BUNTS NEWS, ಉಡುಪಿ: ಉಡುಪಿಯ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಗೃಹದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ಸಮಾಜ ಕಲ್ಯಾಣ ಸಹಾಯ ವಿತರಣೆ ಸಮಾರಂಭಕ್ಕೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರನ್ನುಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭ ಮಾತನಾಡಿದ ಅವರು, ಬಂಟ ಸಮಾಜವು ಬಡವರ ಕಣ್ಣೀರೊರಸುವ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಇಂತಹ ಕಾರ್ಯಕ್ರಮದಲ್ಲಿ ನಿಮ್ಮೊಂದಿಗೆ ನಾನೂ ಸದಾ ಇದ್ದೇನೆ ಎಂದರು. ಐಕಳ ಹರೀಶ್ ಶೆಟ್ಟಿಯವರ ನಾಯಕತ್ವದ ಬಗ್ಗೆ ದೂರದ ಬೆಂಗಳೂರಿನಲ್ಲಿರುವ ನಾನು ಬಹಳ ಕೇಳಿರುವೆನು ಎನ್ನುತ್ತಾ ಸಮಾರಂಭಕ್ಕೆ ಶುಭ ಹಾರೈಸಿದರು.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಿದ್ದ ಡಿ. ಕೆ. ಶಿವಕುಮಾರ್ ಜಾಗತಿಕ ಬಂಟರ ಸಂಘದ ಕಾರ್ಯಕ್ರಮಕ್ಕೆ ಆಗಮಿಸಿದ್ದು ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಈ ಸಂಧರ್ಭದಲ್ಲಿ ಡಿ. ಕೆ. ಶಿವಕುಮಾರ್ ಅವರಿಗೆ ಕೃತಜ್ನತೆ ಸಲ್ಲಿಸುತ್ತಾ ಪಕ್ಷ ಯಾವುದೇ ಆಗಲಿ ಉತ್ತಮ ಕೆಲಸ ಮಾಡುವವರೊಂದಿಗೆ ಬಂಟ ಸಮಾಜವು ಯಾವತ್ತೂ ಇದೆ ಎಂದರು.
ಸಮಾರಂಭಕ್ಕೆ ರಾಜಕೀಯ ಮುಖಂಡರುಗಳಾದ ವಿನಯಕುಮಾರ್ ಸೊರಕೆ, ಅಭಯಚಂದ್ರ ಜೈನ್, ಮಿಥುನ್ ರೈ ಹಾಗೂ ಡಾ. ದೇವಿ ಪ್ರಸಾದ್ ಶೆಟ್ಟಿ, ನವೀನ್ ಚಂದ್ರ ಶೆಟ್ಟಿ ಪಡುಬಿದ್ರೆ ಆಗಮಿಸಿ ಸುಭ ಹಾರೈಸಿದರು.