ಬಂಟರ ಸಂಘ ಮುಂಬಯಿ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ದಶಮಾನೋತ್ಸವದ ಸಂಭ್ರಮ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಬಂಟರ ಸಂಘ ಮುಂಬಯಿ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ದಶಮಾನೋತ್ಸವದ ಸಂಭ್ರಮ

Share This
ಬಂಟ್ಸ್ ನ್ಯೂಸ್, ಮುಂಬೈ: ಬಂಟ ಸಮಾಜ ಮುಂಬೈ ಮಹಾನಗರದಲ್ಲಿ ಬಲಿಷ್ಠವಾಗಿ ಬೆಳೆಯಬೇಕು ಅವರ ಕಷ್ಟ ಸುಖ ದುಃಖಗಳು ದೂರವಾಗಬೇಕು ಎನ್ನುವ ಆಲೋಚನೆಯಿಂದ ಮುಂಬೈಯ ಹಿರಿಯ ಬಂಟರು ಕಟ್ಟಿರುವ ಬಂಟರ ಸಂಘ ಮುಂಬೈಗೆ ಈಗ ತೊಂಬತ್ತ ಮೂರು ವರ್ಷಗಳ ಇತಿಹಾಸವಿದೆ ಸಂಸ್ಥೆ ಈಗ ಲಕ್ಷಾಂತರ ಬಂಟರ ಬಂಟರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದೆ ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಪೈಯಾಡೆ ಹೇಳಿದರು.
ಅವರು ಮೀರಾ ಭಯಂದರ್ ಸೆಂಟ್ರಲ್ ಪಾರ್ಕ್ ಮೈದಾನದಲ್ಲಿ ಬಂಟರ ಸಂಘದ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ದಶಮಾನೋತ್ಸವ ಸಮಾರಂಭದ ಅಧ್ಯಕ್ಷತೆವಹಿಸಿ ದೀಪಬೆಳಗಿಸಿ ಮಾತನಾಡಿದರು. ಸಮಾಜದ ಬಂಧುಗಳು ಶಿಕ್ಷಣ ಮೂಲಕ ಬಲಿಷ್ಠ ರಾಗ ಬೇಕೆನ್ನುವ ಕನಸನ್ನು ಹೊತ್ತಿರುವ ಸಂಘದ ಯೋಜನೆಗೆ ಇದೀಗ ಮತ್ತೊಂದು ಶಿಕ್ಷಣ ಸಂಸ್ಥೆ ಬೋರಿವಿಲಿ ಪಕ್ಷಿಮ ದಹಿಸಿ ಕಾಲೋನಿಯಲ್ಲಿ ಸೇರ್ಪಡೆಗೊಳ್ಳಲಿದೆ ಇನ್ನೊಂದು ಹದಿನೈದು ದಿನಗಳಲ್ಲಿ ಶಿಕ್ಷಣ ಸಂಸ್ಥೆ ಸಮಾಜಕ್ಕೆ ಲೋಕಾರ್ಪಣೆಗೊಳ್ಳಲಿದೆ ಎಂದು ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ವಯಾಡೆ ತಿಳಿಸಿದರು.

ಪರಿಸರದ ಬಂಟರಿಗೆ ಎಲ್ಲಾ ರೀತಿಯ ಸೌಲಭ್ಯಗಳು ಲಭಿಸಲು ಪ್ರಾದೇಶಿಕ ಸಮಿತಿ ಬಹಳಷ್ಟು ಶ್ರಮವಹಿಸುತ್ತಿದೆ. ಗಿರೀಶ್ ಶೆಟ್ಟಿ ತೆಲ್ಲಾರ್ ಸಮರ್ಥ ನಾಯಕನಾಗಿ ಇಲ್ಲಿಯ ಎಲ್ಲ ಬಂಟ ಬಂಧುಗಳನ್ನು ಒಗ್ಗಟ್ಟಾಗಿ ಮನ್ನಡೆಸುತ್ತಿದ್ದಾರೆ. ಸಮಾಜ ಬಾಂಧವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಂಘದ ಶಿಕ್ಷಣ ಸಂಸ್ಥೆಗಳಲ್ಲಿ ವಿಶೇಷ ಸೌಲಭ್ಯಗಳಿವೆ ಹಾಗೂ ಬಂಟ ಸಮಾಜ ಬಂಧುಗಳು ಉದ್ಯಮದಲ್ಲಿ ಕಲಿಸಬೇಕೆಂಬ ಉದ್ದೇಶದಿಂದ ಮಾತ್ರ ಭೂಮಿಕಾ ಕ್ರೆಡಿಟ್ ಸೊಸೈಟಿ ಸೇವೆಯಲ್ಲಿ ನಿರತವಾಗಿದೆ. ಉದ್ಯಮಿಗಳು ಮತ್ತು ಉದ್ಯಮ ನಡೆಸಬೇಕೆನ್ನುವ ಅವರು ಮಾತ್ರ ಭೂಮಿ ಕೋಪರೇಟಿವ್ ಸೊಸೈಟಿ ಸಾಲದ ಸೌಲಭ್ಯಗಳನ್ನು ಪಡೆದು ಉದ್ಯಮ ನಡೆಸಬೇಕು. ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಿ ಸಮಾಜದಲ್ಲಿ ಆದರ್ಶರಾಗಿ ಬೆಳೆಯಲು ಮಾತಾಪಿತರು ಮಾರ್ಗದರ್ಶನ ನೀಡಬೇಕು ಸಂಘದಲ್ಲಿ ನೀಡುವ ಎಲ್ಲಾ ಸೇವಾಕಾರ್ಯಗಳನ್ನು ಸಮಾಜಬಾಂಧವರು ಅಂಜಿಕೆ ಇರದೇ ಪಡೆಯಬೇಕು ಎಂದು ಅವರು ನುಡಿದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಸಂಘದ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಸ್ಥಾಪಕ ಐಕಳ ಹರೀಶ್ ಶೆಟ್ಟಿ ಮಾತನಾಡಿ, ಸುಮಾರು 5000ಕ್ಕೂ ಮಿಕ್ಕಿ ಬಂಟರು ಇಲ್ಲಿ ಆಗಮಿಸಿರುವುದನ್ನು ಕಂಡಾಗ ಸಂತೋಷವಾಗುತ್ತಿದೆ. ಗಿರೀಶ್ ಶೆಟ್ಟಿ ಅಂತಹ ಬಹಳಷ್ಟು ನಾಯಕರು ಗ್ರಾಮೀಣ ಪ್ರದೇಶದ ಪ್ರಾದೇಶಿಕ ಸಮಿತಿಯಲ್ಲಿ ಕಾರ್ಯಾಧ್ಯಕ್ಷರಾಗಿ ಬೆಳೆದು ನಿಂತಿದ್ದಾರೆ. ಅಲ್ಲದೆ ಸಾವಿರಾರು ಸಮಾಜ ಬಾಂಧವರನ್ನು ಒಗ್ಗೂಡಿಸಿ ಸಂಘಕ್ಕೆ ಬಲ ತರುವಂತಹ ಕೆಲಸ ಮಾಡುತ್ತಿದ್ದಾರೆ ಪದ್ಮನಾಭ ಪಯ್ಯಡೆ ಅವರು ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಬೇಕೆಂದು ಯೋಜನೆಗೆ ಜಾಗತಿಕ ಬಂಟರ ಸಂಘ ಬೆಂಬಲವಾಗಿ ನಿಲ್ಲುತ್ತದೆ. ಮೀರಾ ಭಯಂದರ್ ಪರಿಸರದಲ್ಲಿ ಗಿರೀಶ್ ಶೆಟ್ಟಿಯ ನಾಯಕತ್ವದಲ್ಲಿ ಎಲ್ಲರನ್ನು ಒಗ್ಗಟ್ಟು ಮಾಡಿದ್ದಾರೆ ಒಗ್ಗಟ್ಟು ನಮ್ಮಲ್ಲಿ ನಿರಂತರವಾಗಿರಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಮುಂಬಯಿ ಬಂಟರ ಸಂಘದ ಮಾಜಿ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಮಾತನಾಡಿ, ನಮ್ಮ ಸೇವಾಕಾರ್ಯಗಳಿಗೆ ನಮಗೆ ಅಧಿಕಾರ ಸಿಗುತ್ತದೆ ಎನ್ನುವುದಕ್ಕೆ ಜನಸಾಗರವೇ ಸಾಕ್ಷಿಯಾಗಿದೆ. ನನ್ನ ಅಧ್ಯಕ್ಷ ಅವಧಿಯಲ್ಲಿ ಪ್ರಾದೇಶಿಕ ಸಮಿತಿಗೆ ಪ್ರಾದೇಶಿಕ ಸಮಿತಿಗೆ ಕಾರ್ಯಧ್ಯಕ್ಷರು ಮತ್ತು ಯುವ ವಿಭಾಗಕ್ಕೆ ಯುವ ವಿಭಾಗಕ್ಕೆ ಕಾರ್ಯಧ್ಯಕ್ಷರು ಹಾಗುವುದಕ್ಕೆ ನಾಯಕರು ಮುಂದೆ ಬರಲಿಲ್ಲ. ಆದರೆ ಡಾಕ್ಟರ್ ಅರುಣೋದಯ ಕಾರ್ಯಧ್ಯಕ್ಷರಾಗಿ ಮಾಡಿ ಗಿರೀಶ್ ಶೆಟ್ಟಿ ಅವರನ್ನು ನೇರವಾಗಿ ಯುವ ವಿಭಾಗದ ಕಾರ್ಯಾಧ್ಯಕ್ಷರಾಗಿ ಆಯ್ಕೆ ಮಾಡಿದ್ದೇನೆ. ಅವರಿಬ್ಬರೂ ತಮ್ಮ ಸಾಮರ್ಥ್ಯಕ್ಕೆ ಸಾಮರ್ಥ್ಯಕ್ಕೆ ತಕ್ಕ ಸೇವೆಯನ್ನು ಮಾಡಿದ್ದಾರೆ. ಗಿರೀಶ್ ಶೆಟ್ಟಿ ವಿಭಾಗದ ಕಾರ್ಯಾಧ್ಯಕ್ಷರಾಗಿ ಮಾಡಿರುವ ಸೇವೆ ಅವರನ್ನು ಪರಿಸರದ ಕಾರ್ಯಾಧ್ಯಕ್ಷರನ್ನಾಗಿ ಮಾಡಲು ಸಾಧ್ಯವಾಯಿತು. ಗ್ರಾಮೀಣ ಪ್ರದೇಶದಲ್ಲಿ ಸಹಸ್ರ ಸಂಖ್ಯೆಯಲ್ಲಿ ಬಂಟರನ್ನು ಒಗ್ಗಟ್ಟು ಮಾಡುವುದಕ್ಕೆ ಗಿರೀಶ್ ಶೆಟ್ಟಿ ತೆಲ್ಲಾರ್ ತಂಡ ಅಪಾರ ಶ್ರಮಕ್ಕೆ ಸಾಕ್ಷಿಯಾಗಿದೆ ಎಂದರು.

ಮತ್ತೋರ್ವ ಮುಖ್ಯ ಅತಿಥಿ ಮುನಿಯಾಲು ಉದಯ ಕೃಷ್ಣ ಶೆಟ್ಟಿ ಚಾರಿಟಬಲ್ ಟ್ರಸ್ಟ್ ಟ್ರಸ್ಟಿನ ಅಧ್ಯಕ್ಷ ಉದಯ ಶೆಟ್ಟಿ ಮುನಿಯಾಲ್ ಮಾತನಾಡಿ, ಇಷ್ಟೊಂದು ಜನಸಾಗರವನ್ನು ಸೇರಿಸಬೇಕಾದರೆ ಅವರಿಗೆ ಯೋಗಬೇಕು ಯೋಗ್ಯತೆಯೂ ಕೂಡಬೇಕು. ಬಂಟ ಸಮಾಜ ಬಂಧುಗಳನ್ನು ಒಗ್ಗೂಡಿಸಿ ಅವರ ಕಣ್ಣೀರು ಒರೆಸುವ ಕಾಯಕದಲ್ಲಿ ತೊಡಗಿಕೊಂಡಿರುವ ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷ ಗಿರೀಶ್ ಶೆಟ್ಟಿಯವರು ಹೃದಯವಂತಿಕೆ ಯಿಂದ ಎಲ್ಲಾ ಕಾರ್ಯಚಟುವಟಿಕೆಗಳನ್ನು ಮಾಡುತ್ತಾರೆ. ಗಿರೀಶ್ ಶೆಟ್ಟಿ ಅವರ ಪ್ರಾದೇಶಿಕ ಸಮಿತಿಗೆ ಸ್ವಂತ ಕಾರ್ಯಾಲಯವನ್ನು ಮಾಡಬೇಕೆನ್ನುವ ಕನಸಿಗೆ ನನ್ನ ಸದಾ ಬೆಂಬಲವಿದೆ ಎಂದರು.

ವೇದಿಕೆಯಲ್ಲಿ ಗೌರವಾನ್ವಿತ ಅತಿಥಿಯಾಗಿ ಮೀರಾ ಭಯಂದರ್ ಶಾಸಕಿ ಗೀತಾ ಬರತೆಯಿನ್, ಮೀರಾ ಭಯಂದರ್ ಶಾಸಕ ಪ್ರತಾಪ್ ಸರ್, ನಾಯಕ್ ಹೈ ಹೈಟೆಕ್ ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ಪ್ರೈವೇಟ್ ಲಿಮಿಟೆ ಸಿಎಂಡಿ ರವಿ ನಾಥ್ ಶೆಟ್ಟಿ, ತೋನ್ಸೆ ಬಂಟರ ಸಂಘದ ಉಪಾಧ್ಯಕ್ಷ ಚಂದ್ರಕ್ಕೆ ಶೆಟ್ಟಿ, ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಗೌರವ ಕೋಶಾಧಿಕಾರಿ ರವೀಂದ್ರ ಶೆಟ್ಟಿ, ಕಾರ್ಯದರ್ಶಿ ಸಾಯಿಬಾಬಾ ಹಾಸ್ಪಿಟಲ್ ಸಿಎಂ ಡಿ ಡಾಕ್ಟರ್ ಅಂಬರೀಶ್, ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗಿರೀಶ್ ಶೆಟ್ಟಿ ತೆಲ್ಲಾರ್, ಸಂಚಾಲಕ ಡಾಕ್ಟರ್ ಅರುಣೋದಯ ರೈನ್, ಗೌರವ ಕಾರ್ಯದರ್ಶಿ ರವೀಂದ್ರ ಶೆಟ್ಟಿ ಕೊಟ್ರಪ್ಪ ಡಿಗುತ್ತು, ಕೋಶಧಿಕಾರಿ ಉದಯ್ ಶೆಟ್ಟಿ ಪೆಲತ್ತೂರು, ಜೊತೆ ಕೋಶಧಿಕಾರಿ ದಾಮೋದರಂ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಅಮಿತಾ ಕಿಶೋರ್ ಶೆಟ್ಟಿ, ಸಂಚಾಲಕಿ  ಸುಗುನ ಶೆಟ್ಟಿ, ಉಪ ಕಾರ್ಯಧ್ಯಕ್ಷ ಸುಮಂಗಳ ಕಣಂಜಾರು, ಜಯಶ್ರೀ ಬಿ ಶೆಟ್ಟಿ, ಕಾರ್ಯದರ್ಶಿ ನಯನ ಆರ್ ಶೆಟ್ಟಿ, ಕೋಶಧಿಕಾರಿ ಶರ್ಮಿಳಾ ಪಿ ಶೆಟ್ಟಿ, ಜೊತೆ ಕಾರ್ಯದರ್ಶಿ ವಸಂತಿ ಶೆಟ್ಟಿ, ಜೊತೆ ಕೋಶಧಿಕಾರಿ ಸುಜಾತಾ ಪಿ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸಾಯಿ ಪ್ರಸಾದ್ ಪೂಂಜಾ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಭಾಸ್ಕರ ಶೆಟ್ಟಿ, ಆರೋಗ್ಯ ವಿಭಾಗದ ಕಾರ್ಯಾಧ್ಯಕ್ಷ ಡಾಕ್ಟರ್ ಏನ್ಎ ಹೆಗಡೆ, ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷೆ ರಾಜೇಶ್ ಶೆಟ್ಟಿ ತೆಲ್ಲರ್, ವಿವಾಹ ಹೊಂದಾಣಿಕೆ ಸಮಿತಿಯ ಕಾರ್ಯಾಧ್ಯಕ್ಷ ಸುಭಾಷ್ ಶೆಟ್ಟಿ, ದಿವಾಕರ್ ಶೆಟ್ಟಿ ಪೋತ್ರಲ್, ಸದಸ್ಯ ನೊಂದಾಣಿಕೆ ಸಮಿತಿಯ ಕಾರ್ಯಾಧ್ಯಕ್ಷ ರಾಜೇಶ್ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಶಾಲಿನಿ ಶೆಟ್ಟಿ, ಸ್ವಚ್ಛತೆ ಅಶೋಕ್ ಶೆಟ್ಟಿ, ಎಂಟಿಆರ್ ಭಜನೆ ಶಿಲ್ಪ ಶೆಟ್ಟಿ, ಟೆಕ್ನೋಲಜಿ ಕಮಿಟಿಯ ವೈಟಿ ಶೆಟ್ಟಿ ಹೆಜಮಾಡಿ ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವೈದ್ಯಕೀಯ ಡಾಕ್ಟರ್ ಅಂಬರೀಶ್ ಹೆಗಡೆ ಸಿಎಂ ಡಿ ಸಾಯಿಬಾಬಾ ಹಾಸ್ಪಿಟಲ್, ಮೀರಾ ಭಯಂದರ್ ಹೊಟೇಲ್ ಉದ್ಯಮ ಕರ್ಣದೇವ ಶೆಟ್ಟಿ, ಹೋಟೆಲ್ ಸಮಾಧಾನ ಮೀರಾರೋಡ್ ರಾಜೇಶ್ ಶೆಟ್ಟಿ ನಿರ್ದೇಶಕರು ತುಂಗ ಹಾಸ್ಪಿಟಲ್, ರಾಜಕೀಯ ಸಚ್ಚಿದಾನಂದ ಶೆಟ್ಟಿ ಮುನ್ನಾಲ ಗೊತ್ತು ಮೀರಾ ಭಯಂದರ್ ಜಿಲ್ಲಾ ಬಿಜೆಪಿ ಕಾರ್ಯದರ್ಶಿ, ಕ್ರೀಡಾ ವಿಭಾಗ ಅಭಿಷೇಕ್ ಶೆಟ್ಟಿ ಅಭಿನಯ ಶೆಟ್ಟಿ ಹಾಗೂ ಶಿಕ್ಷಣ ಉತ್ತಿರ್ಣ ಭಾಸ್ಕರ್ ಶೆಟ್ಟಿ ಇವರನ್ನು ಸಾಲು  ಸ್ಮರಣಿಕೆ ಸನ್ಮಾನ ಪತ್ರ ನೀಡಿ ಸನ್ಮಾನಿಸಿದರು. ಅಲ್ಲದೆ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಧ್ಯಕ್ಷರು ಹಾಗೂ ಕಾರ್ಯಾಧ್ಯಕ್ಷೆ ಪ್ರಹ್ಲಾದ ಹರೀಶ್ ಕುಮಾರ್ ಎನ್ ಶೆಟ್ಟಿ ದಂಪತಿ ಶಿವರಾಮ ಶೆಟ್ಟಿ ದಂಪತಿ ಡಾಕ್ಟರ್ ಅರುಣೋದಯ ರೈನ್ ಮತ್ತು ಸುಗುಣ ಶೆಟ್ಟಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಪ್ರದೇಶ ಸಮಿತಿಯ ಕಾರ್ಯಾಧ್ಯಕ್ಷ ಗಿರೀಶ್ ಶೆಟ್ಟಿ ತೆಲ್ಲಾರ್ ಸ್ವಾಗತಿಸಿದರು. ಕಾರ್ಯದರ್ಶಿ ರವೀಂದ್ರ ಶೆಟ್ಟಿ ಕೊಟ್ರಪ್ಪಗುತ್ತು ವಾರ್ಷಿಕ ವರದಿ ಮಂಡಿಸಿದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಅಮಿತಾ ಕಿಶೋರ್ ಶೆಟ್ಟಿ ವಾರ್ಷಿಕ ವರದಿಯನ್ನು ಸಭೆಯ ಮುಂದಿಟ್ಟರು. ಪ್ರಾರಂಭದಲ್ಲಿ ಪ್ರಾದೇಶಿಕ ಸಮಿತಿಯ ಸದಸ್ಯರ ಮಕ್ಕಳಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮ, ವಿಜಯ್ ಶೆಟ್ಟಿ ಮೂಡುಬೆಲ್ಲೆ ಅವರಿಂದ ಸಂಗೀತ ಕಾರ್ಯಕ್ರಮ ಹಾಗೂ ಜಿಲ್ಲೆಯ ಪ್ರಸಿದ್ಧ ಹಾಸ್ಯ ಕಲಾವಿದರ ತಂಡ ಪ್ರಶಾಂಸ ಕಂಡ ಕಾಪು ಇದರ ಸದಸ್ಯರಿಂದ ಬಲೆ ತೆಲಿಪಾಲೆ ಹಾಸ್ಯ ಕಾರ್ಯಕ್ರಮ ಸಾದರಗೊಂಡವು. ಕಾರ್ಯಕ್ರಮವನ್ನು ಮಂಗಳೂರಿನ ಪ್ರಸಿದ್ಧ ಕಾರ್ಯಕ್ರಮ ನಿರೂಪಕ ನವೀನ ಶೆಟ್ಟಿ ಮತ್ತು ನಟ-ನಿರ್ದೇಶಕ ಬಾಬಾಪ್ರಸಾದ ಅರಸ ನಿರೂಪಿಸಿದರು. (ವರದಿ : ಈಶ್ವರ ಎಂ. ಐಲ್, ಚಿತ್ರ : ದಿನೇಶ್ ಕುಲಾಲ್)

Pages