BUNTS NEWS, ಮುಂಬಯಿ: ಡಿ. 5 ರಂದು ನವಿಮುಂಬಯಿಯ ಸಿಬಿಡಿಯಲಿರುವ ಭವಾನಿ ಪೌಂಡೇಶನ್ ನ ಕಾರ್ಯಾಲಯದಲ್ಲಿ ನಡೆದ ವಿಶೇಷ ಸಭೆಯಲ್ಲಿ ಭವಾನಿ ಪೌಂಡೇಶನ್ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ. ಡಿ. ಶೆಟ್ಟಿಯವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಭವಾನಿ ಪೌಂಡೇಶನ ಟ್ರಷ್ಟಿ ಹಾಗೂ ಅಖಿಲ ಬಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ಯು ದೇವಾಡಿಗ ಅವರು ಮಾತನಾಡಿ, ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿಯೊಬ್ಬ ಸಾಧನೆ ಮತ್ತು ಛಲದ ದೊಂದಿಗೆ ಎತ್ತರಕ್ಕೇರಬಹುದು ಎಂಬುದಕ್ಕೆ ಕೆ. ಡಿ. ಶೆಟ್ಟಿಯವರು ಉದಾಹರಣೆ. ನಿರಂತರ ಪರಿಶ್ರಮದಿಂದ ಸ್ವಂಥ ಉದ್ಯಮವನ್ನು ಪ್ರಾರಂಭಿಸಿ ಅಸಹಾಯಕರಿಗೆ ಸಹಾಯ ಮಾಡುವ ಉದ್ದೇಶದಿಂದ ತನ್ನ ಮಾತೃಶ್ರೀಯವರ ಹೆಸರಲ್ಲಿ ಭವಾನಿ ಪೌಂಡೇಶನ ಸಂಸ್ಥೆಯನ್ನು ಸ್ಥಾಪಿಸಿ ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿನ ಜನ ಸಾಮಾನ್ಯರಿಗೆ ಸಹಾಯ ಮಾಡುತ್ತಿರುದನ್ನು ಕರ್ನಾಟಕ ಸರಕಾರ ಗುರುತಿಸಿ ಈ ಸಲದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಮುಂದಿನ ದಿನಗಳಲ್ಲಿ ಇವರ ಸೇವಾಕಾರ್ಯವನ್ನು ದೇಶ ಗುರುತಿಸುವಂತಾಗಲಿ ಎಂದು ಅಭಿನಂದಿಸಿ ಹಾರೈಸಿದರು.
ಇಂಡಿಯನ್ ಎಕ್ಪ್ರೆಸ್ ಪತ್ರಿಕೆಯ ಪತ್ರಕರ್ತ, ಭವಾನಿ ಪೌಂಡೇಶನ ಟ್ರಷ್ಟಿ ದಿನೇಶ್ ಶೆಟ್ಟಿ ಮಾತನಾಡಿ ಕೆ. ಡಿ. ಶೆಟ್ಟಿಯ ಸಾಧನೆ ಹಾಗೂ ಜನ ಸಾಮಾನ್ಯರ ಸೇವೆಯನ್ನು ಮಹಾರಾಷ್ಟ್ರ ಸರಕಾರವೂ ಗುರುತಿಸಿ ಅವರನ್ನು ಗೌರವಿಸುವಂತಾಗಲಿ ಎಂದರು.
ಕಾರ್ಯಕ್ರಮವನ್ನು ನಿರ್ವಹಿಸಿದ ಭವಾನಿ ಪೌಂಡೇಶನ ಇನ್ನೋರ್ವ ಟ್ರಷ್ಟಿ ಕರ್ನೂರು ಮೋಹನ್ ರೈಯವರು ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ, ವೈದ್ಯಕೀಯ ಹಾಗೂ ಆದಿವಾಸಿ ಜನರಿಗೆ ಸಹಾಯ ಮಾಡುತ್ತಾ ಬಂದಿರುವ ಭವಾನಿ ಪೌಂಡೇಶನ ಸೇವಾ ಕಾರ್ಯವನ್ನು ಕರ್ನಾಟಕ ಸರಕಾರ ಗುರುತಿಸಿದೆ ಎನ್ನುತ್ತಾ ಈ ಸೇವೆಯು ನಿರಂತರವಾಗಿ ಮುಂದುವರಿಯಲಿ ದೆಎಂದರು.
ಫೌಂಡೇಶನ್ಪದಾಧಿಕಾರಿ ರವಿ ಉಚ್ಚಿಲ್ ಹಾಗೂ ಇತರ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಅಭಿನಂದಿಸಿದರು. ಭವಾನಿ ಪೌಂಡೇಶನ ಟ್ರಷ್ಟಿ ಪತ್ರಕರ್ತ ಪ್ರೇಮನಾಥ ಶೆಟ್ಟಿ ಮುಂಡ್ಕೂರು ಧನ್ಯವಾದ ಸಮರ್ಪಿಸಿದರು.