ಬಂಟ್ಸ್ ನ್ಯೂಸ್, ಮಂಗಳೂರು: ವಾಮಂಜೂರು, ತಿರುವೈಲುಗುತ್ತು ಕುಟುಂಬಿಕರ ಅಷ್ಟಪವಿತ್ರ
ನಾಗಮಂಡಲೋತ್ಸವ ಸೇವೆಯು ಫೆ.23ರಿಂದ 26ರ ವರೆಗೆ ವಾಮಂಜೂರು ಶ್ರೀ ಅಮೃತೇಶ್ವರ ದೇವಸ್ಥಾನದ ಮುಂಭಾಗದ
ತಿರುವೈಲುಗುತ್ತು ಕಂಬಳಗದ್ದೆಯಲ್ಲಿ ತಿರುವೈಲುಗುತ್ತು ಕುಟುಂಬಿಕರು ಅನಾದಿಕಾಲದಿಂದ ಆರಾಧಿಸಿಕೊಂಡು
ಬಂದಿರುವ ಶ್ರೀ ನಾಗದೇವರು, ಶ್ರೀ ರಕ್ತೇಶ್ವರಿ ಸಾನಿಧ್ಯದಲ್ಲಿ ನಡೆಯಲಿದೆ.
ಗುಡ್ಡೆಮನೆ ವೇದಮೂರ್ತಿ
ಶ್ರೀ ಸದಾಶಿವ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಉಡುಪಿ ಸಗ್ರಿ ಶ್ರೀ ಗೋಪಾಲಕೃಷ್ಣ ಸಾಮಗರ ನೇತೃತ್ವದಲ್ಲಿ
ಮದ್ದೂರು ಶ್ರೀ ಕೃಷ್ಣಪ್ರಸಾದ, ಬಾಲಕೃಷ್ಣ ನಟರಾಜ ವೈದ್ಯ ಬಳಗದವರ ಸಹಯೋಗದಲ್ಲಿ ಹಾಗೂ ಮಾಗಣೆಯ ಗುತ್ತುಗಳಾದ
ಬೊಂಡಂತಿಲಗುತ್ತು, ಪೆರ್ಮಂಕಿಗುತ್ತು, ಮೂಡುಜಪ್ಪುಗುತ್ತು, ಕಾಪೆಟ್ಟುಗುತ್ತು ಮತ್ತು ಊರ ಪರವೂರ ಬಂಧುಗಳ
ಸಹಭಾಗಿತ್ವದಲ್ಲಿ ಫೆ.26ರಂದು ಅಷ್ಟಪವಿತ್ರ ನಾಗಮಂಡಲೋತ್ಸವ
ಜರಗಲಿದೆ.
ಆ ಪ್ರಯುಕ್ತ ಭಕ್ತಾದಿಗಳಾದ
ತಾವೆಲ್ಲರೂ ತಮ್ಮೊವರನ್ನೊಡಗೂಡಿ ಆಗಮಿಸಿ, ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ನಾಗದೇವರ
ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕೆಂದು ತಿರುವೈಲುಗುತ್ತು ಅಷ್ಟಪವಿತ್ರ ನಾಗಮಂಡಲೋತ್ಸವ ಸಮಿತಿ ಅಧ್ಯಕ್ಷ
ಶ್ರೀ ನವೀನಚಂದ್ರ ಆಳ್ವ ತಿರುವೈಲುಗುತ್ತು, ಕಾರ್ಯಾರ್ಧಕ್ಷರಾದ ಶ್ರೀ ಪ್ರವೀಣಚಂದ್ರ ಆಳ್ವ ತಿರುವೈಲುಗುತ್ತು,
ಕೋಶಾಧಿಕಾರಿ ಶ್ರೀ ರಾಜ್’ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶ್ರೀ ಕೆ. ಅಭಿಷೇಕ್ ಆಳ್ವ ತಿರುವೈಲುಗುತ್ತು,
ಪ್ರಧಾನ ಸಂಚಾಲಕರಾದ ಶ್ರೀ ಮೇಘನಾಥ ಆರ್. ಶೆಟ್ಟಿ, ಶ್ರೀ ಮೋಹನದಾಸ ಶೆಟ್ಟಿ ಕೆನರಾ ಟವರ್ಸ್ ಉಡುಪಿ,
ಶ್ರೀ ರಮಾನಾಥ ಶೆಟ್ಟಿ ವಿಟ್ಲ ಆಹ್ವಾನಿಸಿದ್ದಾರೆ.