BUNTS NEWS, ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟ ಅವರು ಬಂಟರನ್ನು ಒಬಿಸಿ ಪ್ರವರ್ಗ 3ಬಿಯಿಂದ ಪ್ರವರ್ಗ 2ಎಗೆ ಸೇರಿಸಲು ಕ್ರಮ ಕೈಗೊಳ್ಳುವಂತೆ ಬಿಜಿಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರಲ್ಲಿ ಮನವಿ ಮಾಡಿದರು.
ಅವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಡಿ.1ರಂದು
ಬಂಟ್ಸ್ ಹಾಸ್ಟೇಲಿನ ಶ್ರೀಮತಿ ಗೀತಾ ಎಸ್.ಎಂ ಶೆಟ್ಟಿ ಸಭಾಂಗಣದಲ್ಲಿ ನಡೆದ ಬೃಹತ್ ಸಮಾಜ ಕಲ್ಯಾಣ ನೆರವು ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿ, ಬಂಟ ಸಮಾಜದಲ್ಲಿ ಬಡತನದಲ್ಲಿರುವ ಪ್ರಮಾಣವು ಹೆಚ್ಚಿದ್ದು ಒಬಿಸಿಯ
3ಬಿ ಮೀಸಲಾತಿಯಿಂದ ಬಡವರ್ಗಕ್ಕೆ ಸರ್ಕಾರದ ಸವಲತ್ತು ಪಡೆಯಲಾಗುತ್ತಿಲ್ಲ. ಹಾಗಾಗಿ ಅವರಿಗೆ ಸರ್ಕಾರದ
ಮತ್ತಷ್ಟು ಸೌಲಭ್ಯಗಳು ದೊರೆಯುವ ಉದ್ದೇಶದಿಂದ ಜಾತಿ ಕೇಟಗರಿಯಲ್ಲಿ ಬಂಟರನ್ನು 2ಎಗೆ ಸೇರಿಸಲು ಬಿಜಿಪಿ
ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರಲ್ಲಿ ಮನವಿ ಮಾಡಿದರು. ಅಲ್ಲದೇ ಸಮಾಜಮುಖಿ ಕಾರ್ಯ ಮಾಡುತ್ತಿರುವ
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸೂಕ್ತ ಕಚೇರಿ ನಿರ್ಮಾಣಕ್ಕೆ ಸರ್ಕಾರದ ವತಿಯಿಂದ ಸೂಕ್ತ ಜಾಗ ನೀಡುವಂತೆ
ಕೋರಿದರು.
ಈ ಸಂದರ್ಭ ಮಾತನಾಡಿದ
ಬಿಜಿಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ಬಂಟರನ್ನು 2ಎಗೆ ಸೇರಿಸುವ ಮನವಿಯನ್ನು ಉನ್ನತಮಟ್ಟದ
ಪರಿಶೀಲನೆಗೆ ಕಳುಹಿಸುವ ಭರವಸೆ ನೀಡಿದರು. ಒಕ್ಕೂಟಕ್ಕೆ ಸೂಕ್ತವಾದ ಜಾಗ ಗುರುತಿಸಿ ಸರ್ಕಾರಕ್ಕೆ ತಿಳಿಸುವಂತೆ
ಹೇಳಿದರು.