BUNTS NEWS, ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಡಿ.1ರಂದು ಬಂಟ್ಸ್ ಹಾಸ್ಟೇಲಿನ ಶ್ರೀಮತಿ ಗೀತಾ ಎಸ್.ಎಂ ಶೆಟ್ಟಿ ಸಭಾಂಗಣದಲ್ಲಿ ನಡೆದ ಬೃಹತ್ ಸಮಾಜ ಕಲ್ಯಾಣ ನೆರವು ನೀಡುವ ಕಾರ್ಯಕ್ರಮದಲ್ಲಿ ಐಕಳ ಹರೀಶ್ ಅವರ ಅಧ್ಯಕ್ಷತೆಯಲ್ಲಿ ಬಂಟ-ಬಂಟೇತರ ಸಾಧಕರಿಗೆ ಸನ್ಮಾನಿಸಿ ಗೌರವಿಸಿತು.
ಸಮಾರಂಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲಿಂಗಪ್ಪ ಸೇರಿಗಾರ್ ಕಟೀಲು ದಂಪತಿಯನ್ನು, ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದ ಗೋಪಾಲಕೃಷ್ಣ ಆರಕ್ಷಕ, ಅಕ್ಷತಾ ವಿ. ಶೆಟ್ಟಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ
ವಿಜೇತ ಸುರತ್ಕಲ್ ಬಂಟರ ಸಂಘದ ಪರವಾಗಿ ಅದರ ಅಧ್ಯಕ್ಷರಾದ ಸುಧಾಕರ ಪೂಂಜ ಹಾಗೂ ಮೈಮೂನ ಫೌಂಡೇಶನಿನ
ಸಮಾಜಸೇವಕ ಅಪತ್ಬಾಂದವ ಅಸೀಫ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ವೆನ್ಲಾಕ್ ಆಸ್ಪತ್ರೆಯಲ್ಲಿ
ಬಡರೋಗಿಗಳ ಪ್ರತಿದಿನ ಊಟ ವಿತರಣೆ ಮಾಡುವ ಎಂ. ಫ್ರೆಂಡ್ಸ್ ಕಾರುಣ್ಯ ತಂಡಕ್ಕೆ 1 ತಿಂಗಳ ಆರ್ಥಿಕ ಸಹಾಯ
ನೀಡಲಾಯಿತು.
ಸಮಾರಂಭದಲ್ಲಿ ಎಸ್ ಸಿಡಿಸಿಸಿ ಅಧ್ಯಕ್ಷ ಡಾ.ಎಮ್.ಎನ್ ರಾಜೇಂದ್ರ ಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ರಾಜೇಶ್ ನಾೈಕ್, ಉಮಾನಾಥ್
ಎ ಕೋಟ್ಯಾನ್, ಬಂಟವಾಳ ಬಂಟದ ಸಂಘದ ಅಧ್ಯಕ್ಷ ನಗ್ರಿಗುತ್ತು ವಿವೇಕ್ ರೈ, ಯು.ಟಿ ಖಾದರ್, ಮಾಜೀ
ಸಚಿವರಾದ ಬಿ ರಮಾನಾಥ ರೈ, ಕೆ ಅಭಯಚಂದ್ರ ಜೈನ್, ಮಿಥುನ್
ರೈ, ಒಕ್ಕೂಟದ ಉಪಾಧ್ಯಕ್ಷ
ಕರ್ನಿರೆ ವಿಶ್ವನಾಥ್ ಶೆಟ್ಟಿ, ಕೋಶಾಧಿಕಾರಿ ಉಳ್ತೂರು
ಮೋಹನ್ ದಾಸ್ ಶೆಟ್ಟಿ, ಜತೆ
ಕಾರ್ಯದರ್ಶಿ ಸತೀಶ್ ಅಡಪ ಸಂಕಬೈಲ್,
ಕೊಲ್ಲಾಡಿ ಬಾಲಕೃಷ್ಣ ರೈ ಮತ್ತಿತರ
ಪ್ರಮುಖರು ಇದ್ದರು. ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಪ್ರಾರ್ಥಿಸಿದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ
ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಸ್ವಾಗತಿಸಿದರು. ಒಕ್ಕೂಟದ ಗೌರವ ಪ್ರಧಾನ ಕಾರ್ಯದರ್ಶಿ ಇಂದ್ರಾಳಿ ಜಯಕರ
ಶೆಟ್ಟಿ ವಂದಿಸಿದರು. ವಿಠಲ ನಾಯಕ್ ತಂಡ ಸಾಂಸ್ಕೃತಿಕ ಕಾರ್ಯಕ್ರಮ
ನಡೆಸಿಕೊಟ್ಟರು.