ತುರ್ತು ಸಹಾಯ ಕೋರಿದ ವಿಡಿಯೋ ವೀಕ್ಷಿಸಿ ತಕ್ಷಣ ಸ್ಪಂದಿಸಿದ್ದ ಐಕಳ ಹರೀಶ್ ಶೆಟ್ಟಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ತುರ್ತು ಸಹಾಯ ಕೋರಿದ ವಿಡಿಯೋ ವೀಕ್ಷಿಸಿ ತಕ್ಷಣ ಸ್ಪಂದಿಸಿದ್ದ ಐಕಳ ಹರೀಶ್ ಶೆಟ್ಟಿ

Share This

ಬಂಟ್ಸ್ ನ್ಯೂಸ್, ಮುಂಬಯಿ : ಮಂಗಳೂರು ಬೋಳಾದ ರಂಜೇಶ್ ಶೆಟ್ಟಿಯವರು ಖಾಸಗಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಪತ್ನಿ ತನ್ನ ಪತಿಯನ್ನು ರಕ್ಷಿಸಲು ತುರ್ತು ಹಣದ ಅಗತ್ಯವಿರುವ ಬಗ್ಗೆ ವಿಡಿಯೋ ಮೂಲಕ ಸಮಾಜಿಕ ತಾಣದಲ್ಲಿ ಆಕೆ ತನ್ನ ಕಷ್ಟವನ್ನು ತಿಳಿಸುತ್ತಾ ದಾನಿಗಳ ತುರ್ತು ಸಹಾಯವನ್ನು ಕೋರಿದ್ದರು.

help

ಮಹಿಳೆಯ ಈ ವಿಡಿಯೋವನ್ನು ವೀಕ್ಷಿಸಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಯವರು ಕೂಡಲೇ 50 ಸಾವಿರ ರೂಪಾಯಿ ಸಹಾಯವನ್ನು ವೈಯಕ್ತಿಕವಾಗಿ ನೀಡಿದರಲ್ಲದೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ರೂ. 25 ಸಾವಿರದ ಚೆಕ್ ನೀಡಿ ಮಾನವೀಯತೆ ಮೆರೆದಿದ್ದಾರೆ.


ಬೋಳಾದ ರಂಜೇಶ್ ಶೆಟ್ಟಿಯವರು ಕಳೆದ ಹಲವಾರು ಸಮಯದಿಂದ ಹೃದಯ ಹಾಗೂ ಕಿಡ್ನಿ ವೈಫಲ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದು ಆಸ್ಪತ್ರೆಯ ಬಿಲ್ಲು ಕಟ್ಟಲು ಅಸಾಯಕರಾಗಿರುವ ಇವರ ಪತ್ನಿಯ ಕರುಣಾಜನಕ ವಿಡಿಯೋ ನೋಡಿ ದೇಶ ವಿದೇಶದ ಎಲ್ಲಾ ಸಮಾಜ ಬಾಂಧವರು ಜಾತಿ, ಮತ, ಭೇದವಿಲ್ಲದೆ ತಮ್ಮ ಸಹಾಯ ಹಸ್ತವನ್ನು ನೀಡಲು ಮುಂದೆ ಬಂದಿದ್ದು ಹೆಚ್ಚಿನ ಚಿಕಿತ್ಸೆಗೆ ರಂಜೇಶ್ ಶೆಟ್ಟಿಯವರನ್ನು ಕೆ. ಎಸ್. ಹೆಗ್ಡೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.


ಆದರೆ ಚಿಕಿತ್ಸೆ ಫಲಕಾರಿಯಾಗಿದೆ ರಂಜೇಶ್ ಅವರು ನಿಧನರಾಗಿದ್ದಾರೆ. ರಂಜೇಶ್ ಅವರ ಚಿಕಿತ್ಸೆಗೆ ಒಟ್ಟು 7 ಲಕ್ಷಗಳ ಅಗತ್ಯವಿತ್ತು. ಎಲ್ಲಾ ಧರ್ಮದ ದಾನಿಗಳು ಶ್ರೀಘ್ರವೇ ಹೆಚ್ಚಿನ ಸಂಖ್ಯೆಯಲ್ಲಿ ಸಹಾಯಹಸ್ತ ನೀಡುವ ಮೂಲಕ ಒಟ್ಟು 14 ಲಕ್ಷ ಹಣ ಸಂಗ್ರಹವಾಗಿತ್ತು ಎನ್ನಲಾಗಿದೆ.

Pages