ಬಂಟ್ಸ್ ನ್ಯೂಸ್, ಮಂಗಳೂರು: ಗ್ಲೋರಿಯಸ್ ಆಂಜೆಲೋರ್ ಪ್ರೋಡಕ್ಷನ್ ಲಾಂಛನದಲ್ಲಿ
ಕ್ಯಾನೆಟ್ ಮಾತಾಯಸ್ ಪಿಲಾರ್ ನಿರ್ಮಾಣದ ಕೋಡಿಕಲ್ ವಿಶ್ವನಾಥ ನಿರ್ದೇಶನದ ‘ಎನ್ನ’ ತುಳು ಚಲನಚಿತ್ರದ
ಬಿಡುಗಡೆ ಸಮಾರಂಭವು ನಗರದ ಜ್ಯೋತಿ ಚಿತ್ರ ಮಂದಿರದಲ್ಲಿ ನಡೆಯಿತು.
ಚಲನಚಿತ್ರ ನಿರ್ಮಾಪಕ
ಪ್ರಕಾಶ್ ಪಾಂಡೇಶ್ವರ್ ಸಿನಿಮಾವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ತುಳುವಿನಲ್ಲಿ ತೆರೆ ಕಾಣುತ್ತಿರುವ 114ನೇ ಸಿನಿಮಾ ‘ಎನ್ನ’ ಪ್ರೇಮಕತೆಯನ್ನೊಳಗೊಂಡಿದೆ.
ತುಳು ಸಿನಿಮಾಗಳಿಗೆ ಪ್ರೇಕ್ಷಕರ ಪ್ರೋತ್ಸಾಹ ಅಗತ್ಯ ಎಂದು ಸಿನಿಮಾಕ್ಕೆ ಶುಭ ಹಾರೈಸಿದರು.
173 ಕಲಾವಿದರು ‘ಎನ್ನ’
ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಮುಖ್ಯವಾಗಿ ಅನೇಕ ಮಂದಿ ಹೊಸಬರಿಗೆ ಇಲ್ಲಿ ಅವಕಾಶ ನೀಡಲಾಗಿದೆ ಎಂದು ಚಿತ್ರದ
ನಿರ್ದೇಶಕ ವಿಶ್ವನಾಥ ಕೋಡಿಕಲ್ ತಿಳಿಸಿದರು. ಸಮಾರಂಭದಲ್ಲಿ ತುಳು ಚಲನಚಿತ್ರ ನಿರ್ದೇಶಕ ವಿಜಯ
ಕುಮಾರ್ ಕೊಡಿಯಾಲ್‍ಬೈಲ್, ಕರ್ನಾಟಕ ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ನಿರ್ಮಾಪಕರಾದ ಕ್ಯಾನೆಟ್ ಮಾತಾಯಸ್
ಪಿಲಾರ್, ಮ್ಯಾಕ್ಸಿಮ್ ಡಿಸೋಜಾ, ನಿಶಾ ಪಿರೇರಾ, ಎನ್. ಜೆ
ವಿನೀತ್ ಕುಮಾರ್, ಶ್ರುತಿ ಪೂಜಾರಿ ಮ್ಯಾಕ್ಸಿಮ್ ಪಿರೇರಾ, ರಾಜೇಶ್ ಕುಡ್ಲ, ಪ್ರಶಾಂತ್ ಸಿ.ಕೆ,
ಅಶ್ಮಿತ್ ರಾಜ್, ವೈಶಾಲಿ ಎಸ್ ಉಡುಪಿ, ಲೋಯ್ ವೆಲೆಂಟಿನ್, ಚೇತನ್ ಪಿಲಾರ್ ಮೊದಲಾದವರು ಉಪಸ್ಥಿತರಿದ್ದರು.
ಭವ್ಯಶ್ರೀ ಕುಡುಪು ಕಾರ್ಯಕ್ರಮ ನಿರ್ವಹಿಸಿದರು.