ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನದಲ್ಲಿ ಸಂಭ್ರಮದ ಹೋಳಿ ಆಚರಣೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನದಲ್ಲಿ ಸಂಭ್ರಮದ ಹೋಳಿ ಆಚರಣೆ

Share This
ಬಂಟ್ಸ್ ನ್ಯೂಸ್, ಮಂಗಳೂರು: ಬಂಟರಯಾನೆ ನಾಡವರ ಮಾತೃ ಸಂಘದ ಆಡಳತಕೊಳಪಟ್ಟ ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನದಲ್ಲಿ ಕಳೆದ 70 ವರ್ಷದ ಇತಿಹಾಸದಲ್ಲೆ ಮೊದಲ ಬಾರಿಗೆ ಹೋಳಿ ಹುಣ್ಣಿಮೆಯ ಪ್ರಯುಕ್ತ ಹೋಳಿ ಹಬ್ಬವನ್ನು ಆಚರಿಸಲಾಯಿತು.
ಸಮಿತಿಯ ಸದಸ್ಯರಾದ ಡಾ|ಅಮೃತ ಭಂಡಾರಿ ಪ್ರಾಧ್ಯಾಪಕರು .ಜೆ ಮೆಡಿಕಲ್ ಕಾಲೇಜು, ಸಂಚಾಲಕರಾದ ಉಷಾ.ಎಚ್.ಬಲ್ಲಾಳ್ ದೀಪ ಹಚ್ಚಿ ಬಣ್ಣ ಎರೆಚುವುದರ ಮೂಲಕ ಚಾಲನೆ ನೀಡಿದರು. ಸಂದರ್ಭದಲ್ಲಿ ಪ್ರಸ್ತುತ ಆರೋಗ್ಯ ಕ್ಷೇತ್ರದಲ್ಲಿ ಎಲ್ಲರ ನಿದ್ದೆಗೆಡಿಸುತ್ತಿರುವ ಕೊರೋನಾ ವೈರಸ್ ರೋಗದ ಲಕ್ಷಣ ಹಾಗೂ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಬಗ್ಗೆ ಉಪಯುಕ್ತ ವೈದ್ಯಕೀಯ ಮಾಹಿತಿಯನ್ನು ಅಮೃತ ಭಂಡಾರಿಯವರು ನೀಡಿದರು.

ಎಲ್ಲಾ ಬಣ್ಣಗಳು ಸೇರಿ ಬಿಳಿ ಬಣ್ಣವಾಗುವಂತೆ ಎಲ್ಲಾ ಜಾತಿ,ಮತಗಳು ಸಾಮರಸ್ಯದಿಂದ ಬದುಕಿ ಶಾಂತಿಯ ಸಂದೇಶ ಸಾರುವ ಸಾಂಕೇತಿಕ ಆಚರಣೆಯಾಗಿ ಹೋಳಿ ಹಬ್ಬವನ್ನು ಬಣ್ಣದ ನೀರನ್ನು ಎರಚುತ್ತಾ, ಪಿಚಕಾರಿಯನ್ನು ಹೊಡೆಯುತ್ತಾ, ಒಬ್ಬರಿಗೊಬ್ಬರು ಎಲ್ಲಾ ಬಣ್ಣದ ರಂಗನ್ನು ಹಚ್ಚುತ್ತಾ ನಿವಾಸಿಗಳು, ಸಮಿತಿಯ ಸದಸ್ಯೆಯೆರಲ್ಲರು, ಜೊತೆ ಸೇರಿ ಈ ಹಬ್ಬಕ್ಕೆ ಇನ್ನಷ್ಟು ರಂಗನ್ನು ತುಂಬಿ ಬಹಳ ಸಂಭ್ರಮ ಹಾಗೂ ವಿಜೃಂಭಣೆಯಿಂದ ಆಚರಿಸಿದರು. ಸಾರಿಕಾ ಭಂಡಾರಿ ಉಪಸ್ಥಿತರಿದ್ದರು.

Pages