ಹಿಂದುಳಿದ ಸಮಾಜ ಬಾಂಧವರಿಗೆ ಮನೆ ನಿರ್ಮಾಣಕ್ಕೆ ಸಹಾಯ, ಶಿಥಿಲಗೊಂಡಿರುವ ದೇವಸ್ಥಾನದ ಪುನರ್ ನಿರ್ಮಾಣಕ್ಕೆ ದೇಣಿಗೆ : ಐಕಳ ಹರೀಶ್ ಶೆಟ್ಟಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಹಿಂದುಳಿದ ಸಮಾಜ ಬಾಂಧವರಿಗೆ ಮನೆ ನಿರ್ಮಾಣಕ್ಕೆ ಸಹಾಯ, ಶಿಥಿಲಗೊಂಡಿರುವ ದೇವಸ್ಥಾನದ ಪುನರ್ ನಿರ್ಮಾಣಕ್ಕೆ ದೇಣಿಗೆ : ಐಕಳ ಹರೀಶ್ ಶೆಟ್ಟಿ

Share This

ಬಂಟ್ಸ್ ನ್ಯೂಸ್, ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರ ಗ್ರಾಮಾಭಿವೃದ್ಧಿ ಯೋಜನೆಯ ಕನಸು ಸಾಕಾರಗೊಳ್ಳುವ ನಿಟ್ಟಿನಲ್ಲಿ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಆರ್ಥಿಕವಾಗಿ ಹಿಂದುಳಿದ ಸಮಾಜ ಬಾಂಧವರಿಗೆ ಮನೆ ನಿರ್ಮಾಣಕ್ಕೆ ನೆರವು ನೀಡುವ ಸಲುವಾಗಿ ಸರಪಾಡಿ ಗ್ರಾಮದ ಮಣಿನಾಲ್ಕೂರು ಎಂಬಲ್ಲಿನ ಶ್ರೀಮತಿ ವಿಮಲಾ ಶೆಟ್ಟಿ ಅವರ ಮನೆ ನಿರ್ಮಾಣಕ್ಕೆ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರು ಒಕ್ಕೂಟದ ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ ಶೆಟ್ಟಿ ಅವರು ಸರಪಾಡಿಗೆ ಭೇಟಿ ನೀಡಿ ದೇಣಿ ಹಸ್ತಾಂತರಿಸಿದರು.

ಸಂದರ್ಭ ಸ್ಥಳೀಯ ಸಮಾಜ ಬಾಂಧವರು  ಮತ್ತು ಖ್ಯಾತ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಮನವಿಯ ಹಿನ್ನೆಲೆ ಸರಪಾಡಿಯ ಮಣಿನಾಲ್ಕೂರು ಗ್ರಾಮದ ಆರಾಧ್ಯ ದೇವರಾದ ಇಳಿಯುರು ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಭೇಟಿ ನೀಡಿ ಕಳೆದ ಒಂದೂವರೆ ವರ್ಷಗಳಿಂದ ಸ್ಥಗಿತಗೊಂಡಿರುವ ಕಾಮಗಾರಿ ವಿಚಾರವನ್ನು ಮನಗಂಡು ದೇವಸ್ಥಾನದ ಕಾಮಗಾರಿಯನ್ನು ಪುನಃ ಪುನರಾರಂಭಿಸಲು ಸೇವಾರೂಪದಲ್ಲಿ ತನ್ನ ಕಾಣಿಕೆಯನ್ನು ನೀಡುವುದಾಗಿ ಭರವಸೆಯನ್ನು ನೀಡಿದರು.


ಸಂದರ್ಭ ಖ್ಯಾತ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ, ಒಕ್ಕೂಟದ ಮಾಜಿ ಕೋಶಾಧಿಕಾರಿ ಕೊಲ್ಲಾ ಡಿ ಬಾಲಕೃಷ್ಣ ರೈ, ಸಾಲೆತ್ತೂರು ಬಂಟರ ಸಂಘದ ಅಧ್ಯಕ್ಷರಾದ ದೇವಪ್ಪ  ಶೇಖ, ಪ್ರಕಾಶ್ ಶೆಟ್ಟಿ, ಬಂಟ್ವಾಳ ತಾಲೂಕು ಬಂಟರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಅರವಿಂದ ರೈ ಮೂರ್ಜೆ ಬೆಟ್ಟು, ಅಮರೇಶ ಶೆಟ್ಟಿ ತಿರುವಾಜೆ, ಸುರೇಶ್ ಶೆಟ್ಟಿ ಸೂರಿಂಜೆ, ರವಿ ಶೆಟ್ಟಿ ಜತ್ತ ಬೆಟ್ಟು, ಸಂಪತ್ ಕುಮಾರ್ ಶೆಟ್ಟಿ ಮುಂದ್ರೆಲ್ ಗುತ್ತು, ಶಿವರಾಮಶೆಟ್ಟಿ ತೋಟ, ಯೋಗೀಶ್ ಶೆಟ್ಟಿ, ಆನಂದ ಶೆಟ್ಟಿ, ಶ್ರೀಮತಿ ಕಂಚಾಲಾಕ್ಷಿ, ರಾಧಾಕೃಷ್ಣ ರೈ, ಆನಂದ ಶೆಟ್ಟಿ ಆರ್ ಮೂಡಿ, ವಿಶ್ವನಾಥ ಶೆಟ್ಟಿ ಕೊಳಂಬೆ, ಶಿವಪ್ಪ ಪೂಜಾರಿ , ಲಿಂಗಪ್ಪ ಪೂಜಾರಿ ಶ್ರೀಮತಿ ಜಯಂತಿ ಉಪಸ್ಥಿತರಿದ್ದರು.

Pages