ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಅಜಿತ್ ಶೆಟ್ಟಿ ಅವರ ವೈದ್ಯಕೀಯ ಚಿಕಿತ್ಸೆಗೆ ಪ್ರತಿ ತಿಂಗಳು ಧನಸಹಾಯ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ಸ್ವಾಗತ------- ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಅಜಿತ್ ಶೆಟ್ಟಿ ಅವರ ವೈದ್ಯಕೀಯ ಚಿಕಿತ್ಸೆಗೆ ಪ್ರತಿ ತಿಂಗಳು ಧನಸಹಾಯ

Share This

ಬಂಟ್ಸ್ ನ್ಯೂಸ್, ಬಂಟ್ವಾಳ : ಜಾಗತಿಕ ಬಂಟರ ಸಂಘಗಳ ಒಕ್ಕೂಟವು ದೇಹದ ಬಲ ಕಳೆದುಕೊಂಡು ನಡೆಯಲಾರದ ಸ್ಥಿತಿಯಲ್ಲಿರುವ ಬಂಟ್ವಾಳ ಅಜಿತ್ ಕುಮಾರ್ ಶೆಟ್ಟಿ ಅವರ ಕಷ್ಟ ಮನಗೊಂಡು ಅವರ ಪ್ರತಿ ತಿಂಗಳ ವೈದ್ಯಕೀಯ ಚಿಕಿತ್ಸೆಗೆ ಧನಸಹಾಯ ಮಾಡಲಿದೆ.

ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು, ಬಂಟ್ವಾಳದ ಅಜಿತ್ ಕುಮಾರ್ ಶೆಟ್ಟಿಯವರು ಮನೆಯ ಮಹಡಿಯಿಂದ ಬಿದ್ದು ಬೆನ್ನುಮೂಳೆ, ಸೊಂಟದ ಕೀಲುಗಳು ಹಾಗೂ ಕುತ್ತಿಗೆಯಿಂದ ಕೆಳಗೆ ಸಂಪೂರ್ಣ ಬಲಹೀನರಾಗಿ ಮಲಗಿದಲ್ಲಿಯೇ ಇರುವ ಅವರ ಕಷ್ಟವನ್ನು ಅರಿತು ಅವರನ್ನು ದತ್ತು ಯೋಜನೆಯಡಿ ದತ್ತು ಸ್ವೀಕಾರ ಮಾಡಿದ್ದಾರೆ. ಅಲ್ಲದೆ ಒಕ್ಕೂಟದ ವತಿಯಿಂದ ಅವರ ವೈದ್ಯಕೀಯ ಚಿಕಿತ್ಸೆಗೆ ಪ್ರತಿ ತಿಂಗಳು ಧನಸಹಾಯ ಮಂಜೂರು ಮಾಡಿರುತ್ತಾರೆ.

Pages