ಮಂಗಳೂರು : 70ರ ದಶಕದಲ್ಲಿ ಕಾಪುವಿನ ಸಣ್ಣ ಊರಿಂದ ಗಲ್ಪ್ ರಾಷ್ಟ್ರಕ್ಕೆ ತೆರಳಿ ಕಷ್ಟಪಟ್ಟು ದುಡಿದು ತನ್ನದೇ ಸಾಮ್ರಾಜ್ಯ ಕಟ್ಟಿ ಅರಸನಾಗಿ ಬಾಳಿದ ಡಾ. ಬಿಆರ್ ಶೆಟ್ಟಿ ಅವರ 79ನೇ ಜನುಮ ದಿನವಿಂದು.
ಉದ್ಯಮವೆಂದಾಗ ಏರುಪೇರು
ಸಾಮಾನ್ಯ, ಅದರಲ್ಲೂ ಸುತ್ತಲೂ ನಂಬಿಕಸ್ಥ ಕೆಲಸಗಾರರಿದ್ದಾಗ ಯಾವುದೇ ತೊಂದರೆಯಿಲ್ಲದೆ ಉದ್ಯಮ ಏಳಿಗೆ
ಹೊಂದುತ್ತದೆ. ಇಂತಹ ಸಂದರ್ಭದಲ್ಲಿ ವ್ಯವಹಾರಕ್ಕೆ ತೊಂದರೆಯಾದರೂ ಅದಕ್ಕೆ ಪರಿಹಾರ ಕಂಡು ಕೊಳ್ಳುವುದು
ಸುಲಭ. ಆದ್ರೆ ನಂಬಿದ ಕೆಲಸಗಾರರೇ ಮೋಸ ಮಾಡಿದಾಗ ಅಂತಹ ವ್ಯವಹಾರವನ್ನು ಸರಿ ದಾರಿಗೆ ತರುವುದು ತುಸು
ಕಷ್ಟಕರ.
ಆದರೂ ತಮ್ಮ ಈ ಇಳಿ
ವಯಸ್ಸಿನಲ್ಲಿ ನವ ಯುವಕರಂತೆ ಛಲ ಬೀಡದೆ ತನ್ನ ವ್ಯವಹಾರವನ್ನು ಮತ್ತೆ ಸರಿ ದಾರಿಗೆ ತಂದು ತಪ್ಪಿತಸ್ಥರಿಗೆ
ತಕ್ಕ ಪಾಠ ಕಲಿಸಲು ಶ್ರಮ ಪಡುತ್ತಿರುವ ಡಾ.ಬಿಆರ್ ಶೆಟ್ಟಿ ಅವರ ಉತ್ಸಾಹಕ್ಕೆ ಮೆಚ್ಚುಗೆಯಿರಲಿ. ಆದಷ್ಟೂ
ಬೇಗನೆ ಎಲ್ಲಾ ಸಮಸ್ಯೆಗಳ ಸುಳಿಯಿಂದ ಮುಕ್ತರಾಗಿ ವಿಜಯಶಾಲಿಯಾಗಲೆಂದು ಈ ಮೂಲಕ ಹಾರೈಸುತ್ತೇವೆ.
Happy Birthday Dr.BR Shetty Sir.