ಒಡಿಯೂರು ಶ್ರೀಗಳವರ ಷಷ್ಥ್ಯಬ್ಧಿ ಸಂಭ್ರಮ: ಮುಂಬೈ ಪ್ರಾದೇಶಿಕ ಸಮಿತಿ ಗೌರವ ಅಧ್ಯಕ್ಷರಾಗಿ ಬಿ. ವಿವೇಕ್ ಶೆಟ್ಟಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಒಡಿಯೂರು ಶ್ರೀಗಳವರ ಷಷ್ಥ್ಯಬ್ಧಿ ಸಂಭ್ರಮ: ಮುಂಬೈ ಪ್ರಾದೇಶಿಕ ಸಮಿತಿ ಗೌರವ ಅಧ್ಯಕ್ಷರಾಗಿ ಬಿ. ವಿವೇಕ್ ಶೆಟ್ಟಿ

Share This

ಬಂಟ್ಸ್ ನ್ಯೂಸ್, ಮುಂಬಯಿ : ಒಡಿಯೂರು ಶ್ರೀ ಗುರುದೇವಾ ಸೇವಾ ಬಳಗ ಮತ್ತು ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ (ಮಹಾರಾಷ್ಟ್ರ ಘಟಕ) ಒಡಿಯೂರು ಶ್ರೀಗಳವರ ಷಷ್ಥ್ಯಬ್ಧಿ ಸಂಭ್ರಮ ಆಚರಣೆಯ ನಿಮಿತ್ತ ನಡೆದ ಸಭೆಯಲ್ಲಿ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಬಿ. ವಿವೇಕ್ ಶೆಟ್ಟಿ ಇವರನ್ನು ಒಡಿಯೂರು ಶ್ರೀಗಳವರ ಷಷ್ಥ್ಯಬ್ಧಿ ಸಂಭ್ರಮ ದ ಮುಂಬಯಿ ಪ್ರಾದೇಶಿಕ ಸಮಿತಿಯ ಗೌರವ ಅಧ್ಯಕ್ಷರಾಗಿ, ಉದ್ಯಮಿ ವಾಮಯ್ಯ ಬಿ. ಶೆಟ್ಟಿಯವರನ್ನು ಅಧ್ಯಕ್ಷರನ್ನಾಗಿ, ಪ್ರಕಾಶ್ ಶೆಟ್ಟಿ ಪೇಟೆಮನೆ ಇವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ರವೀಂದ್ರ ಶೆಟ್ಟಿಯವರನ್ನು ಕೋಶಾಧಿಕಾರಿಯಾಗಿ ನೇಮಕ ಮಾಡಲಾಯಿತು.

ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕೃತಿಕ ಚೈತನ್ಯದ ಕುಸಿತಕ್ಕೆ ಒಳಗಾಗುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ ಎಂಬ ಮನದಿಚ್ಚೆಯನ್ನು ಹೊಂದಿರುವ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಕನಸನ್ನು ಸಾಕಾರಗೊಳಿಸುವ ಉದ್ದೇಶದಿಂದ ಧರ್ಮ, ಸಂಸ್ಕೃತಿ ಆಚರಣೆಯನ್ನೊಳಗೊಂಡ ಸಲಹಾ ಮತ್ತು ಸಾಂಸ್ಕೃತಿಕ ಸಮಿತಿಯನ್ನು ರಚಿಸಿ, ಶ್ರೀಗಳವರ ಷಷ್ಥ್ಯಬ್ಧಿ ಸಂಭ್ರಮವನ್ನು ಸಾಂಸ್ಕೃತಿಕ ಚೈತನ್ಯದ ಸಮಾರಂಭದಲ್ಲಿ ಆಚರಿಸುವುದೆಂದು ನಿರ್ಧರಿಸಲಾಯಿತು.

Pages