ಮಂಗಳೂರು : ಶಕ್ತಿನಗರದ ಶಕ್ತಿ ಪದವಿ ಪೂರ್ವಕಾಲೇಜಿನ ವಾಣಿಜ್ಯ ವಿಭಾಗದಲ್ಲಿ 2021-22 ನೇ ಸಾಲಿನಲ್ಲಿ ಕಬಡ್ಡಿ ಪ್ರತಿಭೆಗಳಿಗೆ ಉಚಿತ ಶಿಕ್ಷಣದ ಅವಕಾಶವನ್ನು ಕಲ್ಪಿಸಲಾಗಿದೆ. ದಿನಾಂಕ 31-07-2021 ಶನಿವಾರ ಬೆಳಗ್ಗೆ 9-ಗಂಟೆಗೆ ಶಕ್ತಿ ಕಾಲೇಜಿನ ರೇಷ್ಮಾ ಮೆಮೋರಿಯಲ್ ಆಡಿಟೋರಿಯಂನಲ್ಲಿ ಕಬಡ್ಡಿ ನೇರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಆಟಗಾರರ ದೇಹ ತೂಕವು
60ಕೆ.ಜಿಯಿಂದ 70ಕೆ.ಜಿಯ ಒಳಗಿರತಕ್ಕದ್ದು.
ಮಾಸ್ಕ್ನ್ನು ಮತ್ತು ಸ್ಯಾನಿಟೈಸರ್
ಕಡ್ಡಾಯವಾಗಿ ಬಳಸಬೇಕು. ಮ್ಯಾಟ್ ಶೂಗಳನ್ನು ಕಡ್ಡಾಯವಾಗಿ
ಧರಿಸಬೇಕು. ಭಾಗವಹಿಸುವ ಆಟಗಾರರು 2004ರ ನಂತರದಲ್ಲಿ ಜನಿಸಿರಬೇಕು.
2021-22ರ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿರಬೇಕು.
ಜನ್ಮದಿನಾಂಕ ದಾಖಲೆಗಾಗಿ ಅಂಕಪಟ್ಟಿ ಅಥವಾ ಜನ್ಮಪ್ರಮಾಣ ಪತ್ರವನ್ನು ಕಡ್ಡಾಯವಾಗಿ ತರಬೇಕು. ಪಾಲ್ಗೊಳುವ ಆಟಗಾರರಿಗೆ ಮಾತ್ರವೇ ಕಾಲೇಜು ಆವರಣದ ಒಳಗೆ ಪ್ರವೇಶವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಶಕ್ತಿ ಪ.ಪೂ.ಕಾಲೇಜಿನ ದೈಹಿಕ ಶಿಕ್ಷಕರು/ಕಬಡ್ಡಿ ಕೋಚ್ ಆದ ಆಕಾಶ್ ಶೆಟ್ಟಿ ಇವರ ಮೊಬೈಲ್ ಸಂಖ್ಯೆ: 9591020367 / 9886437301 ಕ್ಕೆ ಸಂಪರ್ಕಿಸುವಂತೆ ಕೋರಲಾಗಿದೆ.