ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರಿಗೆ ರೋಟರಿ ಮಂಗಳೂರು ಉತ್ತರದ ನೇಶನ್ ಬಿಲ್ಡರ್ ಅವಾರ್ಡ್ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರಿಗೆ ರೋಟರಿ ಮಂಗಳೂರು ಉತ್ತರದ ನೇಶನ್ ಬಿಲ್ಡರ್ ಅವಾರ್ಡ್

Share This

ಬಂಟ್ಸ್ ನ್ಯೂಸ್, ಮಂಗಳೂರು : ತರಗತಿಯ ನಾಲ್ಕು ಗೋಡೆಗಳ ನಡುವೆ ಸಮಾಜವನ್ನು ಕಟ್ಟುವ ಕಾರ್ಯ ಶಿಕ್ಷಕರಿಂದ ನಡೆಯುತ್ತದೆ. ಅದು ಕೇವಲ ವೃತ್ತಿಯಲ್ಲ; ಮನುಕುಲದ ಉದಾತ್ತ ಸೇವೆ. ಆದ್ದರಿಂದ ಶಾಲಾ ಆವರಣದ ಆಚೆಯೂ ಗೌರವಿಸಲ್ಪಡುವ ವ್ಯಕ್ತಿತ್ವವನ್ನು ಅವರು ಬೆಳೆಸಿಕೊಳ್ಳಬೇಕು. ಸಂಘ-ಸಂಸ್ಥೆಗಳು ಶಿಕ್ಷಕರನ್ನು ಕರೆದು ಮನ್ನಣೆ ನೀಡಿದರೆ ಅದು ಸಮಾಜಕ್ಕೆ ಮಾದರಿಯಾಗಲಿದೆ ಎಂದು ಶಿಕ್ಷಣರಂಗದ ಸಾಧಕ, ಲೇಖಕ ಮತ್ತು ಅರ್ಥಧಾರಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದರು.

rotary culb
rotary
rai

ಅವರು ರೋಟರಿ ಕ್ಲಬ್ ಮಂಗಳೂರು ಉತ್ತರ ಇವರು ಮಣ್ಣಗುಡ್ಡೆ ರೋಟರಿ ಭವನದಲ್ಲಿ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ 2019-20ನೇ ಸಾಲಿನ ಪ್ರತಿಷ್ಠಿತ 'ನೇಶನ್ ಬಿಲ್ಡರ್ ಅವಾರ್ಡ್' ಸ್ವೀಕರಿಸಿ ಅವರು ಮಾತನಾಡಿದರು. ಮನುಷ್ಯನಲ್ಲಿ ಅಂತರ್ಭೂತವಾದ ಪರಿಪೂರ್ಣತೆಯನ್ನು ಹೊರಗೆಡಹುದೇ ಶಿಕ್ಷಣ. ಅರಿವನ್ನು ಮೂಡಿಸುವುದು ಶಿಕ್ಷಕರ ಹೊಣೆ. ಕೇವಲ ಅಕ್ಷರಾಭ್ಯಾಸ ಮಾತ್ರವಲ್ಲದೆ ಜೀವನ ಕೌಶಲ್ಯವನ್ನು ಕಲಿತುಕೊಳ್ಳುವುದರಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರು ನೆರವಾಗಬೇಕು ಎಂದವರು ನುಡಿದರು. ರೋಟರಿ ಉತ್ತರದ ಅಧ್ಯಕ್ಷ ರೊ.ತೀರ್ಥಹಳ್ಳಿ ವಿಶ್ವನಾಥ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.


ಮುಖ್ಯ ಅತಿಥಿಗಳಾಗಿ ಮಾತನಾಡಿದ ಎಜೆ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ, ಪಿಡಿಜಿ ಡಾ.ದೇವದಾಸ ರೈ, ಜೀವನದ ಯಾವುದೋ ಹಂತದಲ್ಲಿ ನೆಲೆ ತಪ್ಪಿದವರನ್ನು ಸರಿ ದಾರಿಗೆ ತಂದು ಸುಂದರ ಭವಿಷ್ಯದ ಕಡೆಗೆ ಮುನ್ನಡೆಸಬಲ್ಲ ಗುರು ಮಾರ್ಗದರ್ಶಕ ನಾಗುತ್ತಾನೆ, ತನ್ನ ಸಂಪರ್ಕಕ್ಕೆ ಬಂದ ಕಾರ್ಮಿಕರಿಬ್ಬರನ್ನು ಮತ್ತೆ ವ್ಯಾಸಂಗ ಮುಂದುವರಿಸಲು ಪ್ರಚೋದಿಸಿ ಅವರು ಉನ್ನತ ಸ್ಥಾನವನ್ನೇರುವಂತೆ ಮಾಡಿದ ಎಪಿಜೆ ಅಬ್ದುಲ್ ಕಲಾಂ ಅವರು ಶಿಕ್ಷಕ ಸಮುದಾಯಕ್ಕೆ ಆದರ್ಶಪ್ರಾಯರು ಎಂದರು.


ಸಮಾರಂಭದಲ್ಲಿ ಶಿಕ್ಷಣ ರಂಗಕ್ಕೆ ಶ್ಲಾಘನೀಯ ಸೇವೆಸಲ್ಲಿಸಿದ ಶಿಕ್ಷಕಿಯರಾದ ವೀಣಾ ಬಿ., ನಿರ್ಮಲಾ ಅಮೀನ್, ಫ್ರೀಡಾ .ಮಾಬೆನ್ ಮತ್ತು ಸಾವಿತ್ರಿ ಕೆ. ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕರ ದಿನಾಚರಣೆಯಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮಂಗಳೂರು ಇವರಿಂದ ಸನ್ಮಾನಿಸಲ್ಪಟ್ಟ ಪಿಪಿ ಡಾ. ಪ್ರಕಾಶ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ರೊ.ಅಜಿತ್ ರಾವ್ ಅವರ ಸಂಪಾದಕತ್ವದಲ್ಲಿ ಹೊರತಂದ ರೊಟನೋರ್ ರೋಟರಿ ಸಾಪ್ತಾಹಿಕವನ್ನು ಸಭಾಧ್ಯಕ್ಷ ರೊ.ತೀರ್ಥಹಳ್ಳಿ ವಿಶ್ವನಾಥ ಶೆಟ್ಟಿ ಬಿಡುಗಡೆಗೊಳಿಸಿದರು.


ರೋಟರಿ ಉತ್ತರ ಕಾರ್ಯದರ್ಶಿ ಅಡ್ವೋಕೇಟ್ ವಿಠ್ಠಲ್ ಕುಡ್ವಾ ಸ್ವಾಗತಿಸಿದರು. ಗಣೇಶ್ ಕೆ. ಭಟ್ ಮತ್ತು ಅಜಿತ್ ರಾವ್ ಅತಿಥಿಗಳನ್ನು ಪರಿಚಯಿಸಿದರು. ಕ್ಲಬ್ ನಿರ್ದೇಶಕ ರಾಧಾಕೃಷ್ಣ ರೈ ಪ್ರಾರ್ಥಿಸಿದರು. ಯೋಜನಾ ನಿರ್ದೇಶಕ ಡಾ. ಆಲ್ವಿನ್ ಡೇಸಾ ಮತ್ತು ನಿಕಟಪೂರ್ವ ಅಧ್ಯಕ್ಷ ನಯನ್ ಕುಮಾರ್ ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷ (ಆಯ್ಕೆ) ದೇವದಾಸ ರಾವ್ ವಂದಿಸಿದರು. ಸಾರ್ಜೆಂಟ್ ಆರ್ಮ್ಸ್ ಸುರೇಶ್ ಕಿಣಿ ಸಹಕರಿಸಿದರು.

Pages