BUNTS NEWS, ಮಂಗಳೂರು: ವಿಶ್ವವಿಖ್ಯಾತ ಆಧ್ಯಾತ್ಮಿಕ ಮಾರ್ಗದರ್ಶಕಿ ಹಾಗೂ
ಪ್ರಶಿಕ್ಷಕಿಯಾಗಿ ಗುರುತಿಸಲ್ಪಟ್ಟಿರುವ ಬ್ರಹ್ಮಾಕುಮಾರಿ ಶಿವಾನಿಯವರ ಕಾರ್ಯಕ್ರಮವು ಫೆ.9ರಂದು ಟಿಎಮ್ಎ
ಪೈ ಕನ್ವೆಕ್ಷನ್ ಸೆಂಟರಿನಲ್ಲಿ ನಡೆಯಲಿದೆ.
ಈ ಕುರಿತಂತೆ ಉರ್ವಸ್ಟೋರಿನಲ್ಲಿರುವ ಬ್ರಹ್ಮಕುಮಾರಿ ವಿಶ್ವ ಶಾಂತಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬ್ರಹ್ಮಕುಮಾರಿ
ವಿಶ್ವೇಶ್ವರಿ ಅವರು ಕಾರ್ಯಕ್ರಮದ ಮಾಹಿತಿ ನೀಡಿದರು. ಶಿವಾನಿಯವರು ಫೆ.9ರಂದು ಬೆಳಿಗ್ಗೆ 10.30ರಿಂದ
12.30ರ ವರಗೆ ‘Health Happiness and Harmony’ ಹಾಗೂ ಸಂಜೆ 5.30ರಿಂದ 7.30ರ ವರೆಗೆ ‘Pause
for Peace’ ವಿಷಯದ ಮೇಲೆ ಆಧ್ಯಾತ್ಮಿಕ ಪ್ರವಚನ ನೀಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ
ಭಾಗವಹಿಸಲು ಇಚ್ಛಿಸುವವರು ಉರ್ವಾ ಸ್ಟೋರಿನಲ್ಲಿರುವ ಬ್ರಹ್ಮಕುಮಾರಿ ವಿಶ್ವ ಶಾಂತಿ ಮಂದಿರದಲ್ಲಿ ನೊಂದಾಯಿಸಿ
ಪ್ರವೇಶದ ಪಾಸನ್ನು ಪಡೆಯಬಹುದು. ಸುದ್ದಿಗೋಷ್ಠಿಯಲ್ಲಿ
ಬ್ರಹ್ಮಾಕುಮಾರಿ ರೇವತಿ, ಬ್ರಹ್ಮಾಕುಮಾರ ರೋಶನ್ ಹಾಗೂ ಬ್ರಹ್ಮಕುಮಾರ ಕೆ. ವರದರಾಜ್ ಪ್ರಭು ಉಪಸ್ಥಿತರಿದ್ದರು.