ತುಳು ಕಾವ್ಯ ಯಾನ : 'ಬೀರದ ಬೊಲ್ಪು' ಸುಗಿಪು - ದುನಿಪು - BUNTS NEWS WORLD

ತುಳು ಕಾವ್ಯ ಯಾನ : 'ಬೀರದ ಬೊಲ್ಪು' ಸುಗಿಪು - ದುನಿಪು

Share This

ಮಂಗಳೂರು: ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ತುಳುನಾಡ ಅಟ್ಟೆಮಿ ಪ್ರಯುಕ್ತ ಸೆಪ್ಟೆಂಬರ್ 10 ರಂದು ತುಳು ಮಹಾಕವಿ ದಿ. ಮಂದಾರ ಕೇಶವ ಭಟ್ಟ ಅವರ 'ಬೀರದ ಬೊಲ್ಪು ( ಸಿರಿ ಕಿಟ್ಣ ಲೀಲೆ )' ಕಾವ್ಯದ ಸುಗಿಪು - ದುನಿಪು ಕಾರ್ಯಕ್ರಮ ಜರಗಿತು.

ತುಳು ವರ್ಲ್ಡ್ (ರಿ.) ಕುಡ್ಲ ಇದರ  ತುಳು ಕಾವ್ಯಯಾನದ 5 ನೇ ಸರಣಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮಕ್ಕೆ ಕರ್ನಾಟಕ ಜಾನಪದ ಪರಿಷತ್ತು .. ಮತ್ತು ಸಂಸ್ಕಾರ ಭಾರತಿ ಮಂಗಳೂರು ಸಹಯೋಗ ನೀಡಿದ್ದರು.


ಯಕ್ಷ ಕಾವ್ಯ ಗಾಯನದ ವಿಶಿಷ್ಟ ಪ್ರಯೋಗದೊಂದಿಗೆ ಜರಗಿದ 'ಬೀರದ ಬೊಲ್ಪು : ಸುಗಿಪು - ದುನಿಪು' ಕಾರ್ಯಕ್ರಮದಲ್ಲಿ ಯಕ್ಷಗಾನ ಅರ್ಥಧಾರಿ ಮತ್ತು ಪ್ರವಚನಕಾರ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಕಾವ್ಯ ಪರಿಚಯದೊಂದಿಗೆ ಕಥಾ ನಿರೂಪಣೆ ಮತ್ತು ವ್ಯಾಖ್ಯಾನವನ್ನು ನಡೆಸಿಕೊಟ್ಟರು. ಖ್ಯಾತ ಯಕ್ಷಗಾನ ಭಾಗವತರಾದ ಯಕ್ಷ ಧ್ರುವ ಪಟ್ಲ ಸತೀಶ ಶೆಟ್ಟಿ ಮತ್ತು ಕಾವ್ಯಶ್ರೀ ಅಜೇರು ಯಕ್ಷಗಾನ ಧಾಟಿಯಲ್ಲಿ ಕಾವ್ಯವಾಚನ ಮಾಡಿದರು.


ಗುರುಪ್ರಸಾದ್ ಬೊಳಿಂಜಡ್ಕ ಮದ್ದಳೆ ನುಡಿಸಿದರು. ತುಳು ವರ್ಲ್ಡ್ (ರಿ) ಕುಡ್ಲ ಅಧ್ಯಕ್ಷ ಡಾ. ರಾಜೇಶ್ ಆಳ್ವ ಬದಿಯಡ್ಕ ಕಾರ್ಯಕ್ರಮ ಸಂಯೋಜಿಸಿದರು.

Pages