನೀಡಿದೆ.
ಕುಂದಾಪುರ ಅಂದ್ರೇ
ಅದೊಂದು ಸ್ನೇಹ ವಿಶ್ವಾಸಕ್ಕೆ ಪಾತ್ರವಾದ ಊರು. ಇಲ್ಲಿನ ಹೆಚ್ಚಿನ ಉದ್ದಿಮೆ, ವ್ಯವಹಾರಗಳು ಹಣಕ್ಕಿಂತ
ಸ್ನೇಹ ವಿಶ್ವಾಸಕ್ಕೆ ಬೆಲೆ ಕೊಟ್ಟಿದು ಹೆಚ್ಚು. ಅಂತಹ ಊರಲ್ಲಿ ಸ್ನೇಹಿತನ ಬೆನ್ನಿಗೆ ಚೂರಿ ಹಾಕಿದ
ಇಂತಹ ಘಟನೆ ತಮ್ಮ ಸ್ನೇಹಿತರ ನಿಷ್ಠೆ, ವಿಶ್ವಾಸವನ್ನು ಪ್ರಶ್ನಿಸುವಂತೆ ಮಾಡಿದೆ.
ಒಂದು ಘಟನೆ ನಡೆದ
ಮಾತ್ರಕ್ಕೆ ಸ್ನೇಹದ ಬಗ್ಗೆ ಅಪನಂಬಿಕೆ ಹುಟ್ಟುದೋ ಸಹಜ, ಸ್ನೇಹವಿರಲೀ ಆದ್ರೇ ಅತಿಯಾದ ನಂಬಿಕೆ ಬೇಡವೆಂಬ
ಅಭಿಪ್ರಾಯವು ವ್ಯಕ್ತವಾಗುತ್ತಿದೆ. ಸಾಮಾಜಿಕವಾಗಿ ಸ್ನೇಹ ಜೀವಿಯಾಗಿ, ಪರೋಪಕಾರಿಯಾಗಿದ್ದ ಅಜೇಂದ್ರ
ಶೆಟ್ರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಹತ್ಯೆ ಮಾಡಿದ ಅನೂಪ್ ಶೆಟ್ಟಿಗೆ ತಕ್ಕ ಶಿಕ್ಷೆಯಾಗಲಿ. (ಕಾರ್ಟೂನ್ ಮೂಲ: ಟೈಮ್ಸ್
ಆಫ್ ಇಂಡಿಯಾ)