ಯೂಟ್ಯೂಬ್ ಲೈವ್ ಯಕ್ಷಗಾನ ಪುನರಾರಂಭ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಯೂಟ್ಯೂಬ್ ಲೈವ್ ಯಕ್ಷಗಾನ ಪುನರಾರಂಭ

Share This

ಮಂಗಳೂರು: ಕೋವಿಡ್ 19 ರಿಂದಾಗಿ ಸ್ಥಗಿತಗೊಂಡಿದ್ದ ಯೂಟ್ಯೂಬ್ ಲೈವ್ ಯಕ್ಷಗಾನ ಕಾರ್ಯಕ್ರಮವನ್ನು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಪುನರಾರಂಭಿಸಿದೆ.

yakshagana
yakshagana

ಕಾರ್ಯಕ್ರಮಕ್ಕೆ ಆಗಮಿಸಿ ಜ್ಯೋತಿ ಬೆಳಗಿಸಿದ ಉದ್ಯಮಿ ಹಾಗೂ ಕಲಾಪೋಷಕರಾದ ಉದಯ ಶೆಟ್ಟಿ ಇನ್ನರವರು ಕೊರೊನಾದಿಂದ ಎಲ್ಲಾ ರಂಗದ ಕಲಾವಿದರು ಸಂಕಷ್ಟಕ್ಕೆ ಸಿಲುಕುವಂತಾಯಿತು. ಸಂದರ್ಭದಲ್ಲಿ ಯಕ್ಷಗಾನದ ಕಲಾವಿದರಿಗೆ ಸ್ವಲ್ಪ ಮಟ್ಟಿಗಾದರೂ ಆಸರೆಯಾಗುವುದರೊಂದಿಗೆ ಯಕ್ಷಗಾನ ಕಲಾಪ್ರೇಮಿಗಳಿಗೂ ಯೂ ಟ್ಯೂಬ್ ಮೂಲಕ ಯಕ್ಷಗಾನ ವೀಕ್ಷಿಸಲು ಅವಕಾಶ ಕಲ್ಲಿಸಿಕೊಟ್ಟಿರುವುದಕ್ಕೆ ಪಟ್ಲ ಫೌಂಡೇಶನ್ ಟ್ರಸ್ಟಿಗೆ ಅಭಿನಂದನೆ ಸಲ್ಲಿಸಿ ಪಟ್ಲ ಸತೀಶ್ ಶೆಟ್ಟಿಯವರಿಗೆ ತಾಯಿ ಭ್ರಮರಾಂಭೆಯ ಆಶೀರ್ವಾದ ಸದಾ ಇರಲೆಂದು ಶುಭ ಹಾರೈಸಿದರು.


ಮುಖ್ಯ ಅತಿಥಿಗಳಾದ ಅಖಿಲ ಭಾರತ ತುಳು  ಒಕ್ಕೂಟದ ಕೋಶಾಧಿಕಾರಿ ಹಾಗೂ ವಿಜಯ ಬ್ಯಾಂಕ್ ನಿವೃತ್ತ ಅಧಿಕಾರಿ ಕರುಣಾಕರ ಶೆಟ್ಟಿ, ಪಟ್ಲ ಫೌಂಡೇಶನಿನ ವರೆಗಿನ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿಯವರು, ಇತ್ತೀಚೆಗೆ ಹರಿಪಾದದಲ್ಲಿ ಲೀನರಾದ  ಯಕ್ಷಗಾನ ಕಲಾವಿದರ ಆಶ್ರಯದಾತ  ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿಯವರಿಗೆ ಬಾವ-ನಮನಗಳನ್ನು ಸಲ್ಲಿಸಿದರು.


ವೇದಿಕೆಯಲ್ಲಿ ಮುಂಬಯಿ ಘಟಕದ ಮಹೇಶ್ ಶೆಟ್ಟಿ, ಕೇಂದ್ರೀಯ ಸಮಿತಿಯ ಪ್ರದಾನ ಕಾರ್ಯದರ್ಶಿ  ಪುರುಷೋತ್ತಮ ಭಂಡಾರಿ ಅಡ್ಯಾರ್, ಕೋಶಾಧಿಕಾರಿ ಸಿ.. ಸುದೇಶ್ ಕುಮಾರ್ ರೈ, ಉಪಾಧ್ಯಕ್ಷರಾದ ದುರ್ಗಾಪ್ರಸಾದ್ ಈರೋಡ್, ಮಂಗಳೂರು ಘಟಕದ ರವಿ ಶೆಟ್ಟಿ ಅಶೋಕನಗರ ಹಾಗೂ ಕಟೀಲು ಘಟಕದ ಸತೀಶ್ ಶೆಟ್ಟಿ ಉಪಸ್ಥಿತರಿದ್ದರು.


ಸಂದರ್ಭದಲ್ಲಿ ಬಡಗುತಿಟ್ಟಿನ ಕಲಾವಿದರಿಂದ ದ್ರೌಪದಿ ಪ್ರತಾಪ ಯಕ್ಷಗಾನ ಕಾರ್ಯಕ್ರಮ ಜರಗಿತು. ಮುಂದಿನ ವಾರ ತೆಂಕುತಿಟ್ಟಿನ ಕಾರ್ಯಕ್ರಮ ಜರಗಲಿರುವುದು.

Pages