ಬಂಟ್ಸ್ ನ್ಯೂಸ್, ಮಂಗಳೂರು : ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘ ಮಂಗಳೂರು ಇದರ ಆಡಳಿತ ಮಂಡಳಿಯ ಉಪಾಧ್ಯಕ್ಷರಾಗಿ ಭಾಸ್ಕರ ರೈ ಕಟ್ಟ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಂಗಳವಾರ ಸಂಘದ ಕಚೇರಿಯಲ್ಲಿ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ಪ್ರಕ್ರೀಯೆಯನ್ನು ಸಹಕಾರ ಸಂಘದ ಹಿರಿಯ ನಿರೀಕ್ಷಕರಾದ ಶಿವಲಿಂಗಯ್ಯ ಎಂ. ಚುನಾವಣಾಧಿಕಾರಿಯಾಗಿ ನಡೆಸಿಕೊಟ್ಟರು.
ನೂತನ ಅಧ್ಯಕ್ಷರಾಗಿ ಶ್ರೀನಿವಾಸ್ ನಾಯಕ್ ಇಂದಾಜೆ ಆಯ್ಕೆಯಾದರು. ಸಂಘದ ನಿರ್ದೇಶಕರಾದ ಕೇಶವ ಕುಂದರ್, ಪುಷ್ಪರಾಜ್ ಬಿ.ಎನ್, ಇಬ್ರಾಹಿಂ ಅಡ್ಕಸ್ಥಳ, ಆರಿಫ್ ಪಡುಬಿದ್ರೆ, ಜಿತೇಂದ್ರ ಕುಂದೇಶ್ವರ,ಆತ್ಮ ಭೂಷಣ್ ಭಟ್, ಸತ್ಯವತಿ, ಕೆ.ವಿಲ್ ಫ್ರೆಡ್ ಡಿ ಸೋಜ, ಹರೀಶ್ ಮೋಟುಕಾನ, ವಿಜಯ ಕೋಟ್ಯಾನ್ ಪಡು, ಸುಖ್ ಪಾಲ್ ಪೊಳಲಿ, ಸುರೇಶ್ ಡಿ.ಪಳ್ಳಿ, ಶಿಲ್ಪಾ ಕುಮಾರಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಭಿಷೇಕ್ .ಕೆ ಉಪಸ್ಥಿತರಿದ್ದರು.