ಬಂಟ್ಸ್ ನ್ಯೂಸ್, ಮಂಗಳೂರು: ಪತ್ರಿಕಾ ರಂಗಕ್ಕೆ ಮಂಕು ಕವಿದಿದೆ, ಪತ್ರಕರ್ತ ನೈತಿಕವಾಗಿ ಮತ್ತು ಭೌತಿಕವಾಗಿ ಸಾಯುತ್ತಿದ್ದಾನೆ ಎಂಬ ಆತಂಕಕ ಹೊತ್ತಲ್ಲಿಯೇ ಮಾಧ್ಯಮದಲ್ಲಿಯೂ ಪತ್ರಕರ್ತ ಪ್ರಕಾಶಮಾನವಾಗಿ ಬೆಳಗಬಹುದು ಎಂಬುದನ್ನು ವರ್ತಮಾನಕಾಲದಲ್ಲಿ ತೋರಿಸುತ್ತಿರುವವರು ಜಯಪ್ರಕಾಶ್ ಶೆಟ್ಟಿ ಉಪ್ಪಳ.
ಜಿತೇಂದ್ರ ಕುಂದೇಶ್ವರ (ಹಿರಿಯ ಪತ್ರಕರ್ತರು, ವಿಶ್ವವಾಣಿ) |
ಏಷ್ಯಾನೆಟ್ ಸುವರ್ಣ
ದ ಬಿಗ್3 ಸ್ಪೆಶಲಿಸ್ಟ್ ಈ ಶೆಟ್ರು ಸಮಾಜಕಳಕಳಿಯ
ಪತ್ರಕರ್ತರಾಗಿ ಮಾದರಿಯಾಗಿ ರೂಪುಗೊಂಡಿದ್ದಾರೆ. ನೆರೆ
ಬಂದು ಮಕ್ಕಳ ಪುಸ್ತಕಗಳು ಕೊಚ್ಚಿ ಹೋದಾಗ ವಾಹಿನಿಯ ಮೂಲಕ ನೆರವಿಗೆ ಬಂದದ್ದು
ಈ ಶೆಟ್ರು. ಆದರೆ ಇವರು ದೊಡ್ಡದಾಗಿ ಕೊಚ್ಚಿ ಕೊಂಡಿಲ್ಲ.
ಕಣ್ಣಿಲ್ಲದ ಅಂಧರ ಬಾಳಿಗೆ ತನ್ನ ವರದಿಯ ಮೂಲಕ ಕಣ್ಣಾದವರು ಈ ಶೆಟ್ರು.
ಕೈ ಕೊಡುವವರೇ ಹೆಚ್ಚಾಗಿರುವ ಈ ಹೊತ್ತಲ್ಲಿ ಕೈ ಇಲ್ಲದ ಬಾಲಕನಿಗೆ
ವಾಹಿನಿಯ ಮೂಲಕ ಕೈ ಒದಗಿಸಿ ಕೈಲಾದ ಸಹಾಯ ಮಾಡಿದವರು
ಜಯಪ್ರಕಾಶ್ ಶೆಟ್ಟಿ. ನೆರಿಯದ ಕಾಡ ಮೂಲೆಗೆ ಅಧಿಕಾರಿಗಳು ಕಾಲಿಡದ ಕಡೆ ಜಿಲ್ಲಾಧಿಕಾರಿಗಳು ಬರುವಂತೆ
ಮಾಡಿದವರು, ಸೌಲಭ್ಯ ಸಿಗುವಂತೆ ಮಾಡಿದವರು ಈ ಶೆಟ್ರು.
40 ವರ್ಷಗಳ ಹಿಂದೆ
ಜಿಲ್ಲಾಧಿಕಾರಿ ಬರ್ತಾರೆ ಬಂದ್ರೆ ಅವರಿಗೆ ಕೂತು ಸಭೆ ಮಾಡಲು ಅಂತ ಜನ ಕಟ್ಟೆ ಕಟ್ಟಿ ಕಾಯ್ತಾ ಇದ್ರು.
ಇವರ ಬಿಗ್ ತ್ರೀ ಪರಿಣಾಮದ ಬಳಿಕ ಜಿಲ್ಲಾಧಿಕಾರಿ ಬಂದಿದ್ದರು. ಒಂದೇ ಎರಡೇ ಹೀಗೆ ನೂರಾರು ಮಾನವೀಯ ವರದಿಗಳಿಂದ ಸಮಾಜಮುಖಿ ಕೆಲಸ ಮಾಡಿದವರು
ಈ ಜಯಪ್ರಕಾಶ್ ಶೆಟ್ರು.
ಮೊದಲ ಪರಿಚಯ: ಇವರನ್ನು ಈಟಿವಿ ಆ್ಯಂಕರ್ ಆಗಿದ್ದಾಗ ನಾನು ಟೀವಿಯಲ್ಲಿ
ನೋಡ್ತಾ ಇದ್ದೆ. ಸುವರ್ಣದ ಕಟ್ಟೆಚ್ಚರ ಕ್ರೈಮ್ ಸರಣಿ ಮಾಡ್ತಾ ಇದ್ರು. ಆಗ ನಾನು ಸಹೋದರ ಸಂಸ್ಥೆ ಕನ್ನಡಪ್ರಭದಲ್ಲಿ
( ಮಂಗಳೂರು) ಪ್ರಧಾನ ವರದಿಗಾರನಾಗಿದ್ದೆ.
ಆಗ ಸುವರ್ಣದಲ್ಲಿ
ಮಾಧ್ಯಮದ ಪ್ಯಾನಲ್ ಡಿಸ್ ಕಶನ್ ನಡೆಯುತ್ತಿತ್ತು. ನಮಗೂ ಸುವರ್ಣಕ್ಕೂ ಪ್ರಧಾನ ಸಂಪಾದಕರಾಗಿದ್ದ ವಿಶ್ವೇಶ್ವರ
ಭಟ್ಟರಿಗೆ ಒಂದು sms ಹಾಕಿದ್ದೆ. ತಕ್ಷಣ ನನಗೆ ಒಂದು ಕರೆ ಬಂದಿತ್ತು. ಅದು ಜಯಪ್ರಕಾಶ್ ಶೆಟ್ರದ್ದು.
ಅಂದಿನಿಂದ ಇಂದಿನವರೆಗೂ ದೂರವಾಣಿ ಸಂಪರ್ಕದಲ್ಲಿದ್ದೇವೆ.
ತೆರೆದ ಕಣ್ಣು, ಅತಃದೃಷ್ಟಿ: ಇವರಲ್ಲಿ ನಾನು ಖುಷಿ ಪಡುವ ವೈಶಿಷ್ಟ್ಯ ಏನೆಂದರೆ...
ಎಲ್ಲವನ್ನು ಯಾವುದೇ ಇಸಂ ಗಳ ಹಂಗಿಲ್ಲದೆ ತೆರೆದ ಕಣ್ಣಿನಿಂದ ನೋಡುವ ವಿಶಾಲ ಗುಣ.
ಇತ್ತೀಚಿನ ಆ್ಯಂಕರ್
ಗಳಲ್ಲಿ ಹೆಚ್ಚುತ್ತಿರುವ ಅರಚಾಟ- ಕಿರುಚಾಟಗಳಿಲ್ಲ. ತನ್ನ ಪ್ರಚಾರಕ್ಕೋ, ಪ್ರಶಂಸೆಗೋ ಸುಲಭವಾಗಿ ಖಿಖP
ದಕ್ಕುವ ದೇಶ, ಧರ್ಮ, ಜಾತಿ ಟ್ರಂಪ್ ಕಾರ್ಡ್ ಗಳನ್ನು ಸ್ವಾರ್ಥ ಕ್ಕೆ ಎಂದೂ ಬಳಸಿಕೊಳ್ಳದ ನೈಜ ಪತ್ರಕರ್ತ.
ಇಂತಹ ಪತ್ರಕರ್ತ ನನ್ನ ಸ್ನೇಹ ವಲಯದಲ್ಲಿರೋದು ನನ್ನ ಅದೃಷ್ಟ.
ಪತ್ರಕರ್ತನಾಗಿ ಸಮರ್ಥವಾಗಿ
ದುಡಿದು ಸಾರ್ಥಕ ಸೇವೆ ಮಾಡಿದ್ದೀರಿ. ವೃತ್ತಿಯ ಮೂಲಕವೂ ಸಮಾಜ ಸೇವೆ ಹೇಗೆ ಮಾಡಬಹುದು ಎನ್ನುವುದಕ್ಕೆ
ಮಾದರಿ. ಹುಟ್ಟು ಹಬ್ಬದ ಶುಭಾಶಯಗಳು ಶೆಟ್ರೆ. ವರ್ತಮಾನ ಕಾಲದಲ್ಲಿ ಅಂತಹ ಅಗ್ರ ಪತ್ರಕರ್ತರ ಸಾಲಿನಲ್ಲಿ ನೀವೂ ಬರುತ್ತೀರಿ. ಪತ್ರಿಕಾರಂಗದಲ್ಲಿ
ಪ್ರಕಾಶಮಾನವಾಗಿ ಬೆಳಗುತ್ತಿರುವ ನಿಮಗೆ ಜಯ್ ಹೇಳಿದರೆ ನಮಗೊಂದಿಷ್ಟು ಪುಣ್ಯ ಬರಬಹುದು. ಬರಹ: ಜಿತೇಂದ್ರ ಕುಂದೇಶ್ವರ (ಹಿರಿಯ ಪತ್ರಕರ್ತರು, ವಿಶ್ವವಾಣಿ)