BUNTS NEWS, ಮುಂಬೈ: ಅಸಾಯಕರಿಗೆ ಸಹಾಯ ಮಾಡುವುದು ನಮ್ಮ
ಗುರಿಯಾಗಿರಲಿ. ನಾವೆಲ್ಲರೂ ಜಾತಿ ಭೇದ ಮರೆತು, ತುಳು
ಕನ್ನಡಿಗರಾಗಿ ಕನ್ನಡ ಶಾಲೆಗಳಿಗೆ ಹಾಗೂ
ಶಿಕ್ಷಣದಲ್ಲಿ ವಂಚಿತರಾಗುವವರಿಗೆ ಸಹಕರಿಸೋಣ. ರಾಜ್ಯೋತ್ಸವ ಪ್ರಶಸ್ತಿಯು ನನಗೆ ಸಿಕ್ಕಿದೆ ಅನ್ನುದರ
ಬದಲು ಮಹಾರಾಷ್ಟ್ರದಲ್ಲಿನ ಎಲ್ಲಾ ತುಳು ಕನ್ನಡಿಗರ
ಪರವಾಗಿ ನಾನು ಸ್ವೀಕರಿಸಿದ್ದೇನೆ ಎಂದು
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಡಿ
ಶೆಟ್ಟಿ ಹೇಳಿದರು.
ಅವರು ಡಿ. 5 ರಂದು ನವಿಮುಂಬಯಿಯ ಸಿಬಿಡಿಯಲಿರುವ ಭವಾನಿ ಪೌಂಡೇಶನ್ ನ ಕಾರ್ಯಾಲಯದಲ್ಲಿ ನಡೆದ ವಿಶೇಷ ಸಭೆಯಲ್ಲಿ ಭವಾನಿ ಪೌಂಡೇಶನ್ ವತಿಯಿಂದ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಲ್ಲಿಗೆ ನನ್ನ ಜವಾಬ್ಧಾರಿ ಮುಗಿಯಲಿಲ್ಲ. ಇದೀಗ ನನ್ನ ಜವಾಬ್ಧಾರಿ ಹೆಚ್ಚಾಗಿದೆ. ನಾವು ಸಂಪಾದಿಸಿದರಲ್ಲಿ ಒಂದು ಭಾಗವನ್ನು ದಾನ ಧರ್ಮದಲ್ಲಿ ವಿನಿಯೋಗಿಸಬೇಕೆಂಬುದೇ ನನ್ನ ಕನಸು. ಸಮಾಜಸೇವೆ ನನ್ನ ರಕ್ತದಲ್ಲಿದೆ. ರಾತ್ರಿ ಶಾಲೆಯಲ್ಲಿ ಕಲಿತು ಬಡವರ ಕಣ್ಣೀರೊರಸುವ ಕೆಲಸವನ್ನು ಮಾಡುವ ಭಾಗ್ಯ ನನಗೆ ದೊರಕಿದೆ ಎಂದರು.
ಈ ಸಂದರ್ಭ ಫೌಂಡೇಶನ್ ಟ್ರಸ್ಟಿಗಳಾದ ಧರ್ಮಪಾಲ ಯು ದೇವಾಡಿಗ, ದಿನೇಶ್ ಶೆಟ್ಟಿ, ಕರ್ನೂರು ಮೋಹನ್ ರೈ, ಪದಾಧಿಕಾರಿ ರವಿ ಉಚ್ಚಿಲ್ ಹಾಗೂ ಇತರ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಅಭಿನಂದಿಸಿದರು. ಭವಾನಿ ಪೌಂಡೇಶನ ಟ್ರಷ್ಟಿ ಪತ್ರಕರ್ತ ಪ್ರೇಮನಾಥ ಶೆಟ್ಟಿ ಮುಂಡ್ಕೂರು ಧನ್ಯವಾದ ಸಮರ್ಪಿಸಿದರು.