ಸೆ.5 : ಮುಂಬೈಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾಸಭೆ, ಬಹಿರಂಗ ಅಧಿವೇಶನ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಸೆ.5 : ಮುಂಬೈಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾಸಭೆ, ಬಹಿರಂಗ ಅಧಿವೇಶನ

Share This

ಬಂಟ್ಸ್ ನ್ಯೂಸ್, ಮುಂಬಯಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟ(ರಿ) ಮಂಗಳೂರು ಇದರ ವಾರ್ಷಿಕ ಮಹಾಸಭೆಯು ಸೆ.5ರಂದು ರವಿವಾರ ಅಪರಾಹ್ನ ಗಂಟೆ 2 ರಿಂದ 3 ವರೆಗೆ ಕುರ್ಲಾ ಪೂರ್ವ ಬಂಟರ ಭವನದ ಶ್ರೀಮತಿ ರಂಜನಿ ಸುಧಾಕರ ಹೆಗ್ಡೆ (ತುಂಗಾ) ಸಮಾಜ ಕಲ್ಯಾಣ ಎನೆಕ್ಸ್ ಸಂಕೀರ್ಣದಲ್ಲಿ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಲಿದೆ.

ವಾರ್ಷಿಕ ಮಹಾಸಭೆಯ ಬಳಿಕ ಅಪರಾಹ್ನ ಗಂಟೆ 3ರಿಂದ 5 ರವರೆಗೆ ಬಂಟರ ಭವನದ ಶ್ರೀಮತಿ ರಾಧಾ ಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ. ಸಂಜೆ ಗಂಟೆ 5ಕ್ಕೆ ಬಹಿರಂಗ ಅಧಿವೇಶನ ಜರಗಲಿದ್ದು, ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಚಂದ್ರಹಾಸ್ ಕೆ. ಶೆಟ್ಟಿ ಬಹಿ ರಂಗ ಅಧಿವೇಶನವನ್ನು ಉದ್ಘಾಟಿಸಲಿದ್ದಾರೆ. ವಿಶೇಷ ಅತಿಥಿಯಾಗಿ ಹಿರಿಯ ಉದ್ಯಮಿ, ಬಂಟ ಸಮಾಜದ ಮಹಾ ದಾನಿ ಎಸ್.ಎಂ. ಶೆಟ್ಟಿ (ಎಸ್.ಎಂ. ಗ್ರೂಪ್) ಆಗಮಿಸಲಿದ್ದಾರೆ .

ಮುಖ್ಯ ಅತಿಥಿಯಾಗಿ ತೋನ್ಸೆ ಆನಂದ ಶೆಟ್ಟಿ (ಆರ್ಗಾನಿಕ್ ಕೆಮಿಕಲ್ಸ್) ಭಾಗವಹಿಸಲಿದ್ದಾರೆ. ಗೌರವ ಅತಿಥಿಗ ಳಾಗಿ ಒಕ್ಕೂಟದ ನಿರ್ದೇಶಕರುಗಳಾದ ಕೆ.ಡಿ. ಶೆಟ್ಟಿ (ಭವಾನಿ ಶಿಪ್ಪಿಂಗ್), ಪ್ರಕಾಶ್ ಶೆಟ್ಟಿ (ಎಂ.ಆರ್.ಜಿ ಗ್ರೂಪ್), ಕೆ.ಎಂ. ಶೆಟ್ಟಿ (ವಿ.ಕೆ. ಗ್ರೂಪ್) ಪಾಲ್ಗೊ ಳ್ಳಲಿದ್ದಾರೆ. ಅತಿಥಿಗಳಾಗಿ ಒಕ್ಕೂಟದ ಮಹಾ ಪೋಷಕರುಗಳಾದ ಶಶಿಕಿರಣ್ ಶೆಟ್ಟಿ, ಉಮಾ ಕೃಷ್ಣ ಶೆಟ್ಟಿ, ಮಿಸ್ ರೇಖಾ ಜೆ. ಶೆಟ್ಟಿ, ಡಾ. ಶಂಕರ್ ಶೆಟ್ಟಿ ವಿರಾರ್, ಸದಾಶಿವ ಶೆಟ್ಟಿ (ಹೇರಂಬ ಗ್ರೂಪ್), ಆರ್.ಕೆ. ಶೆಟ್ಟಿ (ಹೇರಂಬ ಗ್ರೂಪ್), ಶಶಿಧರ್ ಶೆಟ್ಟಿ ಬರೋಡ, ಒಕ್ಕೂಟದ ಮಹಾಪೋಷಕರು, ಪೋಷಕರು ಹಾಗೂ ವಿವಿಧ ಬಂಟ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.


ಇದೇ ಸಂದರ್ಭ ದಲ್ಲಿ ಬಂಟರ ಸಂಘ ಮುಂಬಯಿ ಇದರ ಮಾಜಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ದಂಪತಿ, ಒಕ್ಕೂಟದ ಕಾರ್ಯದರ್ಶಿ ಜಯಕರ ಶೆಟ್ಟಿ, ಇಂದ್ರಾಳಿ ದಂಪತಿಯರನ್ನು ಸನ್ಮಾನಿಸ ಲಾಗುವುದು. ಖ್ಯಾತ ಯಕ್ಷಗಾನ ಭಾಗ ವತ, ಪಟ್ಟ ಫೌಂಡೇಶನ್ ಸ್ಥಾಪಕಾಧ್ಯಕ್ಷ ಹಾಗೂ ಪಾವಂಜೆ ಮೇಳದ ಸ್ಥಾಪಕ ಪಟ್ಲ ಸತೀಶ್ ಶೆಟ್ಟಿ ದಂಪತಿ, ಪತ್ರಕರ್ತ, ಕರ್ನಾಟಕ ಸರಕಾರದ ಮಾಧ್ಯಮ ಅಕಾಡೆಮಿಯ ಸದಸ್ಯರಾಗಿ ಆಯ್ಕೆ ಗೊಂಡಿರುವ ಜಗನ್ನಾಥ ಶೆಟ್ಟಿ ಬಾಳ ದಂಪತಿಯನ್ನು ಗೌರವಿಸಲಾಗುವುದು. ಎಂದು ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಕೋಶಾಧಿ ಕಾರಿ ಉಳೂರು ಮೋಹನ್ದಾಸ್ ಶೆಟ್ಟಿ, ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಜೊತೆ ಕಾರ್ಯದರ್ಶಿ ಸತೀಶ್ ಅಡಪ್ಪ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Pages