ಸ್ವರ್ಗಕ್ಕೆ ಕಿಚ್ಚು ಹಚ್ಚುವ 'ಧೌಲಾಧರ್ ಡಾಲ್‌ಹೌಸಿ' - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಸ್ವರ್ಗಕ್ಕೆ ಕಿಚ್ಚು ಹಚ್ಚುವ 'ಧೌಲಾಧರ್ ಡಾಲ್‌ಹೌಸಿ'

Share This

ಹಿಮಾಚಲ ಪ್ರದೇಶದ ಚಂಭಾ ಜಿಲ್ಲೆಯಲ್ಲಿರುವ ಧೌಲಾಧರ್ ಒಂದು ಸುಂದರ ಪರ್ವತ. ದೌಲಾಧರ್ ಹಿಮಾಲಯದ ಪಶ್ಚಿಮ ಭಾಗದಲ್ಲಿದ್ದು ಸುತ್ತಲೂ ಹಿಮದಿಂದ ಆರ್ವತವಾದ ಪರ್ವತಶ್ರೇಣಿಗಳಿಂದ ಕೊಡಿದೆ. ಹಲವಾರು ಸುಂದರ ರಮಣೀಯ ಗಿರಿಧಾಮಗಳಲ್ಲಿ ಇದೂ ಒಂದಾಗಿದ್ದು ಪ್ರವಾಸಿಗರನ್ನು ತನ್ನತ್ತ ಕೈಬಿಸಿ ಕರೆಯುತ್ತಿದೆ. ಇಲ್ಲಿರುವ ಹಳೆಯ ಕಾಲದ ಕಟ್ಟಡಗಳು, ಸ್ಕಾಟಿಷ್ ಮತ್ತು ವಿಕ್ಟೋರಿಯಾ ವಾಸ್ತುಶಿಲ್ಪ ಶೈಲಿಯ ಚರ್ಚುಗಳು ಪ್ರಮುಖ ಆರ್ಕಷಣೆಯ ಕೇಂದ್ರವಾಗಿದೆ.

ಡಾಲ್‌ಹೌಸಿ: ಇದು ಧೌಲಾಧರ್‌ನ ಪ್ರಮುಖ ಆಕರ್ಷಣೆಯಾಗಿದೆ. ಡಾಲ್‌ಹೌಸಿಯನ್ನು ಬ್ರಿಟಿಷ್ ವೈಸ್‌ರಾಯ್ ಲಾರ್ಡ್ ಡಾಲ್‌ಹೌಸಿ 1854ರಲ್ಲಿ ಸ್ಥಾಪಿಸಿದನು. ಈ ಗಿರಿಧಾಮದ ಸುತ್ತಲಿನ ಪ್ರಕೃತಿಯ ನೈಸರ್ಗಿಕ ಸೊಬಗು, ತಣ್ಣನೆಯ ತಂಪಾದ ಗಾಳಿ, ಹಸಿರು ಪರಿಸರ ಅಮೋಘವಾಗಿದ್ದು ಪ್ರವಾಸಿಗರ ಮೆಚ್ಚಿನ ತಾಣವಾಗಿದೆ.


ದಾಯ್‌ಕುಂಡ್: ದಾಯ್‌ಕುಂಡ್ ಡಾಲ್‌ಹೌಸಿ ಗಿರಿಧಾಮದ ಅತ್ಯಂತ ಎತ್ತರದ ಪರ್ವತವಾಗಿದೆ. ಈ ಬೆಟ್ಟದ ತುತ್ತತುದಿಯಲ್ಲಿ ನಿಂತು ನೋಡಿದಾಗ ಸುತ್ತಲಿನ ನಗರಗಳ ದೃಶ್ಯವನ್ನು ಕಾಣಬಹುದು. ಇಲ್ಲಿನ ಅಳೆತ್ತರಕ್ಕೆ ಬೆಳೆದ ಮರಗಳಿಂದ ತಾಗಿಕೊಂಡು ಬರುವ ತಣ್ಣನೆಯ ಗಾಳಿಯ ಅಲೆಗಳ ಸದ್ದು ಮೈರೋಮಾಂಚನಗೊಳಿಸುತ್ತದೆ. ಬೆಟ್ಟದಲ್ಲಿ ಪೋಲಾನಿ ದೇವಿಯ ದೇವಸ್ಥಾನವಿದ್ದು ಅದ್ಭುತವಾಗಿದೆ. ಪಕ್ಕದ ಕಣಿವೆಯಲ್ಲಿ ಹರಿಯುವ ನದಿಯು ಮತ್ತಷ್ಟು ಆನಂದವನ್ನು ನೀಡುತ್ತದೆ. ದಾಯ್‌ಕುಂಡ್ ಚಾರಣ ಪ್ರೀಯರಿಗೆ ಹೇಳಿ ಮಾಡಿಸಿದ ಜಾಗದಂತಿದ್ದು ಒಳ್ಳೆಯ ಅನುಭವವನ್ನು ಪಡೆಯಬಹುದು.


ಬಕ್ರೋಟ ಹಿಲ್ಸ್: ಡಾಲ್‌ಹೌಸಿನಿಂದ 5ಕಿಮೀ ದೂರದಲ್ಲಿದೆ. ಇಲ್ಲಿ ಪ್ರವಾಸಿಗರು ಹಿಮರಾಶಿಯ ಮೇಲೆ ನಡೆದಾದಲು ಅವಕಾಶವಿದೆ. ಇಲ್ಲಿರುವ ಬಕ್ರೋಟ ಮಾಲ್ ಪ್ರವಾಸಿಗರಿಗಾಗಿ ವಾಕಿಂಗ್ ಸಕ್ಯೂರ್ಟ್ ವ್ಯವಸ್ಥೆ ಮಾಡಿದ್ದು ಪ್ರವಾಸಿಗರು ಹಿಮಚ್ಛಾದಿತ ಬೆಟ್ಟಗಳನ್ನು ಸುತ್ತಲೂ ಅನುಕೂಲವಾಗಿದೆ.


ಗಾಂಧಿ ಚೌಕ್: ಇದು ಡಾಲ್‌ಹೌಸಿ ಗಿರಿಧಾಮದ ಜನಪ್ರಿಯ ಶಾಪಿಂಗ್ ಸ್ಥಳವಾಗಿದೆ. ಗಾಂಧಿ ಚೌಕ್ ಜಿಪಿಒ ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆದಿದೆ. ಇಲ್ಲಿ ಪ್ರವಾಸಿಗಳು ನಾನಾ ರೀತಿಯ ತಿಂಡಿಗಳ ಸವಿಯನ್ನು ಸವಿಯಬಹುದು. ಜಿಪಿಒ ಪಕ್ಕದಲ್ಲಿ ಸಣ್ಣದಾದ ಟಿಬೆಟಿಯನ್ ಮಾರುಕಟ್ಟೆಯಿದೆ. ಅಲಂಕಾರಿಕ ಕರಕುಶಲ ವಸ್ತುಗಳು, ಸ್ಮಾರಕಗಳು ಹಾಗೂ ಆಕರ್ಷಕ ಜಾಕೇಟ್‌ಗಳನ್ನು ಇಲ್ಲಿ ಪಡೆಯಬಹುದು.


ಕಾಜಿಯಾರ್ ಅಭಯಾರಣ್ಯ: ಕಾಜಿಯಾರ್ ಅಭಯಾರಣ್ಯ ಡಾಲ್ಹೌಸಿಯಿಂದ 6ಕಿಮೀ ದೂರದಲ್ಲಿದ್ದು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಈ ಅರಣ್ಯದಲ್ಲಿ ದೇವದಾರು ಮರಗಳು ದಟ್ಟವಾಗಿ ಹಬ್ಬಿವೆ. ವಿಶಿಷ್ಟ ಶೈಲಿಯ ಪಕ್ಷಿಗಳನ್ನು ಹಿಮ ಪ್ರಾಣಿಗಳನ್ನು ಪ್ರವಾಸಿಗರು ಇಲ್ಲಿ ವೀಕ್ಷಿಸಬಹುದು.


ಹೋಗುವುದು ಹೇಗೆ: ಹಿಮಾಚಲ ಪ್ರದೇಶದಿಂದ 336ಕಿಮೀ ದೂರದಲ್ಲಿದೆ. ಬೆಂಗಳೂರಿನಿಂದ 2,388ಕಿಮೀ ದೂರವಿದ್ದು ರೈಲು ಅಥವಾ ವಿಮಾನಯಾನದ ಮೂಲಕ ಡಾಲ್‌ಹೌಸಿ ತಲುಪಬಹುದು. ಬೆಂಗಳೂರಿನಿಂದ ಜಮ್ಮುವಿಗೆ ವಿಮಾನಯಾನದಲ್ಲಿ ಸಾಗಿ ನಂತರ ಬಾಡಿಗೆ ವಾಹನದ ಸಹಾಯದಿಂದ ಸುಮಾರು 175ಕಿಮೀ ಪ್ರಯಾಣಿಸಿ ಡಾಲ್‌ಹೌಸಿ ತಲುಪಬಹುದು. ರೈಲಿನ ಮೂಲಕ ನವದೆಹಲಿಗೆ ಸಾಗಿ ಅಲ್ಲಿಂದ ಮತ್ತೆ 478ಕಿಮೀ ಪಾಟ್ನಕೋಟ್ ತನಕ ಸಾಗಿ ನಂತರ ಬೇರೆ ರೈಲಿನಲ್ಲಿ 83ಕಿಮೀ ಪ್ರಯಾಣಿಸಿ ಡಾಲ್‌ಹೌಸಿ ಸೇರಬಹುದು. ಬರಹ: ರವಿರಾಜ್ ಕಟೀಲ್

Pages