ಬಂಟ್ಸ್ ನ್ಯೂಸ್, ಮಂಗಳೂರು : ಬಂಟರ ಯಾನೆ ನಾಡವರ ಮಾತೃಸಂಘದ ಶತಮಾನೋತ್ಸವ ಕಟ್ಟಡಗಳ ಸಂಕೀರ್ಣವು ಸಮಾಜ ಬಾಂಧವರ ಸಹಕಾರದೊಂದಿಗೆ ರೂ.230 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗಲಿದ್ದು ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ.
ಸಮಾಜದ ಶ್ರೇಯೋಭಿವೃದ್ದಿಯನ್ನು
ಮಾಡುವ ಸದುದ್ದೇಶದಿಂದ ಹಾಗೂ ಮಾತೃಸಂಘವು ಶತಮಾನೋತ್ಸವವನ್ನು ಪೂರೈಸಿದ ಸವಿನೆನಪಿಗಾಗಿ ನಿರ್ಮಿಸುವ
ಶತಮಾನೋತ್ಸವ ಕಟ್ಟಡಗಳಲ್ಲಿ 2000 ಆಸನ ವ್ಯವಸ್ಥೆ ಇರುವ ಸುಸಜ್ಜಿತ ಸಭಾಭವನ, ಸಭೆ, ಸಮಾರಂಭಗಳನ್ನು
ಏರ್ಪಡಿಸಲು ಎರಡು ಸಭಾಭವನಗಳು, 1250ರಷ್ಟು ವಾಹನ ನಿಲುಗಡೆಗೆ ವಿಸ್ತಾರವಾದ ಅವಕಾಶ, ಮೂರು ಪ್ರತ್ಯೇಕ
ಲಾಬಿಗಳು ಇವೆ.
4ನೇ ಮಹಡಿಯಲ್ಲಿ
50,000 ಚದರ ಅಡಿಯಷ್ಟು ಓಪನ್ ಟೆರೆಸ್, ಸುಮಾರು 6 ಲಕ್ಷ ಚದರ ಅಡಿ ವಾಣಿಜ್ಯ ಸಂಕೀರ್ಣ ಹಾಗೂ ವಿಶ್ವ
ದರ್ಜೆಯ ಜಿಮ್ ಮತ್ತು ಕ್ಲಬ್ ಮೊದಲಾದವುಗಳನ್ನು ಒಳಗೊಂಡಿರುವ ಮಾತೃಸಂಘದ ಶತಮಾನೋತ್ಸವ ಕಟ್ಟಡಗಳ ಸಂಕೀರ್ಣವನ್ನು
ಸಮಾಜ ಬಾಂಧವರ ಸಹಕಾರದೊಂದಿಗೆ ರೂ. 230 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗಲಿದೆ.