ಬಂಟ್ಸ್ ನ್ಯೂಸ್, ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಮಾ.4ರಂದು ಒಕ್ಕೂಟದ ಆಡಳಿತ ಕಚೇರಿಯಲ್ಲಿ ಅರ್ಹ ಫಲಾನುಭವಿಗಳಿಗೆ ಆರ್ಥಿಕ ಧನ ಸಹಾಯದ ಚೆಕ್ ವಿತರಣಾ ಕಾರ್ಯಕ್ರಮ ನಡೆಯಿತು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು, ಸಮಾಜ ಕಲ್ಯಾಣ ಯೋಜನೆ ಅಡಿಯಲ್ಲಿ ವಸತಿ ಯೋಜನೆಗೆ ಶ್ರೀಮತಿ ಪುಷ್ಪಲತ ರೈ ವಾಮಂಜೂರಿನ ತಿರುವೈಲು ಗ್ರಾಮ, ಕರುಣಾಕರ್ ಶೆಟ್ಟಿ ಜಪ್ಪಿನಮೊಗರು, ಶ್ರೀಮತಿ ಮೋಹಿನಿ ಶೆಟ್ಟಿ ಕೆಂಜಾರ್, ನಾರಾಯಣ ಶೆಟ್ಟಿ, ಬಂಟ್ವಾಳ ಹಾಗೂ ವಿದ್ಯಾಭ್ಯಾಸಕ್ಕೆ ಸನ್ಮಾನ್ ಮಲ್ಲಿ ಬಂಟ್ವಾಳ, ಪುರಾಗ್ ರೈ ತಲಪಾಡಿ ಮತ್ತು ವೈದ್ತಕೀಯ ಚಿಕಿತ್ಸೆಗೆ ಶ್ವೇತಾ ಶೆಟ್ಟಿ ಬೆಳ್ತಂಗಡಿ ಇವರಿಗೆ ಸಹಾಯಧನ ಮಂಜೂರು ಮಾಡಿದ ಚೆಕ್ಗಳನ್ನು ವಿತರಿಸಿದರು. ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿಯವರು ಉಪಸ್ಥಿತರಿದ್ದರು.
ಈ ಸಂದರ್ಭ ಬಂಟರ ಸಂಘ ಜಪ್ಪಿನಮೊಗರು ಅಧ್ಯಕ್ಷ ಹರೀಶ್ ಶೆಟ್ಟಿ, ಕಾರ್ಯದರ್ಶಿ ಗುರುರಾಜ್ ಶೆಟ್ಟಿ, ಅಲಂಕಾರು ಬಂಟರ ಸಂಘದ ಜೊತೆ-ಕಾರ್ಯದರ್ಶಿ ಲೋಕನಾಥ್ ರೈ ಹಾಗೂ ಆಡಳಿತಾಧಿಕಾರಿ ಸಚ್ಚಿದಾನಂದ ಹೆಗ್ಡೆ, ಸಿಬ್ಬಂದಿವರ್ಗದವರು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.