ಎಲ್ಲರನ್ನು ಪ್ರೀತಿಸಿ ಗೌರವಿಸುವ ಸಮಾಜ ಬಂಟ ಸಮಾಜ : ಕಲ್ಲಡ್ಕ ಪ್ರಭಾಕರ ಭಟ್ - BUNTS NEWS WORLD

ಎಲ್ಲರನ್ನು ಪ್ರೀತಿಸಿ ಗೌರವಿಸುವ ಸಮಾಜ ಬಂಟ ಸಮಾಜ : ಕಲ್ಲಡ್ಕ ಪ್ರಭಾಕರ ಭಟ್

Share This

BUNTS NEWS, ಉಡುಪಿ: ಬಂಟ ಸಮಾಜ ನಮ್ಮ ನಾಡಿನ ಒಂದು ಕೃಷಿ ಸಮಾಜ. ಅದರೊಂದಿಗೆ ತಮ್ಮ ಉದ್ಯಮವನ್ನು ಬೆಳೆಸಿಕೊಂಡ ಸಮಾಜ. ಇಂತಹ ಬಂಟ ಸಮಾಜದ ಬಂದುಗಳು ಮುಂಬಯಿ, ವಿದೇಶದಿಂದ ಹಾಗೂ ಇತರೆಡೆಯಿಂದ ಬಂದು ಕಷ್ಟದ ಸಮಯದಲ್ಲಿ ತಮ್ಮ ಹುಟ್ಟೂರ ಜನತೆಗೆ ಸಹಾಯ ಮಾಡುತ್ತಿರುವುದು ಅಭಿನಂದನೀಯವೆಂದು ಅರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.

ಅವರು ಉಡುಪಿಯಲ್ಲಿ ನಡೆದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಮಾಜ ಕಲ್ಯಾಣ ಸಹಾಯ ವಿತರಣೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.ಎಲ್ಲಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿ ಜನ ಸೇವೆಯನ್ನು ಮಾಡುತ್ತಿರುವ ಬಂಟ ಸಮಾಜವು ಎಲ್ಲರನ್ನು  ಗುರುತಿಸಿ ಗೌರವಿಸುತ್ತದೆ. ವಿದ್ಯಾರ್ಥಿಗಳಿಗೆ ಸಹಾಕಾರ ನೀಡುವ ಯೋಜನೆಯನ್ನು ಒಕ್ಕೂಟವು ಮಾಡಿದೆ. ವಿದ್ಯಾರ್ಥಿ ಜೀವನ ಸರ್ವಶ್ರೇಷ್ಠ. ಅಂತಹ ಶಿಕ್ಷಣವನ್ನು ಪಡೆಯುವ ಎಲ್ಲಾ ಸಮುದಾಯದ ಮಕ್ಕಳಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಐಕಳ ಹರೀಶ್ ಶೆಟ್ಟಿಯವರ ನೇತೃತ್ವದಲ್ಲಿ ಬೆಳಕಾಗುವ ಕಾರ್ಯ ನಡೆಯುತ್ತಿದೆ. ಕಷ್ಟದಲ್ಲಿರುವವರ ಕಣ್ಣೀರನ್ನು ಒರಸುವ ಕಾರ್ಯವನ್ನು ಬಂಟ ಸಮಾಜವು ಮಾಡುತ್ತಿದ್ದು ಸಂಘಟನೆಗೆ ದೇವರು ಇನಷ್ಟು ಶಕ್ತಿಯನ್ನು ಒದಗಿಸಲಿ ಎಂದು ಹಾರೈಸಿದರು

Pages