ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಬ್ರಹ್ಮಕಲಶಾಭಿಷೇಕ ಸಂಪನ್ನ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಬ್ರಹ್ಮಕಲಶಾಭಿಷೇಕ ಸಂಪನ್ನ

Share This
BUNTS NEWS, ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮವರ ಬ್ರಹ್ಮಕಲಶೋತ್ಸವವು ಬ್ರಹ್ಮಶ್ರೀ ಶಿಬರೂರು ವೇದವ್ಯಾಸ ತಂತ್ರಿಗಳ ಆಚಾರ್ಯತ್ವದಲ್ಲಿ, ಶಿಬರೂರು ಶ್ರೀ ಕೃಷ್ಣರಾಜ ತಂತ್ರಿಗಳ ಸಹಯೋಗದೊಂದಿಗೆ ಜ.30ರ ಗುರುವಾರ ಸಕಲ ವಿಧಿವಿದಾನಗಳೊಂದಿಗೆ ಸಂಪನ್ನಗೊಂಡಿತು.
ಬೆಳಿಗ್ಗೆ 9.37ರ ಮೀನಲಗ್ನದ ಸುಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ, ಅವಸ್ರುತಬಲಿ, ಮಹಾಪೂಜೆ ನಡೆಯಿತು, ನಂತರ ಪಲ್ಲಪೂಜೆ, ಮಹಾಅನ್ನಸಂತರ್ಪಣೆ ನಡೆಯಿತು. ಬೆಳಿಗ್ಗೆ ಭ್ರಾಮರೀವನದಲ್ಲಿ ಶನಿಯಾಗ, ಸಹಸ್ರಚಂಡಿಕಾ ಸಪ್ತಶತೀಪಾರಾಯಣ, ಕೋಟಿಜಪಯಜ್ಞ, ನವಗ್ರಹವನ, ನಕ್ಷತ್ರವನ, ರಾಶಿವನದಲ್ಲಿ ಆಯಾ ವೃಕ್ಷಗಳ ಸ್ಥಾಪನೆ ಮಾಡಲಾಯಿತು.

ಸಂಜೆ 5 ರಿಂದ ರಥಕಲಶಾಭಿಷೇಕ, ರಾತ್ರಿ ಮಹಾರಥೋತ್ಸವ, ಭೂತಬಲಿ, ಶಯನ, ಕವಾಟಬಂಧನ. ಭ್ರಾಮರೀವನದಲ್ಲಿ ಕೋಟಿಜಪಯಜ್ಞ, ಸಹಸ್ರ ಚಂಡಿಕಾಸಪ್ತಸತೀಪಾರಾಯಣ ನಡೆಯಿತು.

Pages