ಬಂಟ್ಸ್ ನ್ಯೂಸ್, ಮಂಗಳೂರು: ಇಂಟರ್ ನ್ಯಾಷನಲ್ ಬಂಟ್ಸ್
ವೆಲ್ಫೇರ್ ಟ್ರಸ್ಟ್ ಸ್ಥಾಪನೆಯಾಗಿ 6
ವರ್ಷ ತುಂಬಿದ ಸಂದರ್ಭದಲ್ಲಿ 'ಬಂಟ
ಸಂಗಮ-2020' ವಾರ್ಷಿಕ
ಸಂಭ್ರಮ ಸಮಾರಂಭವು ಫೆ.6ರಂದು ನಗರದ
ಬಲ್ಮಠದಲ್ಲಿರುವ ಕುಡ್ಲ ಪೆವಿಲಿನ್ನಲ್ಲಿ
ನಡೆಯಲಿದೆ.
ಈ ಬಗ್ಗೆ ಬಲ್ಮಠದ ಹೋಟೆಲ್
ಕುಡ್ಲದಲ್ಲಿ ಜರಗಿದ ಪೂರ್ವಭಾವಿ ಸಭೆಯಲ್ಲಿ
ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ
ಎ. ಸದಾನಂದ ಶೆಟ್ಟಿ ಅವರು
ಬಂಟ ಸಂಗಮದ ಕುರಿತಂತೆ ಮಾಹಿತಿ ನೀಡಿದರು.
ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟಿನ
ಮುಖವಾಣಿ ‘ಸದಾಶಯ’ ತ್ರೈಮಾಸಿಕದ ವಿಶೇಷ
ಸಂಚಿಕೆಯನ್ನು ಈ ಸಂದರ್ಭದಲ್ಲಿ ಬಿಡುಗಡೆ
ಮಾಡಲಾಗುವುದು ಎಂದು ಸಂಚಿಕೆಯ ಪ್ರಧಾನ
ಸಂಪಾದಕ ಭಾಸ್ಕರ ರೈ ಕುಕ್ಕುವಳ್ಳಿ
ನುಡಿದರು.
ಯುವವಿಭಾಗದ
ಅಧ್ಯಕ್ಷ ದೇವಿಚರಣ್ ಶೆಟ್ಟಿ ಮಾತನಾಡಿ, ಬಂಟಸಂಗಮ
ಕಾರ್ಯಕ್ರಮದಲ್ಲಿ ಬಂಟ್ವಾಳ ಬಂಟರ ಸಂಘದ
ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ, ಪುಣೆ
ಬಂಟರ ಸಂಘದ ಅಧ್ಯಕ್ಷ ಸಂತೋಷ್
ಶೆಟ್ಟಿ, ಕನ್ನಡ ಚಲನಚಿತ್ರ ಸಂಗೀತ
ನಿರ್ದೇಶಕ ಗುರುಕಿರಣ್ ಮತ್ತಿತರ ಪ್ರಮುಖರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಬಂಟಕಲಾಸಂಗಮ: ಸಂಸ್ಥೆಯ 6ನೇ ವರ್ಷದ
ಸಮಾರಂಭವನ್ನು ಸಾಂಸ್ಕೃತಿಕ ವೈವಿಧ್ಯಗಳೊಂದಿಗೆ ಆಚರಿಸುವ ಸಲುವಾಗಿ 'ಬಂಟ
ಕಲಾ ಸಂಗಮ'ವನ್ನು ನಡೆಸಲಾಗುವುದು ಎಂದು ಸಂಚಾಲಕ ಜಗದೀಶ
ಶೆಟ್ಟಿ ಅಡ್ಯಾರ್ ಹೇಳಿದರು. ಫೆ.
16ರಂದು ಸಂಜೆ 3ರಿಂದ ಗುರುಪುರ,
ಜೆಪ್ಪು, ಜಪ್ಪಿನಮೊಗರು, ಕಂಕನಾಡಿ, ಕಾವೂರು, ಉಳ್ಳಾಲ, ಸುರತ್ಕಲ್,
ತುಳುನಾಡ ಬಂಟ್ಸ್ - ಹೀಗೆ 8 ಕಲಾ ತಂಡಗಳಿಂದ
ವಿವಿಧ ಕಲಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟಿನ
ಸಂಘಟನಾ ಕಾರ್ಯದರ್ಶಿ ರಾಜಗೋಪಾಲ್ ರೈ ಸ್ವಾಗತಿಸಿದರು. ಮಹಿಳಾ
ವಿಭಾಗದ ಅಧ್ಯಕ್ಷೆ ವಿಜಯಲಕ್ಷ್ಮೀ ಬಿ. ಶೆಟ್ಟಿ ವಂದಿಸಿದರು.
ಟ್ರಸ್ಟ್ನ ಪದಾಧಿಕಾರಿಗಳು ಉಪಸ್ಥಿತರಿದ್ದರು.