BUNTS NEWS, ಮಂಗಳೂರು: ಶಕ್ತಿ ವಸತಿ ಶಾಲೆಯು ಜ.31 ಹಾಗೂ ಫೆ.1ರಂದು ಎರಡು
ದಿನಗಳ ಕಾಲ ‘ಶಕ್ತಿ ಫೆಸ್ಟ್ 2020’ನ್ನು ಹಮ್ಮಿಕೊಂಡಿದೆ.
ದ.ಕ ಜಿಲ್ಲಾ ಮಟ್ಟದಲ್ಲಿ
ನಡೆಯುವ ಈ ಅಂತರ್ ಶಾಲಾ ಸ್ಪರ್ಧೆಗಳು ಎರಡು ವರ್ಗ ನಾಲ್ಕು ವಿಭಾಗಗಳಲ್ಲಿ ನಡೆಯಲಿವೆ. ವರ್ಗ - 01
ವಿಭಾಗ I - ತರಗತಿ 1, 2, ಹಾಗೂ ವಿಭಾಗ II – ತರಗತಿ 3, 4, ವರ್ಗ – 02. ವಿಭಾಗ III - ತರಗತಿ
5,6,7, ಹಾಗೂ ವಿಭಾಗ IV
- ತರಗತಿ 8, 9, 10.
ವಿಭಾಗ I, II ರಲ್ಲಿ
ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಗಳಲ್ಲಿ ಹಾಡು ನಟನೆ, ಕತೆ ಹೇಳುವುದು, ಚಿತ್ರಕಲೆ, ಬಣ್ಣ ಹಾಕುವುದು,
ದೇಶಭಕ್ತಿ ಗೀತೆ, ಛದ್ಮ ವೇಷ ಸ್ಪರ್ಧೆಗಳು ನಡೆಯಲಿವೆ.
ವಿಭಾಗ III, IV ರಲ್ಲಿ ಇಂಗ್ಲೀಷ್, ಕನ್ನಡ, ಹಿಂದಿ ಭಾಷಣ ಸ್ಪರ್ಧೆ,
ಜನಪದ ಹಾಡು (ಸಮೂಹ), ಚಿತ್ರಕಲೆ, ರಸಪ್ರಶ್ನೆ, ಸ್ಪೆಲ್‍ಬೀ, ಹೂ ಜೋಡಣೆ, ಛದ್ಮವೇಷ, ಸಾಂಸ್ಕøತಿಕ
ವೈವಿಧ್ಯ, ದಾಸರ ಪದಗಳು (ಸಮೂಹ), ವಾದ್ಯ ಸಂಗೀತ, ಸಾಂಪ್ರದಾಯಿಕ ರಂಗೋಲಿ, ಜನಪದ ಕುಣಿತ(ಸಮೂಹ) ಸ್ಪರ್ಧೆಗಳು
ನಡಯಲಿವೆ.
ವಿಜೇತರಿಗೆ ನಗದು
ಬಹುಮಾನ, ಪ್ರಶಂಸಾ ಪತ್ರ ಹಾಗೂ ಅತ್ಯಧಿಕ ಅಂಕಗಳನ್ನು ಗಳಿಸಿದ ಶಾಲೆಗಳಿಗೆ ಎರಡು ವರ್ಗಗಳಲ್ಲಿ ಪ್ರಥಮ,
ದ್ವಿತೀಯ ಹಾಗೂ ತೃತೀಯ ಫಲಕಗಳನ್ನು ನೀಡಿ ಗೌರವಿಸಲಾಗುವುದು. ಜ.28, ನೋಂದಣಿಗೆ ಕೊನೆಯ ದಿನವಾಗಿದೆ
ಎಂದು ಪತ್ರಿಕಾಗೋಷ್ಠಿಯಲ್ಲಿ ಶಾಲಾ ಪ್ರಾಚಾರ್ಯೆ ವಿದ್ಯಾ ಕಾಮತ್ ತಿಳಿಸಿರುತ್ತಾರೆ.
ಈ ಸಂದರ್ಭದಲ್ಲಿ
ಶಕ್ತಿ ಫೆಸ್ಟಿನ ಪೋಸ್ಟರನ್ನು ಬಿಡುಗಡೆಗೊಳಿಸಲಾಯಿತು. ಈ ಪತ್ರಿಕಾಗೋಷ್ಠಿಯಲ್ಲಿ ಶಕ್ತಿ ಎಜ್ಯುಕೇಶನ್
ಟ್ರಸ್ಟ್‍ನ ಪ್ರಧಾನ ಸಲಹೆಗಾರ ರಮೇಶ್ ಕೆ ಹಾಗೂ ಅಭಿವೃದ್ಧಿ ಅಧಿಕಾರಿ ಪ್ರಕ್ಯಾತ್ ರೈ ಉಪಸ್ಥಿತರಿದ್ದರು.