ಮಾತೃ ಸಂಘದ ಕಟ್ಟಡ ನಿರ್ಮಿಸುವಲ್ಲಿ ಸಮಸ್ತ ಬಂಟ ಸಮಾಜ ಅಜಿತಣ್ಣನ ಬೆಂಬಲಿಸಬೇಕು: ಐಕಳ ಹರೀಶ್ ಶೆಟ್ಟಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಮಾತೃ ಸಂಘದ ಕಟ್ಟಡ ನಿರ್ಮಿಸುವಲ್ಲಿ ಸಮಸ್ತ ಬಂಟ ಸಮಾಜ ಅಜಿತಣ್ಣನ ಬೆಂಬಲಿಸಬೇಕು: ಐಕಳ ಹರೀಶ್ ಶೆಟ್ಟಿ

Share This
BUNTS NEWS, ಗುರುಪುರ: ಬಂಟರ ಮಾತೃ ಸಂಘವು ಬಂಟ ಸಮಾಜದ ಆಸ್ತಿಯಿದ್ದಂತೆ, ಮಾತೃ ಸಂಘದ ನಿರ್ಮಾಣದಲ್ಲಿ ಅನೇಕ ಹಿರಿಯರ ಶ್ರಮವಿದೆ. ಅಂತಹ ಮಾತೃ ಸಂಘದ ಹೊಸ ಕಟ್ಟಡ ನಿರ್ಮಾಣಕ್ಕೆ ಅಜಿತಣ್ಣ ಮುಂದಾಗಿದ್ದಾರೆ. ಇದಕ್ಕೆ ಸರ್ವ ಬಂಟ ಸಮಾಜ ಅಜಿತಣ್ಣ ಬೆಂಬಲಿಸಬೇಕೆಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಕೋರಿದ್ದಾರೆ.
ಅವರು ಗುರುಪುರ ಬಂಟರ ಮಾತೃ ಸಂಘದ ಆಯೋಜನೆಯ ‘ಬಂಟ ಕಲಾವೀಳ್ಯಾ 2020’ ಸ್ಪರ್ಧಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಗುರುಪುರ ವಜ್ರದೇಹಿ ಮಠದ ಶ್ರಿ ಶ್ರೀ ಶ್ರಿ ರಾಜಶೇಖರಾನಂದ ಸ್ವಾಮೀಜಿಯವ ಆಶಯದಂತೆ ಈ ವರ್ಷದೊಳಗೆ ಮಾತೃ ಸಂಘದ ನೂತನ ಕಟ್ಟಡ ನಿರ್ಮಾಣವಾಗಲು ಎಲ್ಲರೂ ಶ್ರಮಿಸೋಣ ಎಂದು ಹಾರೈಸಿದರು.

ಗುರುಪುರ ಬಂಟರ ಮಾತೃ ಸಂಘವು ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ತನ್ನ ವ್ಯಾಪ್ತಿಯ ಅಶಕ್ತ ಬಂಟರ ಮನೆ ನಿರ್ಮಾಣಕ್ಕೆ ಸಹಾಯ, ಬೆಂಗಳೂರು ಬಂಟರ ಸಂಘದ ಸಹಾಯದೊಂದಿಗೆ ಮದುವೆಗೆ ಸಹಾಯ ಹಸ್ತ, ಮದುವೆ ದಿನ ವಾಹನದ ವ್ಯವಸ್ಥೆ, ಬಂಟರ ಮಾತೃ ಸಂಘದಿಂದ ಸಹಾಯ ಹಸ್ತದ ನೆರವನ್ನು ಅಶಕ್ತ ಬಂಟರಿಗೆ ನೀಡುವುದು ಹೀಗೆ ಒಂದು ಸಂಘಟನೆ ಯಾವ ರೀತಿ ಕಾರ್ಯ ಮಾಡಬೇಕು ಎಂಬುದನ್ನು ಗುರುಪುರ ಬಂಟರ ಮಾತೃ ಸಂಘವು ತೋರಿಸಿಕೊಟ್ಟಿದೆ ಎಂದು ಶ್ಲಾಘೀಸಿದರು.

ವೇದಿಕೆಯಲ್ಲಿ ಗುರುಪುರ ಬಂಟರ ಮಾತೃ ಸಂಘದ ಅಧ್ಯಕ್ಷ ರಾಜಕುಮಾರ್ ಶೆಟ್ಟಿ ತಿರುವೈಲು ಗುತ್ತು, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ, ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಉಪೇಂದ್ರ ಶೆಟ್ಟಿ, ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕಿ ಶಕುಂತಳ ಶೆಟ್ಟಿ, ವಿಜಯಕುಮಾರ್ ಶೆಟ್ಟಿ ಕೊಡಿಯಾಲ್ ಬೈಲ್, ಉಡುಪಿ ಮೋಹನದಾಸ ಶೆಟ್ಟಿ, ಸತೀಶ್ ಶೆಟ್ಟಿ ಕಾರಮೊಗರು ಶೆಟ್ಟಿ, ವಿಶ್ವನಾಥ ಶೆಟ್ಟಿ ಮೂಡುಶೆಡ್ಡೆ, ಬಂಟರ ಮಾತೃ ಸಂಘದ ವಸಂತ ಶೆಟ್ಟಿ, ತುಳುವ ಸಿರಿ ಅದ್ವಿಕಾ ಶೆಟ್ಟಿ, ಕಾವೂರು ಬಂಟರ ಸಂಘದ ಆನಂದ ಶೆಟ್ಟಿ, ಪುಷ್ಪರಾಜ ಶೆಟ್ಟಿ ಮೊಗರು, ಗುರುಪು ಬಂಟರ ಮಾತೃ ಸಂಘದ ಚಂದ್ರಹಾಸ ಶೆಟ್ಟಿ ನಾರಳ, ಸುಬ್ಬಯ್ಯ ಶೆಟ್ಟಿ ಗುರುಪುರ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ಗುರುಪುರ ಬಂಟರ ಮಾತೃ ಸಂಘದ ಸಂಚಾಲಕ ಸುಂದರ್ಶನ್ ಶೆಟ್ಟಿ ಪೆರ್ಮಂಕಿ ಸ್ವಾಗತಿಸಿದರು. ಅಡ್ಯಾರ್ ಪುರುಷೋತ್ತಮ ಭಂಡಾರಿ ನಿರೂಪಿಸಿದರು.

Pages