ಬಂಟ್ಸ್ ನ್ಯೂಸ್, ಮಂಗಳೂರು : ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಸಮಾಜದ ಆರ್ಥಿಕ ಸಂಕಷ್ಟದಲ್ಲಿರುವ 31 ಮಂದಿ ಫಲಾನುಭನುಭವಿಗಳಿಗೆ ಫೆ.25ರಂದು ಸಹಾಯಧನ ಚೆಕ್ ವಿತರಿಸಿತು.
ಒಕ್ಕೂಟದ ಆಡಳಿತ
ಕಚೇರಿಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು 8 ಮದುವೆಗೆ,
10 ವೈದ್ಯಕೀಯ ಚಿಕಿತ್ಸೆಗಾಗಿ, 11 ವಿದ್ಯಾಭ್ಯಾಸಕ್ಕೆ ಹಾಗೂ ಇತರೆ ಯೋಜನೆಯಲ್ಲಿ 02 ಮಂದಿಗೆ
ಒಟ್ಟು 31 ಮಂದಿ ಸಂಕಷ್ಟದಲ್ಲಿರುವ
ಫಲಾನುಭವಿಗಳಿಗೆ ಸಹಾಯಧನದ ಚೆಕ್ ವಿತರಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ
ಮಾಜಿ ಕೋಶಾಧಿಕಾರಿ ಶ್ರೀ ಬಾಲಕೃಷ್ಣ ರೈ
ಕೊಲ್ಲಾಡಿ, ಕಾರ್ಯಕಾರಿ
ಸಮಿತಿ ಸದಸ್ಯರಾದ ಶ್ರೀ ಚಂದ್ರಶೇಖರ ಹೆಗ್ಡೆ
ಶಾನಾಡಿ, ಶ್ರೀ ಸುದರ್ಶನ್ ಶೆಟ್ಟಿ
ಪೆರ್ಮಂಕಿ, ಒಕ್ಕೂಟದ
ಆಡಳಿತಾಧಿಕಾರಿ ಸಚ್ಚಿದಾನಂದ ಹೆಗ್ಡೆ ಕೊಳ್ಕೆಬೈಲ್ ಸಿಬ್ಬಂದಿಗಳು
ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.
ಒಕ್ಕೂಟವು ಎಪ್ರಿಲ್ 2018 ರಿಂದ ಫೆಬ್ರವರಿಗೆ 2021 ರವರೆಗೆ ಸುಮಾರು 4 ಕೋಟಿ ರೂ. ಮಿಕ್ಕಿ ಸಹಾಯಧನವನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಿದೆ.