ಬಂಟ್ಸ್ ನ್ಯೂಸ್, ಪುತ್ತೂರು: ಜನ್ಮ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ಮೂಡಿಬಂದ ಮೂರನೇ ಕಿರುಚಿತ್ರ ‘ವಂದೇ ಮಾತರಂ’ ಇದೇ ಅಗಸ್ಟ್ 15 ಸ್ವತಂತ್ರ ದಿನಾಚರಣೆಯಂದು ಬಿಡುಗಡೆಗೊಳ್ಳಲಿದೆ.
ಕೋರನಾ ಸಂಕಷ್ಟದಲ್ಲಿ ಹಗಲಿರುಲು ಶ್ರಮಿಸುತ್ತಿರುವ ವೈದ್ಯರು, ಪೋಲಿಸರು, ಸರ್ಕಾರಿ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರ ಗೌರವಾರ್ಥ ಡಾ.ಹರ್ಷ ಕುಮಾರ ರೈ ಮಾಡಾವು ನಿರ್ಮಾಣ ಮಾಡಿರುವ ಈ ಕಿರುಚಿತ್ರದಲ್ಲಿ ಹಲವು ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ.
ಯುವ ಸಾಕ್ಸೋಪೋನ್ ವಾದಕ ವೇಣುಗೋಪಾಲ್, ಅಪೂರ್ವ ಸುರತ್ಕಲ್ ಪ್ರದಾನ ಪಾತ್ರದಲ್ಲಿದ್ದು, ಕ್ಯಾಮರಮೆನ್ ಆಗಿ ಅರುಣ್ ರೈ ಪುತ್ತೂರು, ತಂತ್ರಜ್ಞರಾಗಿ ಶಿನೋಯ್ ಜೋಸೆಫ್, ಲಕ್ಕಿ ಪುತ್ತೂರು ಹಾಗೂ ಕಾರ್ತಿಕ್ ಕುಂದರ್ ಕಾರ್ಯ ನಿರ್ವಹಿಸಿದ್ದಾರೆ.
ಜನ್ಮ ಕ್ರಿಯೇಷನ್ಸ್ ನಿಂದ ಈ ಹಿಂದೆ ಭಕ್ತಿ ಗೀತೆಗಳ ‘ಅಷ್ಟ ಕ್ಷೇತ್ರ ಗಾನ ವೈಭವ’ ಧ್ವನಿ ಮುದ್ರಿಕೆ, ದೇಶ ಭಕ್ತಿಯ ‘ಭಾರತ್ ಮಾತಾ ಕೀ ಜೈ’ ಹಿಂದಿ ಕಿರುಚಿತ್ರ ನಿರ್ಮಾಣ ಗೊಂಡಿರುತ್ತದೆ.