BUNTS NEWS, ಕಾಸರಗೋಡು: ಬಂಬ್ರಾಣ ಮನೆತನದ ಯಜಮಾನ
ಸ್ಥಾನದ ಉತ್ತರಾಧಿಕಾರಿಯಾಗಿ ಹಿರಿಯರಾದ ಮೋಹನದಾಸ್ ರೈ ಅವರು ಜ.30ರಂದು
ಅಧಿಕಾರ ಸ್ವೀಕರಿಸಲಿದ್ದಾರೆ.
ಬಂಟ ಸಮುದಾಯದ ಇತಿಹಾಸ
ಪ್ರಸಿದ್ದ ಬಂಬ್ರಾಣ ಮನೆತನದಲ್ಲಿ
ಯಜಮಾನರಾಗಿದ್ದ ಬಿ.ನಿತ್ಯಾನಂದ ಅಡ್ಯಂತಾಯರು ಇತ್ತೀಚೆಗೆ ನಿಧನರಾಗಿದ್ದರು. ಈ ಹಿನ್ನೆಲೆಯಲ್ಲಿ ಹಿರಿಯರಾದ
ಮೋಹನದಾಸ್ ರೈ ಅವರು ಯಜಮಾನರಾಗಿ ಅಧಿಕಾರ ಸ್ವೀಕರಿಸಲಿರುವರು.
ಅಧಿಕಾರ
ಸ್ವೀಕಾರ ಕಾರ್ಯಕ್ರಮವು ಜ.30ರ ಗುರುವಾರ
ವಿಧ್ಯುಕ್ತವಾಗಿ ಬಂಬ್ರಾಣ ಮನೆಯಲ್ಲಿ ನೆರವೇರಲಿರುವುದು.
ಆ ಪ್ರಯುಕ್ತ ಬೆಳಿಗ್ಗೆ 10 ಗಂಟೆಗೆ
ಗಣ ಹೋಮ ಹಾಗೂ ಇನ್ನಿತರ
ಧಾರ್ಮಿಕ- ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಮಧ್ಯಾಹ್ನ ಭೋಜನವನ್ನು ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.