ಬಂಟ್ಸ್ ನ್ಯೂಸ್, ಮುಲ್ಕಿ: ಆರ್ಥಿಕ ಸಂಕಷ್ಟದಲ್ಲಿ ತೀರಾ ಬಡತನದಲ್ಲಿ ಬದುಕು ಸಾಗಿಸುತ್ತಿರುವ ಕವತ್ತಾರು ಕಾರ್ಮಾರ್ ನಿವಾಸಿ ಶ್ರೀಮತಿ ಲೀಲಾ ಶೆಟ್ಟಿ ಅವರಿಗೆ ಸ್ವಂತ ಮನೆ ನಿರ್ಮಾಣಕ್ಕಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇದರ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಆರ್ಥಿಕ ನೆರವಿನ ಚೆಕ್ ವಿತರಿಸಿದರು.
ಈ ಸಂದರ್ಭ ಶ್ರೀಮತಿ ಲೀಲಾ ಶೆಟ್ಟಿ ಅವರ ಮನೆಗೆ ಭೇಟಿ ನೀಡಿ ಸ್ವಂತ ಮನೆಯ ಕಾಮಗಾರಿ ಪರಿಶೀಲಿಸಿ ಮನೆಮಂದಿಗೆ ಧೈಯ ತುಂಬಿದರು. ಶ್ರೀಮತಿ ಲೀಲಾ ಶೆಟ್ಟಿಯವರ ಮಗ ಶಶಿಧರ ಶೆಟ್ಟ ಅವರಿಗೆ ಸಹಾಯಧನದ ಚೆಕ್ಕನ್ನು ಹಸ್ತಾಂತರಿಸಿದರು.
ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿಯವರು ಒಕ್ಕೂಟದ ಪೋಷಕರಾದ ಡಾ. ಶಂಕರ್ ಶೆಟ್ಟಿ ವಿರಾರ್, ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ, ಉಪಾಧ್ಯಕ್ಷ ಪುರುಷೋತ್ತಮ ಶೆಟ್ಟಿ, ಒಕ್ಕೂಟದ ಸದಸ್ಯರಾದ ಜೀವನ ಶೆಟ್ಟಿ ಮುಲ್ಕಿ, ಕೃಷ್ಣಶೆಟ್ಟಿ, ನವೀನ್ ಶೆಟ್ಟಿ ಮತ್ತು ಸ್ಥಳೀಯರಾದ ರಾಮದಾಸ್ ಬಲ್ಕುಂಜೆ ಹಾಗೂ ಇತರರು ಉಪಸ್ಥಿತರಿದ್ದರು.