ಮಂಗಳೂರು: ಕೊರೋನಾ ಎರಡನೇ ಅಲೆ ಸೃಷ್ಠಿಸಿದ ಭೀಕರತೆಯನ್ನು ನಾವು ಕಣ್ಣಾರೆ ಕಂಡಿದ್ದೇವೆ. ಮುಂದೆ ಎರಡನೇ ಅಲೆಯಲ್ಲಿ ಉಂಟಾದ ರೋಗದ ತೀವ್ರತೆ, ಸಾವು ನೋವುಗಳು 3ನೇ ಅಲೆಯಲ್ಲೂ ಮರುಕಳಿಸಬಾರದೆಂದಾದರೆ ನಾವೆಲ್ಲರೂ ಕೊರೋನಾ ವಿರುದ್ಧ ಯೋಧರಾಗಿ ಹೋರಾಡಬೇಕಾಗಿದೆ.
ಅಸಡ್ಡೆ, ನಿರ್ಲಕ್ಷವೇ ಪ್ರಕರಣ
ಹೆಚ್ಚಾಗಲು ಕಾರಣ: ಸರ್ಕಾರ
ಕೊರೋನಾ ನಿಯಂತ್ರಿಸುವಲ್ಲಿ ತನ್ನದೇ ಆದ ನೀತಿ ನಿಯಮ ರೂಪಿಸಿ ಕೋವಿಡ್ ನಿಯಂತ್ರಿಸಲು ಪ್ರಯತ್ನಿಸುತ್ತಿದೆ.
ಮಾಸ್ಕ್ ಹಾಗೂ ಸುರಕ್ಷಿತ ಅಂತರ ಕಾಯ್ದುಕೊಳ್ಳವಂತೆ ಜನರಿಗೆ ತಿಳಿಸಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.
ಇಷ್ಟೇಲ್ಲಾ ಪ್ರಯತ್ನಪಟ್ಟರೂ ಕೆಲವರು ಮಾಸ್ಕ್ ಧರಿಸಿ ಬೇಕಾಬಿಟ್ಟಿ ಓಡಾಟ ನಡೆಸಿ ಸೋಂಕಿಗೆ ಒಳಗಾಗುತ್ತಿದ್ದಾರೆ.
ಅಲ್ಲದೆ ಯಾವುದೇ ಮುನ್ನಚ್ಚೆರಿಕೆ ಕೈಗೊಳ್ಳದೆ ಸಮಾರಂಭಗಳನ್ನು ಎರ್ಪಡಿಸಿ ತಮ್ಮ ನಿರ್ಲಕ್ಷದಿಂದ ಪ್ರಕರಣ
ಹೆಚ್ಚಿಸುತ್ತಿದ್ದಾರೆ.
ನಿಮ್ಮ ಸಮೀಪದಲ್ಲಿ
ಯಾರಾದೂ ಮಾಸ್ಕ್ ಧರಿಸದೇ ಓಡಾಟ ನಡೆಸುವುದು ಕಂಡು ಬಂದಲ್ಲಿ ತಕ್ಷಣ ಅವರಿಗೆ ಬುದ್ದಿ ಹೇಳಿ ಜಾಗೃತಿ
ಮೂಡಿಸಿ. ಪರಿಸರದಲ್ಲಿ ಕೊರೋನಾ ಮುನ್ನೆಚ್ಛೆರಿಕೆ ಕೈಗೊಳ್ಳದೆ ಯಾವುದೇ ದೊಡ್ಡ ಸಮಾರಂಭ ನಡೆಯುತ್ತಿರುವ
ಬಗ್ಗೆ ತಿಳಿದರೆ ತಕ್ಷಣ ಸಮೀಪದ ಪೊಲೀಸ್ ಠಾಣೆ ಮಾಹಿತಿ ನೀಡಿ. ನಿಮ್ಮ ಪರಿಸರದ ಸುತ್ತಲೂ ಜನ ಜಾಗೃತಿ
ಮೂಡಿಸಿ, ಹೊರಗಿನಿಂದ ಬರುವ ಪ್ರತಿಯೊಬ್ಬರ ಮೇಲೂ ನಿಗಾ ವಹಿಸಿ. ಪ್ರತಿಯೊಬ್ಬರೂ ವಾಕ್ಸಿನ್ ತೆಗೆದು
ಕೊಳ್ಳಲು ನೆರವಾಗಿ.
ಹೀಗೆ ನಾವು ಕೂಡ
ಸರ್ಕಾರದ ಜೊತೆ ಯೋಧರಾಗಿ ಹೋರಾಟ ಮಾಡಿದರೆ ಮಾತ್ರವೇ ಕೊರೋನಾ ಸೋಂಕು ಹಬ್ಬುವ ತೀವ್ರತೆಯನ್ನು ಕಡಿಮೆ
ಮಾಡಬಹುದು. ಲಾಕ್ ಡೌನ್’ ಹೇರಿಕೆಯಿಂದ ಮುಕ್ತವಾಗಬಹುದು.