ಬಂಟ್ಸ್ ನ್ಯೂಸ್, ಕುಂದಾಪುರ: ಆನಗಳ್ಳಿ ದೂಪದಕಟ್ಟೆ ಮನೆ ರಘುರಾಮ ಶೆಟ್ಟಿ (91 ವರ್ಷ ) ಮೇ.16 ರಂದು ವಯೋಸಾಮಾನ್ಯ ಅಲ್ಪಕಾಲ ಅಸ್ವಸ್ಥರಾಗಿ ತಮ್ಮ ಸ್ವಗೃಹದಲ್ಲಿ ದೈವಾಧೀನರಾದರು.
ಸದ್ರಿಯವರು ದೀರ್ಘಕಾಲ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಉಪ ತಹಶೀಲ್ದಾರರಾಗಿ ನಿವೃತ್ತಿ ಹೊಂದಿರುತ್ತಾರೆ. ಅಲ್ಲದೆ ಬಸ್ರೂರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರರಾಗಿರುತ್ತಾರೆ. ಸರಳ ಸಜ್ಜನ ಪ್ರಾಮಾಣಿಕ ವ್ಯಕ್ತಿತ್ವದಿಂದ ಚಿರಪರಿಚಿತರಾದ ಸದ್ರಿ ಯವರು ಮೂರು ಪುತ್ರಿಯರು ಓರ್ವ ಪುತ್ರ ಹಾಗೂ ಅಪಾರ ಬಂಧುಗಳನ್ನು ಆಗಲಿರುತ್ತಾರೆ.
ಆನಗಳ್ಳಿ ಹಿರಿಯನಾಗರಿಕ ಸಂಘದ ಅಧ್ಯಕ್ಷರಾಗಿ ಹಾಗೂ ಆನಗಳ್ಳಿ ಶ್ರೀ ಲಕ್ಷ್ಮೀ ಚನ್ನಕೇಶವ ದೇವಾಲಯದ ಗೌರವಾಧ್ಯಕ್ಷರು ಆಗಿದ್ದರು. ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ಬಸ್ರೂರು ಇದರ ಉಪಾಧ್ಯಕ್ಷರಾಗಿ ಮತ್ತು ನಿರ್ದೇಶಕರಾಗಿ ಸೇವೆ ಸಲ್ಲಿಸಿರುತ್ತಾರೆ. ಇವರಿಗೆ ಧರ್ಮಸ್ಥಳ ದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗಡೆ ಯವರು ಬಸ್ರೂರು ಅಪ್ಪಣ್ಣ ಹೆಗ್ಡೆ ಯವರು ಕುಂದಾಪುರ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಯವರು ಭಾವಪೂರ್ಣ ಶ್ರದ್ಧಾಂಜಲಿ ತಿಳಿಸಿರುತ್ತಾರೆ.