ಮಂಗಳೂರು: ದತ್ತ ನಗರ ನಿವಾಸಿಗಳ ಸಂಘದ ವತಿಯಿಂದ ಭಾನುವಾರ ಆಟಿಡೊಂಜಿ ದಿನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ
ತುಳುನಾಡಿನ ಕೆಲವು ಸಾಂಪ್ರದಾಯಿಕ ಆಟಗಳನ್ನು ಆಡಿ ಗೆದ್ದವರಿಗೆ ಬಹುಮಾನ ವಿತರಿಸಲಾಯಿತು. ವೈವಿದ್ಯಮಯ
ತಿಂಡಿ ತಿನಸುಗಳನ್ನು ಸವಿಯುವುದರೊಂದಿಗೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಸಂಚಾಲಕ ಎಚ್.ಕೆ.
ಪುರುಷೋತ್ತಮ್, ಸಂಘದ ಅಧ್ಯಕ್ಷ ವಿನಯ್ ಕುಮಾರ್ ತಾಳಿಂಜ, ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ, ಉಪಾಧ್ಯಕ್ಷ
ಲಲಿತ, ಉಪಕಾರ್ಯದರ್ಶಿ ಪ್ರಭಾ ಆಳ್ವ, ಕರುಣಾಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.