ಶ್ರೀನಿಧಿ ಶೆಟ್ಟಿ ಅವರು ತುಳುನಾಡಿನ ಪ್ರತಿಷ್ಠಿತ ಗುತ್ತುಮನೆಗಳಲ್ಲಿ ಒಂದಾದ ಕಿನ್ನಿಗೋಳಿಯ ತಾಳಿಪಾಡಿ ಗುತ್ತುವಿನಲ್ಲಿ 1992ರ ಅಕ್ಟೋಬರ್ 21ರಂದು ಜನಿಸಿದರು. ತಂದೆ ರಮೇಶ್ ಶೆಟ್ಟಿ ತಾಯಿ ಕುಶಾಲ ಶೆಟ್ಟಿ ಅವರ ಮುದ್ದಿನ ಮಗಳು ಶ್ರೀನಿಧಿ ತನ್ನ ಪ್ರಾಥಮಿಕ ಶಿಕ್ಷಣವನ್ನು ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆ ಹಾಗೂ ಪಿಯು ಶಿಕ್ಷಣವನ್ನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪಡೆದಿದರು. ಬೆಂಗಳೂರಿನ ಜೈನ್ ವಿಶ್ವವಿದ್ಯಾನಿಲಯದಲ್ಲಿ ಬ್ಯಾಚುಲಾರ್ ಆಫ್ ಇಂಜಿನಿಯರಿಂಗ್ ವಿಷಯದಲ್ಲಿ ಪದವಿಯನ್ನು ಪಡೆದಿದ್ದಾರೆ.



ಸಾಧಾನೆಗಳು: 2012ರ Clean & Clear ಆಯೋಜನೆಯ Fresh Face Contest ಸ್ವರ್ಧೆಯಲ್ಲಿ ಭಾಗವಹಿಸಿ ಅಂತಿಮ ಹಂತದ 5 ಸ್ವರ್ಧಿಗಳಲ್ಲಿ ಒಬ್ಬರಾಗಿ ಸ್ಥಾನ ಪಡೆದಿದ್ದರು. 2015ರಲ್ಲಿ Manappuram Miss South India ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ Miss Karnataka ಮತ್ತು Miss Beautiful Smile ಹಾಗೂ ಮಣಪ್ಪುರಂನಲ್ಲಿ ನಂತರ ನಡೆದ Miss Queen of India ಸೌಂದರ್ಯ ಸ್ಪರ್ಧೆಯಲ್ಲಿ 1st ರನ್ನರ್ ಆಪ್ ಆಗಿ ಆಯ್ಕೆಯಾಗಿ Miss Congeniality ಕಿರೀಟ ಪಡೆದರು. Miss Diva 2016ರ ಸೌಂದರ್ಯ ಸ್ಪರ್ಧೆಯಲ್ಲಿ Miss Supranational India 2016 ಕಿರೀಟ ಪಡೆದರು. ಅಂತರಾಷ್ಟ್ರೀಯ ಮಟ್ಟದ Miss Supranational 2016 ಭಾರತವನ್ನು ಪ್ರತಿನಿಧಿಸಿ Miss Supranational Asia and Oceania 2016 ಗೆದ್ದುಕೊಂಡರು. ಭಾರತವನ್ನು ಪ್ರತಿನಿಧಿಸಿ Miss Supranational ವಿಜೇತದವರಲ್ಲಿ ಶ್ರೀನಿಧಿ ಧ್ವಿತೀಯಳು.
ಸಿನಿಮಾರಂಗ: 2018ರಲ್ಲಿ ಪ್ರಶಾಂತ್ ನೀಲ್
ನಿರ್ದೇಶನದ ಕನ್ನಡ ಸಿನಿಮಾ KGF ನಲ್ಲಿ ಅಭಿನಯಿಸಿ ಮೆಚ್ಚುಗೆಗೆ ಪಾತ್ರರಾಗಿದ್ದರು . ಇದೀಗ K.G.F:
Chapter 2ನಲ್ಲೂ ನಟಿಯಾಗಿ ಅಭಿನಯಿಸಿದ್ದು ಮುಂದಿನ ದಿನಗಳಲ್ಲಿ ಸಿನಿಮಾ ತೆರೆ ಕಾಣಲಿದೆ. ನಟ
ವಿಕ್ರಮ್ ಅಭಿನಯದ ತಮಿಳು ಸಿನಿಮಾ ಕೋಬ್ರಾ (Cobra)ದಲ್ಲೂ ಶ್ರೀನಿಧಿ
ಅಭಿನಯಿಸಿದ್ದಾರೆ. (ಚಿತ್ರ ಕೃಪೆ: Fb/SrinidhiShettyOfficial)