BUNTS NEWS, ಸುರತ್ಕಲ್ : ಇಡ್ಯಾ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ
ಜ.31ರಿಂದ ಫೆ.9ರ ವರೆಗೆ ಅಷ್ಟಬಂಧ ಬ್ರಹ್ಮಕಶೋತ್ಸವ, ಅಷ್ಟಪವಿತ್ರ ನಾಗಮಂಡಲೋತ್ಸವ, ಶ್ರೀ ಪಿಲಿಚಾಮುಂಡಿ
ದೈವದ ಧರ್ಮನೇಮವು ಜರಗಲಿದೆ.
ಫೆ.7ರಂದು ಶುಕ್ರವಾರ
ಪೂರ್ವಾಹ್ನ 9.30ರಿಂದ 9.45ರ ಮೀನ ಲಗ್ನ ಸುಮುಹೂರ್ತದಲ್ಲಿ ಶ್ರೀ ವಿದ್ಯಾಧರ ಪ್ರತಿಷ್ಠಾಪಿಸಿದ ಇಡ್ಯಾ
ಶ್ರೀ ಮಹಾಲಿಂಗೇಶ್ವರ ದೇವರಿಗೆ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ಅಷ್ಟಬಂಧ
ಬ್ರಹ್ಮಕಲಾಶಾಭಿಷೇಕ ನಡೆಯಲಿದೆ. ರಾತ್ರಿ ವೇದಮೂರ್ತಿ ಸಗ್ರಿ ಶ್ರೀ ಗೋಪಾಲಕೃಷ್ಣ ಸಾಮಗ ಮುದ್ದೂರು,
ಶ್ರೀ ಕೃಷ್ಣಪ್ರಸಾದ ವೈದ್ಯ ಮತ್ತು ಬಳಗದವರಿಂದ ಅಷ್ಟಪವಿತ್ರ ನಾಗಮಂಡಲ ನಡೆಯಲಿದೆ. ಶ್ರೀ ಕ್ಷೇತ್ರದಲ್ಲಿರುವ
ಶ್ರೀ ಪಿಲಿಚಾಮುಂಡಿ ದೈವಕ್ಕೆ ಪ್ರಥಮ ಬಾರಿಗೆ ಫೆ.9ರಂದು ಧರ್ಮನೇಮವು ನಡೆಯಲಿದೆ.
ಜ.31ರಿಂದ ಫೆ.9ರ
ವರೆಗೆ ಪ್ರತಿದಿನ ಸಂಜೆ 6 ಗಂಟೆಗೆ ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು
ಅಯೋಜಿಸಲಾಗಿದೆ. ಪ್ರತಿ ದಿನ ಭಕ್ತಾದಿಗಳಿಗೆ ನಿರಂತರ ಉಪಾಹಾರ, ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ.
ಈ ಹಿಂದೆ ಬ್ರಹ್ಮಕಲಶವು
1979ರಲ್ಲಿ ನಡೆದಿದ್ದು, 1982ರಲ್ಲಿ ಶ್ರೀ ಮಹಾಗಣಪತಿಯ ನೂತನ ಗರ್ಭಗುಡಿ ನಿರ್ಮಾಣ ಮತ್ತು ಪುನರ್
ಪ್ರತಿಷ್ಠೆ, 1991 ಹಾಗೂ 2004ರಲ್ಲಿ ಬ್ರಹ್ಮಕಲಶೋತ್ಸವ ಹಾಗೂ ನಾಗಮಂಡಲ ಸೇವೆ ನಡೆದಿದ್ದು ಸುಮಾರು
1 ಲಕ್ಷಕ್ಕೂ ಹೆಚ್ಚಿನ ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನ ಪಡೆದಿದ್ದರು.
ಸುದ್ದಿಗೋಷ್ಠಿಯಲ್ಲಿ
ಕ್ಷೇತ್ರದ ಅನುವಂಶೀಕ ಮೊಕ್ತೇಸರ, ಪ್ರಧಾನ ಅರ್ಚಕರಾದ ವೇದಮೂರ್ತಿ ಐ ರಮಾನಂದ ಭಟ್, ಜೀರ್ಣೋದ್ಧಾರ
ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ, ಕಾರ್ಯಾಧ್ಯಕ್ಷರಾದ ಟಿ.ಎನ್.
ರಮೇಶ್, ಅಗರಿ ರಾಘವೇಂದ್ರ ರಾವ್, ಸತ್ಯಜಿತ್ ಸುರತ್ಕಲ್, ಪ್ರಧಾನ ಕಾರ್ಯದರ್ಶಿ ಕೃಷ್ಣಕುಮಾರ್ ಇಡ್ಯಾ,
ಪ್ರಧಾನ ಸಂಚಾಲಕ ಅಣ್ಣಪ್ಪ ದೇವಾಡಿಗ, ಮಾಧ್ಯಮ ಪ್ರಚಾರ ಸಮಿತಿಯ ಜಗನ್ನಾಥ ಶೆಟ್ಟಿ ಬಾಳ, ರಜನಿ ದುಗ್ಗಣ್ಣ
ಮತ್ತಿತರ ಪ್ರಮುಖರು ಇದ್ದರು.