ಮಂಗಳೂರು: 20 ಅಡಿ ಆಳದಲ್ಲಿ ಮಂಗಳೂರಿಂದ ಬೆಂಗಳೂರಿಗೆ ತೈಲ ಪೂರೈಕೆಯ ಹಿಂದೂಸ್ತಾನ್ ಪೆಟ್ರೋಲಿಯಂ ಕಂಪೆನಿಗೆ ಸೇರಿದ ಪೈಪ್ಲೈನ್ ಕೊರೆದು ತೈಲ ಕದ್ದಿರುವ ಘಟನೆ ದಕ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಪೈಪ್ ಲೈನ್’ನ ತೈಲ
ಹರಿವಿನಲ್ಲಿನ ವ್ಯತ್ಯಾಸ ಕಂಡು ಕಂಪೆನಿಯು ಪರೀಕ್ಷಿಸಿದಾಗ ಘಟನೆ ಬೆಳಕಿಗೆ ಬಂದಿದ್ದು ಹಲವು ಸಮಯಗಳಿಂದ
ತೈಲ ಕದಿಯಲಾಗುತ್ತಿದೆ ಎನ್ನಲಾಗುತ್ತಿದೆ. ಪ್ರಕರಣ ನಡೆದಿರುವ ಭೂಮಿ ಖಾಸಗಿ ವ್ಯಕ್ತಿಗೆ ಸೇರಿದ್ದು
ಈ ಕಳ್ಳತನದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆಂಬುದು ಇನ್ನಷ್ಟೇ ತಿಳಿಯಬೇಕಾಗಿದೆ. (ಚಿತ್ರ: ಸಾಂದರ್ಭಿಕ)