ಬಂಟ್ಸ್ ನ್ಯೂಸ್, ಕುಂದಾಪುರ: ಸತತ ಐದು ಬಾರಿ ಶಾಸಕರಾದರೂ ಹಾಲಾಡಿ ಶ್ರೀನಿವಾಸ ಶೆಟ್ರಿಗೆ ಇನ್ನೂ ಕೂಡ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗದಿರುವುದು ಅವರ ಅಭಿಮಾನಿಗಳಲ್ಲಿ ಮತ್ತಷ್ಟು ಬೇಸರ ತಂದಿದೆ.
ಹಾಲಾಡಿ ಅವರ ರಾಜಕೀಯದಲ್ಲಿನ
ಹಿರಿತನಕ್ಕೆ ಈಗಾಗಲೇ ಪಕ್ಷವೇ ಗುರುತಿಸಿ ಸೂಕ್ತ ಸ್ಥಾನಮಾನ ನೀಡಬೇಕಿತ್ತು. ಮಂತ್ರಿಗಿರಿಗಾಗಿ ಲಾಬಿ
ಮಾಡುವ ಶಾಸಕರ ನಡುವೆ ಹಾಲಾಡಿ ಅವರು ಎಂದೂ ಕೂಡ ತಮಗೆ ಮಂತ್ರಿಗಿರಿ ನೀಡಿ ಎಂದು ಕೇಳಿದವರಲ್ಲ. ಆದರೆ
ಅವರು ಪ್ರತಿನಿಧಿಸುವ ಕ್ಷೇತ್ರದ ಜನರಿಗೆ ಹಾಲಾಡಿ ಅಭಿಮಾನಿ ದೇವರಾಗಿದ್ದಾರೆ. ಅವರ ಕ್ಷೇತ್ರದ ಜನರು,
ಅಭಿಮಾನಿಗಳು ತಮ್ಮ ಶ್ರೀನಿವಾಸಣ್ಣರಿಗೆ ಮಂತ್ರಿಗಿರಿ ಯಾವಾಗ ಸಿಗಲಿದೆ ಎಂದು ಕಾತರದಿಂದ ಎದುರು ನೋಡುತ್ತಿದ್ದಾರೆ.
ಆದರೆ ಪಕ್ಷದ ಹಿರಿಯರು
ಇನ್ನೂ ಕೂಡ ಹಾಲಡಿ ಅವರನ್ನು ಗುರುತಿಸದೇ ಕಡೆಗಣಿಸುತ್ತಿರುವುದು ನಿಜಕ್ಕೂ ಮುಂದಿನ ಚುನಾವಣೆಯ ದೃಷ್ಟಿಯಲ್ಲಿ
ಉತ್ತಮ ಬೆಳವಣಿಗೆಯಲ್ಲಿ. ಹಾಲಾಡಿ ಅವರಿಗೆ ಚುನಾವಣೆಯಲ್ಲಿ ಗೆಲ್ಲಲು ಪಕ್ಷವೇ ಬೇಕೆಂದಿಲ್ಲ. ತಾವು
ಸ್ವತಂತ್ರವಾಗಿ ಚುನಾವಣೆಗೆ ನಿಂತರೂ ಅಭಿಮಾನಿಗಳ ಬಲದಿಂದ ಗೆಲ್ಲುವಂತಹ ಧೀಮಂತ ವ್ಯಕ್ತಿ ಅವರು. ಇನ್ನಾದರೂ
ಪಕ್ಷ ಹಿರಿಯ ರಾಜಕೀಯ ಮುಖಂಡನನ್ನು ಕಡೆಗಣಿಸದೇ ಸೂಕ್ತ ಸ್ಥಾನಮಾನ ನೀಡಬೇಕೆಂದು ಅಭಿಮಾನಿಗಳು ಬಯಸುತ್ತಿದ್ದಾರೆ.
ಸರಳತೆಗೆ ಮತ್ತೊಂದು ಹೆಸರು ಹಾಲಾಡಿ: ತಮ್ಮ ಬೆಂಗಳೂರಿನ ಶಾಸಕರ ಭವನದ ಕೊಠಡಿ ಮುಂದೆ ಸಮೀಪದ
ಕೊಠಡಿ ದುರಸ್ಠಿ ಕಾರ್ಯದಿಂದ ತುಂಬಿದ ಧೂಳನ್ನು ತಾವೇ ಪೊರಕೆ ಹಿಡಿದು ಗುಡಿಸಿ ಸ್ವಚ್ಛಗೊಳಿಸಿದ್ದಾರೆ.
ಇವರ ಮನೆಯಲ್ಲೂ ಅಷ್ಟೇ ಕೆಲಸಗಾರಿಗೆ ಕಾಯದೇ ಆಳಾಗಿ ದುಡಿದು ತಮ್ಮ ಸರಳ ಜೀವನಕ್ಕೆ ಕೈಗನ್ನಡಿಯಾಗಿದ್ದಾರೆ.
(ಚಿತ್ರ ಕೃಪೆ: ಹಾಲಾಡಿ ಶ್ರೀನಿವಾಸ ಶೆಟ್ಟಿ ಅಭಿಮಾನಿ
ಬಳಗ FB)